Site icon Vistara News

Rohit Sharma : ಐಸಿಸಿ ಕೆಂಗಣ್ಣು; ಬ್ಯಾನ್ ಭೀತಿಯಲ್ಲಿ ರೋಹಿತ್ ಶರ್ಮಾ!

Rohit Sharma

ನವ ದೆಹಲಿ: ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮ (Rohit Sharma ) ಇದೇ ಪಂದ್ಯದ ವಿಚಾರಕ್ಕೆ ನಿರ್ಬಂಧಕ್ಕೆ ಒಳಪಡುವ ಅಥವಾ ದಂಡ ತೆರಬೇಕಾದ ಪರಿಸ್ಥಿತಿ ಎದುರಿಸಬಹುದು. ಪಂದ್ಯದ ಪಿಚ್ ಪರಿಸ್ಥಿತಿಗಳ ವಿಷಯದಲ್ಲಿ ಐಸಿಸಿ ಮತ್ತು ಮ್ಯಾಚ್ ರೆಫರಿಗಳ ದ್ವಂದ್ವ ಮಾನದಂಡಗಳ ಬಗ್ಗೆ ರೋಹಿತ್​ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಐಸಿಸಿ ವಿರುದ್ಧ ಹೇಳಿಕೆಯಾಗಿರುವ ಕಾರಣ ಅವರಿಗೆ ದಂಡದ ಬಿಸಿ ತಟ್ಟಲಿದೆ. ಒಂದು ವೇಳೆ ಕೆಲವು ಪಂದ್ಯಗಳ ನಿರ್ಬಂಧವೂ ಆಗಲಿದೆ.

ಬಾಕ್ಸಿಂಗ್ ಡೇ ಟೆಸ್ಟ್ 3 ನೇ ದಿನದಂದು ಕೊನೆಗೊಂಡರೆ, ಕೇಪ್ ಟೌನ್ ನಲ್ಲಿ ನಡೆದ ಹೊಸ ವರ್ಷದ ಟೆಸ್ಟ್ ಪಂದ್ಯ 1.5 ದಿನಗಳಲ್ಲಿ ಕೊನೆಗೊಂಡಿತು. ಮೊದಲ ದಿನವೇ ವೇಗಿಗಳು 23 ವಿಕೆಟ್ ಗಳನ್ನು ಪಡೆದಿದ್ದರು. ಸಹಜವಾಗಿಯೇ ಪಿಚ್ ಪರಿಸ್ಥಿತಿಗಳ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತ್ತು.

ಕೇಪ್ಟೌನ್ನಲ್ಲಿ ನಡೆದ ಗೆಲುವಿನ ನಂತರ ರೋಹಿತ್ ಶರ್ಮಾ ಐಸಿಸಿಗೆ ತಿರುಗೇಟು ನೀಡಿದ್ದರು. ಭಾರತದಲ್ಲಿ ಬಂದು ಆಡುವಾಗ ಇತರರು ಬಾಯಿ ಮುಚ್ಚಿಕೊಂಡು ಇರುವವರೆಗೆ ಅಂತಹ ಪಿಚ್​ಗಳಲ್ಲಿ ಆಡಲು ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಪಂದ್ಯಗಳು ನಡೆದಾಗ ಪಿಚ್​ಗಳನ್ನು ಟೀಕಿಸುವವರ ಬಗ್ಗೆ ರೋಹಿತ್​ ಬೇಸರ ವ್ಯಕ್ತಪಡಿಸಿದ್ದರು. ಈ ಮೂಲಕ ಐಸಿಸಿಯ ಬೂಟಾಟಿಕೆ ಮತ್ತು ದ್ವಂದ್ವ ನೀತಿಗಳ ಬಗ್ಗೆ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : Ind vs Aus : ಭಾರತ ವನಿತೆಯರ ತಂಡಕ್ಕೆ 2ನೇ ಪಂದ್ಯದಲ್ಲಿ ಸೋಲು, ಸರಣಿ 1-1 ಸಮಬಲ

ಈ ಟೆಸ್ಟ್ ಪಂದ್ಯದಲ್ಲಿ ಏನಾಯಿತು ಮತ್ತು ಪಿಚ್ ಹೇಗೆ ವರ್ತಿಸಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಎಲ್ಲಿಯವರೆಗೆ ಪ್ರತಿಯೊಬ್ಬರೂ ಬಾಯಿ ಮುಚ್ಚಿಕೊಂಡು ಭಾರತೀಯ ಪಿಚ್​ಗಳ ಬಗ್ಗೆ ಮಾತನಾಡುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಪಿಚ್​ಗಳಲ್ಲಿ ಆಡಲು ನನಗೆ ಸಮಸ್ಯೆಯಿಲ್ಲ ” ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದ್ದರು.

ಅದುವೇ ನನ್ನ ಅಭಿಪ್ರಾಯ ಮತ್ತು ನಾನು ಅದಕ್ಕೆ ಬದ್ಧನಾಗಿರುತ್ತೇನೆ. ನಾನು ಸಾಕಷ್ಟು ಕ್ರಿಕೆಟ್ ನೋಡಿದ್ದೇನೆ ಮತ್ತು ಈ ಮ್ಯಾಚ್ ರೆಫರಿಗಳು ಮತ್ತು ಐಸಿಸಿ ಈ ರೇಟಿಂಗ್​ಗಳನ್ನು ಹೇಗೆ ಕೊಡುತ್ತದೆ ಎಂಬುದರ ಬಗ್ಗೆ ಸಾಕಷ್ಟು ನೋಡಿದ್ದೇನೆ. ನೀವು ಹೇಗೆ ರೇಟ್ ಮಾಡುತ್ತೀರಿ ಎಂಬುದರ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಯಾವಾಗಲೂ ಒಂದೇ ರೀತಿ ಇರಬೇಕು ಎಂದು ರೋಹಿತ್ ಹೇಳಿದ್ದರು.

ಈ ಹೇಳಿಕೆಯ ಕಾರಣಕ್ಕೆ ಶರ್ಮಾ ದೊಡ್ಡ ತೊಂದರೆಗೆ ಸಿಲುಕಬಹುದು. ಭಾರತ ಕ್ರಿಕೆಟ್ ತಂಡದ ನಾಯಕನ ಕೋಪಕ್ಕೆ ಐಸಿಸಿ ದಂಡ ವಿಧಿಸಬಹುದು. ಮತ್ತೊಂದೆಡೆ, ಐಸಿಸಿ ನ್ಯೂಲ್ಯಾಂಡ್ಸ್ ಪಿಚ್ಗೆ ಡಿಮೆರಿಟ್​ ಪಾಯಿಂಟ್​ಗಳನ್ನು ನೀಡುವ ಸಾಧ್ಯತೆಯಿದೆ.

Exit mobile version