Site icon Vistara News

CWG-2022 | ಮಹಿಳೆಯರ ಹಾಕಿ ತಂಡಕ್ಕೆ ಭರ್ಜರಿ ಜಯ

CWG-2022

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ದುರ್ಬಲ ಘಾನಾ ತಂಡದ ಎದುರು ೫-೦ ಗೋಲ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸವಿತಾ ಪೂನಿಯಾ ನೇತೃತ್ವದ ಭಾರತ ತಂಡದ ಪದಕದ ಕಡೆಗಿನ ಹಾದಿಯಲ್ಲಿ ಒಂದು ಹೆಜ್ಜೆ ಮುನ್ನಡೆ ಲಭಿಸಿದೆ.

ಆರಂಭದಿಂದಲೂ ಪ್ರಭಾವಶಾಲಿ ಪ್ರದರ್ಶನ ನೀಡಿದ ಭಾರತ ತಂಡ, ಮೂರನೇ ಕ್ವಾರ್ಟರ್‌ ವೇಳೆಗೆ ೪-೦ ಮುನ್ನಡೆಯನ್ನು ಹೊಂದಿತ್ತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಮಿಡ್‌ ಫೀಲ್ಡರ್‌ ಸಲಿಮಾ ಟೆಟೆ ಮತ್ತೊಂದು ಗೋಲ್‌ ಬಾರಿಸುವ ಮೂಲಕ ಗೆಲುವಿನ ಅಂತರವನ್ನು ಹಿಗ್ಗಿಸಿದರು.

ಸವಿತಾ ಪೂನಿಯಾ ನೇತೃತ್ವದ ಭಾರತ ತಂಡ ಶನಿವಾರವೂ ಕಣಕ್ಕೆ ಇಳಿಯಲಿದೆ. ಶನಿವಾರ ವೇಲ್ಸ್‌ ತಂಡಕ್ಕೆ ಎದುರಾಗಲಿದೆ. ಘಾನಾ ದೇಶದ ತಂಡಕ್ಕೆ ಹೋಲಿಕೆ ಮಾಡಿದರೆ ವೇಲ್ಸ್‌ ಸ್ವಲ್ಪ ಬಲಿಷ್ಠ ತಂಡ. ಆದಾಗ್ಯೂ ವಿಮೆನ್‌ ಇನ್‌ ಬ್ಯ್ಲೂ ಗೆಲುವಿನ ಫೇವೆರಿಟ್‌ ತಂಡವಾಗಿದೆ.

ಇದನ್ನೂ ಓದಿ | CWG-2022 | ಮಹಿಳೆಯರ ಟಿಟಿ ತಂಡದ ಶುಭಾರಂಭ

Exit mobile version