ಡಬ್ಲಿನ್ : ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ2೦ (IND-IRE T20) ಪಂದ್ಯದಲ್ಲಿ ಹಾರ್ದಿಕ್ ಪಡೆ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆರಂಭದಲ್ಲಿ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯ ವಿಳಂಬವಾಗಿ ಆರಂಭವಾಯಿತು. ಹೀಗಾಗಿ 20 ಓವರ್ ಪಂದ್ಯವನ್ನು 12 ಓವರ್‌ಗಳಿಗೆ ಕಡಿತ ಮಾಡಲಾಯಿತು. ಐರ್ಲೆಂಡ್ ನೀಡಿದ ೧೦೯ ರನ್ ಲಕ್ಷ್ಯ ಬೇಧಿಸಿದ ಭಾರತ ತಂಡ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್ ತಂಡಕ್ಕೆ ಆರಂಂಭಿಕ ಆಘಾತ ಉಂಟಾಯಿತು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್‌ನಲ್ಲೇ ಆಂಡ್ರೂ ಬಲ್ಬಿರ್ನಿ ಡಕ್‌ಔಟ್ ಆದರು. ಗ್ಯಾರಿ ಡೆಲಾನಿ(8), ಪಾಲ್ ಸ್ಟಿರ್ಲಿಂಗ್(4) ಕೂಡ ಬೇಗ ಪೆವಿಲಿಯನ್ ಸೇರಿಕೊಂಡರು. ಹ್ಯಾರಿ ಟೆಕ್ಟಾರ್ ಔಟಾಗದೆ 64 (33 ಎಸೆತ, 6 ಫೋರ್, 3 ಸಿಕ್ಸರ್), ಲೊರ್ಕಾನ್ ಟಕ್ಕರ್ ನಾಟೌಟ್ 18(16 ಎಸೆತ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿತು.
109 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ಇಶಾನ್ ಕಿಷನ್ 26(11), ದೀಪಕ್ ಹೂಡ ಔಟಾಗದೆ 47 (೨೯) ರನ್‌ಗಳಿಸಿದರು. ಕ್ರೆಯಿಗ್ ಯಂಗ್ ಹಾಕಿದ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಶಾನ್ ಕಿಶನ್ ಬೌಲ್ಡ್ ಆದರು. ನಂತರದ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್(0) ಡಕ್‌ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯ 24(12), ದಿನೇಶ್ ಕಾರ್ತಿಕ್ ನಾಟೌಟ್ 5 (೪) ಭಾರತ 9.2 ಓವರ್‌ಗಳಲ್ಲಿ 111 ಬಾರಿಸುವ ಮೂಲಕ ಗೆಲುವು ಪಡೆಯುವಂತೆ ನೋಡಿಕೊಂಡರು.
ಇದನ್ನೂ ಓದಿ | Team India ಹಿಟ್ಟರ್ ರೋಹಿತ್ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ