Site icon Vistara News

Rohit Sharma : ಟೀಮ್ ಇಂಡಿಯಾದ ಕೊಳಕು ಆಟಗಾರರು ಯಾರೆಂದು ತಿಳಿಸಿದ ರೋಹಿತ್​ ಶರ್ಮಾ!

Rohit Sharma

ನವದೆಹಲಿ: ಹಾಸ್ಯನಟ ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಇಬ್ಬರು ಸಹ ಆಟಗಾರರು ಅತ್ಯಂತ ಕೊಳಕರು ಹಾಗೂ ಸೋಮಾರಿಗಳು ಎಂದು ಹೇಳಿದ್ದಾರೆ. ಅವರಿಬ್ಬರೂ ಮಧ್ಯಾಹ್ನ ತನಕ ನಿದ್ದೆ ಮಾಡುವವರು ಹಾಗೂ ಅವರಿಬ್ಬರೂ ವಾರಗಟ್ಟಲೆ ರೂಮ್ ಕ್ಲೀನ್​ ಮಾಡುವುದಿಲ್ಲ ಎಂಬುದಾಗಿಯೂ ಹೇಳಿದ್ದಾರೆ.

ರೋಹಿತ್ ಮತ್ತು ಶ್ರೇಯಸ್ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗವಹಿಸಿದ್ದರು. ಅವರ ಸಂಭಾಷಣೆ ಹೆಚ್ಚು ವೈರಲ್ ಆಗಿದೆ. ಶಿಖರ್ ಧವನ್ ಮತ್ತು ರಿಷಭ್ ಪಂತ್ ಅವರೊಂದಿಗೆ ರೂಮ್ ಶೇರ್ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಯಾಕೆಂದರೆ ಅವರಿಗೆ ಸ್ವಚ್ಛತೆಯ ಪರಿಪಾಠವಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

ಪಂತ್ ಮತ್ತು ಧವನ್ ಇಬ್ಬರೂ ಮೂರರಿಂದ ನಾಲ್ಕು ದಿನಗಳವರೆಗೆ ತಮ್ಮ ಕೋಣೆಗಳನ್ನು ಸ್ವಚ್ಛಗೊಳಿಸುವುದಿಲ್ಲ ಎಂದು ಹೇಳಿದರು. ರೋಹಿತ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಲ್ಲರೊಂದಿಗೂ ರೂಮ್​ ಶೇರ್ ಮಾಡಿಕೊಳ್ಳುತ್ತೇನೆ. ಆದರೆ ಇಬ್ಬರು ಸಹ ಆಟಗಾರರೊಂದಿಗೆ ಕೋಣೆಯನ್ನು ಹಂಚಿಕೊಳ್ಳುವುದಿಲ್ಲ. ಅವರೇ ಶಿಖರ್ ಧವನ್ ಮತ್ತು ರಿಷಭ್ ಪಂತ್​. ನಾನು ಎಂದಿಗೂ ರೂಮ್​ನಲ್ಲಿ ಉಳಿದುಕೊಳ್ಳುವುದಿಲ್ಲ. ಅಭ್ಯಾಸದ ನಂತರ ಅವರು ಹಾಸಿಗೆಯ ಮೇಲೆ ತಮ್ಮ ವಸ್ತುಗಳನ್ನು ಇಡುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದರು.

ಮಧ್ಯಾಹ್ನ ತನಕ ಮಲಗುತ್ತಾರೆ

ಅವರ ಕೋಣೆಗಳು ಯಾವಾಗಲೂ ಡೂ ನಾಟ್​ ಡಿಸ್ಟರ್ಬ್​ ಮೋಡ್​ನಲ್ಲಿರುತ್ತದೆ. ಏಕೆಂದರೆ ಅವರು ಮಧ್ಯಾಹ್ನ 1 ಗಂಟೆಯವರೆಗೆ ಎದ್ದೇಳುವುದಿಲ್ಲ . ಹೌಸ್ ಕೀಪಿಂಗ್ ಸಿಬ್ಬಂದಿ ಕೊಠಡಿಗಳನ್ನು ಸ್ವಚ್ಛಗೊಳಿಸಲು ಬಂದಾಗಲೂ ಅವರು ಎದ್ದೇಳುವುದಿಲ್ಲ. ಡಿಎನ್ ಡಿ ಮೋಡ್ ನಲ್ಲಿರುವುದರಿಂದ ಸಿಬ್ಬಂದಿ ಅವರಿಗೆ ತೊಂದರೆ ನೀಡುವುದಿಲ್ಲ. ಅದಕ್ಕಾಗಿಯೇ ಅವರ ಕೋಣೆಗಳು ಎಂದಿಗೂ ಕ್ರಮಬದ್ಧವಾಗಿರುವುದಿಲ್ಲ. ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಮಾತ್ರ ಸ್ವಚ್ಛವಾಗುತ್ತವೆ. ಹತ್ತಿರದಲ್ಲೇ ಇರುವ ಜನರಿಗೆ ಇದು ಸಮಸ್ಯೆಯಾಗುತ್ತದೆ. ನಾನು ಅವರೊಂದಿಗೆ ಇರಬಹುದೆಂದು ನಾನು ಎಂದಿಗೂ ಅಂದುಕೊಳ್ಳುವುದಿಲ್ಲ , “ಎಂದು ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ: Virat Kohli : ಐಪಿಎಲ್​ 2024ರ ಮೊದಲ ಶತಕ ಬಾರಿಸಿದ ಕೊಹ್ಲಿ; ಅವರ ಒಟ್ಟು ಐಪಿಎಲ್ ಶತಕಗಳೆಷ್ಟು?

ಐಸಿಸಿ ವಿಶ್ವಕಪ್ 2023 ರ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿನ ಬಗ್ಗೆ ಮಾತನಾಡಿದ ರೋಹಿತ್, ಅಭಿಮಾನಿಗಳಿಂದ ಕೋಪದ ಪ್ರತಿಕ್ರಿಯೆಗಳನ್ನು ಬರಬಹುದು ನಿರೀಕ್ಷಿಸಿದ್ದೆ. ಆದರೆ ಅವರು ಆಟಗಾರರ ಮೇಲೆ ಬೀರಿದ ಪ್ರೀತಿಯಿಂದ ಆಶ್ಚರ್ಯಚಕಿತನಾಗಿದ್ದೇನೆ ಎಂದು ಹೇಳಿದರು. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೆಗಾ ಫೈನಲ್​​ನಲ್ಲಿ ಸೋಲುವ ಮೊದಲು ಭಾರತವು ಸತತ 10 ಪಂದ್ಯಗಳನ್ನು ಗೆದ್ದಿತು.

Exit mobile version