ಮೀರ್ಪುರ್ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (INDvsBAN) ಎರಡನೇ ಪಂದ್ಯದ ಮೊದಲ ದಿನ ಭಾರತ ತಂಡ ಮೇಲುಗೈ ಸಾಧಿಸಿದ್ದು 227 ರನ್ಗಳಿಗೆ ಆತಿಥೇಯ ತಂಡವನ್ನು ಕಟ್ಟಿ ಹಾಕಿದೆ. ದಿನದಂತ್ಯಕ್ಕೆ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 19 ರನ್ ಬಾರಿಸಿದ್ದು, ಶುಬ್ಮನ್ ಗಿಲ್ (14) ಹಾಗೂ ಕೆ. ಎಲ್ ರಾಹುಲ್ 3 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ ಇನ್ನೂ 208 ರನ್ಗಳ ಹಿನ್ನಡೆಯಲ್ಲಿದೆ.
ಇಲ್ಲಿನ ಶೇರ್ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಗುರುವಾರ ಆರಂಭಗೊಂಡ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಬಳಗ ಆರಂಭದಲ್ಲಿ ಪ್ರತಿರೋಧ ಒಡ್ಡಿತಾದರೂ ಬಳಿಕ ನಿರಂತರವಾಗಿ ವಿಕೆಟ್ ಕಳೆಕೊಂಡು 73.5 ಓವರ್ಗಳಲ್ಲಿ ಇನಿಂಗ್ಸ್ ಮುಗಿಸಿತು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಮೊಮಿನುಲ್ ಹಕ್ 84 ರನ್ ಬಾರಿಸಿದರೆ, ಮುಷ್ಫಿಕರ್ ರಹೀಮ್ (26), ಲಿಟನ್ ದಾಸ್ (25), ನಜ್ಮುಲ್ ಹೊಸೈನ್ (24) ತಮ್ಮ ಕೊಡುಗೆ ಕೊಟ್ಟರು.
ಭೋಜನ ವಿರಾಮಕ್ಕೆ ಮೊದಲು 28 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 82 ರನ್ ಗಳಿಸಿದ್ದ ಬಾಂಗ್ಲಾ ಪಡೆ, ಚಹಾ ವಿರಾಮಕ್ಕೆ ಮೊದಲು 57 ಓವರ್ಗಳಲ್ಲಿ 5 ವಿಕೆಟ್ಗೆ 184 ರನ್ ಗಳಿಸಿತು. ಮೂರನೇ ಅವಧಿಯಲ್ಲಿ 26 ಓವರ್ಗಳಲ್ಲಿ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಜಯದೇವ್ ಉನಾದ್ಕಟ್ 50 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ | Kuldeep Yadav | ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ ಕುಲ್ದೀಪ್ ಯಾದವ್ ಸಾಧನೆಗಳಿವು