Site icon Vistara News

Ind vs Eng : ದೌರ್ಬಲ್ಯ ಮೀರಿ ಆಡಿದರಷ್ಟೇ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ind vs eng

ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ (Ind vs Eng) ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಹೈದರಾಬಾದ್​ನಲ್ಲಿ ನಡೆದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಭಾರತವು ಕೇವಲ 28 ರನ್​ಗಳಿಂದ ಸೋತಿರಬಹುದು. ಆದರೆ ಇದು ಅನನುಭವಿ ಇಂಗ್ಲೆಂಡ್ ಬೌಲಿಂಗ್ ತಂಡಕ್ಕೆ ಹೆಚ್ಚು ವಿಶ್ವಾಸ ಗಳಿಸುವಂತೆ ಮಾಡಿದೆ.

ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್​ನ ಯುವ ಆಟಗಾರರಾದ ಒಲಿ ಪೋಪ್ ಮತ್ತು ಟಾಮ್ ಹಾರ್ಟ್ಲೆ ಭಾರತ ತಂಡಕ್ಕೆ ಸೋಲುಣಿಸಿದರು. ಒಬ್ಬರು ಕೇವಲ 26 ವರ್ಷ ವಯಸ್ಸಿನಲ್ಲಿ ಇಂಗ್ಲೆಂಡ್​ನ ಉಪನಾಯಕರಾಗಿದ್ದಾರೆ ಮತ್ತು ಇನ್ನೊಬ್ಬರು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇವರಿಬ್ಬರು ಆಟದ ಎರಡನೇ ಇನಿಂಗ್ಸ್​​ನಲ್ಲಿ ಅತ್ಯುತ್ತಮ ವೈಯಕ್ತಿಕ ಪ್ರದರ್ಶನವನ್ನು ನೀಡಿದರು. ಕಳೆದ ದಶಕದಲ್ಲಿ ನಾಲ್ಕನೇ ಬಾರಿಗೆ ಮಾತ್ರ ಭಾರತವನ್ನು ತವರಿನಲ್ಲಿ ಶರಣಾಗುವಂತೆ ಮಾಡಿದರು.

ಆತಿಥೇಯರು ಎರಡನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡಲು ಬಯಸಿದ್ದಾರೆ. ಆದರೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಗಾಯಗಳಿಂದಾಗಿ ಅವರು ಮುಂಬರುವ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದು ದೊಡ್ಡ ಹಿನ್ನಡೆಯಾಗಿದೆ. ಮೂವರು ಯುವ ‘ಆಟಗಾರರನ್ನು ತಂಡಕ್ಕೆ ಸೇರಿಸಲಾಗಿದ್ದು, ಅವರಲ್ಲಿ ಕನಿಷ್ಠ ಒಬ್ಬರು ಪಾದಾರ್ಪಣೆ ಮಾಡುವ ಭರವಸೆ ಇದೆ. ಇತ್ತೀಚಿನ ದಿನಗಳಲ್ಲಿ ಭಾರತದ ಟೆಸ್ಟ್ ಕ್ರಿಕೆಟ್​ನಲ್ಲಿ ಅಪ್ರತಿಮ ಪ್ರದರ್ಶನ ಪ್ರಕಟವಾಗಿತ್ತು ಆಸ್ಟ್ರೇಲಿಯಾದಲ್ಲಿ. ಅನನುಭವಿ ಭಾರತೀಯ ತಂಡದಿಂದ ಅದು ಮೂಡಿ ಬಂದಿತ್ತು. ಇದು ಆಸ್ಟ್ರೇಲಿಯಾವನ್ನು ಅವರ ಸ್ವಂತ ಕೋಟೆಯಾದ ಗಬ್ಬಾದಲ್ಲಿ ಸೋಲುವಂತೆ ಮಾಡಿತ್ತು.

ಸಂಭಾವ್ಯ ಪದಾರ್ಪಣೆಗಳು

ಗಾಯಗೊಂಡಿರುವ ಇಬ್ಬರು ಸ್ಟಾರ್ ಆಟಗಾರರ ಬದಲಿಗೆ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್ ಅವರನ್ನು ಭಾರತ ತಂಡ ಹೆಸರಿಸಲಾಗಿದೆ. ಆದಾಗ್ಯೂ ರಜತ್ ಪಾಟಿದಾರ್ ಮತ್ತು ಧ್ರುವ್ ಜುರೆಲ್ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಸೇರಿಸುವ ಸಾಧ್ಯತೆಗಳಿವೆ. ಈ 5 ಆಟಗಾರರಲ್ಲಿ ಕನಿಷ್ಠ ಒಬ್ಬರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ವೈಜಾಗ್​ನಲ್ಲಿ ಆಡುವುದು ಖಚಿತವಾಗಿದೆ. ಯಾರು ಆಡಬೇಕು ಎಂಬ ಬಗ್ಗೆ ಭಾರತೀಯ ಮ್ಯಾನೇಜ್ಮೆಂಟ್ ಅವರ ಮುಂದೆ ಕಠಿಣ ತೆಗೆದುಕೊಳ್ಳಲಿದೆ.

ಇದನ್ನೂ ಓದಿ : Ind vs Eng : ಭಾರತ ವಿರುದ್ಧದ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್​ ತಂಡ ಪ್ರಕಟ

ಸುಂದರ್ ಅವರ ಸೇರ್ಪಡೆಯು ರವೀಂದ್ರ ಜಡೇಜಾ ಅವರ ಬದಲಿಯಂತೆ ಇರುತ್ತದೆ. ಕುಲದೀಪ್ ಯಾದವ್ ಅಥವಾ ಸೌರಭ್ ಕುಮಾರ್ ಅವರಿಗಿಂತ ಮುಂಚಿತವಾಗಿ ಅವರಿಗೆ ಅವಕಾಶ ನೀಡಬಹುದು ಎಂಬ ತರ್ಕವಿದೆ. ರಾಹುಲ್ ಅನುಪಸ್ಥಿತಿಯಿಂದಾಗಿ ಬ್ಯಾಟರ್​ ಒಬ್ಬರನ್ನು ಅನ್ನು ಮಧ್ಯಮ ಕ್ರಮಾಂಕದಲ್ಲಿ ಸೇರಿಸಬೇಕಾಗಿದೆ. 2 ನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಅಥವಾ ಪಾಟೀದಾರ್ ಪಾದಾರ್ಪಣೆ ಮಾಡುತ್ತಾರೆ ಎಂದೇ ನಿರೀಕ್ಷಿಸಬಹುದು.

ಇಂಗ್ಲೆಂಡ್ ತಂಡವು ಜ್ಯಾಕ್ ಲೀಚ್ ಅವರ ಸೇವೆಗಳನ್ನು ಪಡೆಯುತ್ತಿಲ್ಲ. ಅವರು ಗಾಯದಿಂದಾಗಿ ಆಡುತ್ತಿಲ್ಲ. ಪಿಚ್ ಅನ್ನು ಅವಲಂಬಿಸಿ, ತಂಡವು ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್​ ಅವರನ್ನ ಆಯ್ಕೆ ಮಾಡಲಿದೆ. ಹೊಸ ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಪರಿಗಣಿಸಿದೆ.

ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳು

ಟೆಸ್ಟ್ ಪಂದ್ಯದುದ್ದಕ್ಕೂ ಮೋಡ ಕವಿದ ವಾತಾವರಣವಿರಲಿದೆ ಎಂದು ನಿರೀಕ್ಷಿಸಲಾಗಿದೆ ಆದರೆ ಒಣ ಹವೆಯಿರುತ್ತದೆ. ವೈಜಾಗ್​ನಲ್ಲಿಯೂ ನಿಧಾನಗತಿಯ ಪಿಚ್​ ಅನ್ನು ನಿರೀಕ್ಷಿಸಬಹುದು. ಇದು ಬ್ಯಾಟರ್​ಗಳಿಗೆ ಸ್ವಲ್ಪ ನಿರಾಶಾದಾಯಕವಾಗಬಹುದು. ಇಂಗ್ಲೆಂಡ್ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ ಅವರು ಟ್ರ್ಯಾಕ್ ಹೈದರಾಬಾದ್​ ಗಿಂತ ಸ್ವಲ್ಪ ಹಸಿರಾಗಿ ಕಾಣುತ್ತದೆ. ದಿನವಿಡೀ ವೇಗಿಗಳಿಗೆ ಸ್ವಲ್ಪ ಹೆಚ್ಚು ಸಹಾಯ ಮಾಡುತ್ತದೆ ಎಂದು ಲೆಕ್ಕಹಾಕಿದ್ದಾರೆ.

ಶ್ರೇಯಸ್ ಮತ್ತು ಶುಬ್ಮನ್ ಮೇಲೆ ಗಮನ

ಭಾರತದ ಬ್ಯಾಟರ್​ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಫಾರ್ಮ್​ ಕಳಪೆಯಾಗಿದೆ. ಇವರಿಬ್ಬರು ವಿಶಾಖಪಟ್ಟಣಂನಲ್ಲಿ ಫಾರ್ಮ್​ಗೆ ಮರಳಬೇಕಾಗಿದೆ. ಇಲ್ಲದಿದ್ದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡುವ ಸಾಧ್ಯತೆಯಿದೆ.

ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಇಬ್ಬರೂ ಬ್ಯಾಟರ್​​ಗೆ ಸ್ವಲ್ಪ ತಾಳ್ಮೆಯಿಂದಿರಲು ಎಲ್ಲರಿಗೂ ಸೂಚಿಸಿದ್ದಾರೆ, ಭಾರತವು ದುರ್ಬಲವಾಗಿ ಕಾಣುತ್ತದೆ. ಆದಾಗ್ಯೂ ಭಾರತ ತಂಡ ಮ್ಯಾಜಿಕ್​ ಮಾಡಬಹುದು ಎಂಬ ವಿಶ್ವಾಸ ಇದ್ದೇ ಇದೆ.

Exit mobile version