ಕರಾಚಿ: ಏಷ್ಯಾಕಪ್ನಲ್ಲಿ(Asia Cup 2023) ಪಾಕಿಸ್ತಾನ(IND vs PAK) ತಂಡವನ್ನು(IND vs PAK) ಫೈನಲ್ ರೇಸ್ನಿಂದ ಹೊರ ಹಾಕಲು ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್ ನಡೆಸುತ್ತಿದೆ ಎಂದು ಹೇಳಿದ ನೆಟ್ಟಿಗರೊಬ್ಬರಿಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar) ಸರಿಯಾಗಿ ಜಾಡಿಸಿದ್ದಾರೆ. ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದಾರೆ.
ಮರುಕಳಿಸಿದರೆ ಹುಷಾರ್…
ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಅಥವಾ ಇದಕ್ಕೆ ಸಂಬಂಧಿಸಿ ಮೀಮ್ಸ್ಗಳನ್ನು ಹರಿ ಬಿಟ್ಟರೆ ಹುಷಾರ್ ಎಂದು ಶೋಯೆಬ್ ಅಖ್ತರ್ ನೆಟ್ಟಿಗರಿಗೆ ಕ್ಲಾಸ್ ತೆದುಕೊಂಡಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, “ಹಲವು ನೆಟ್ಟಿಗರು ಮತ್ತು ಪಾಕ್ ಅಭಿಮಾನಿಗಳು ನನ್ನಗೆ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಪಾಕಿಸ್ತಾನ ಫೈನಲ್ ಪ್ರವೇಶಿಸಬಾರದು ಎಂದು ಭಾರತ ತಂಡ ಶ್ರೀಲಂಕಾ ವಿರುದ್ಧ ಸೋಲು ಕಾಣಲಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಆಟಗಾರರು ಸತತವಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ ಎಂದು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆದರೆ ಇದೊಂದು ಅಸಂಬದ್ಧ ಪ್ರಶ್ನೆ. ಅಷ್ಟಕ್ಕೂ ಭಾರತ ಏಕೆ ಲಂಕಾ ವಿರುದ್ಧ ಸೋಲಬೇಕು ಗೆದ್ದರೆ ಅವರು ಫೈನಲ್ಗೆ ಪ್ರವೇಶ ಪಡೆಯಲಿದ್ದಾರೆ. ಹೀಗಿರುವಾಗ ಈ ಪ್ರಶ್ನೆಯನ್ನು ಯಾವ ಅರ್ಥದಲ್ಲಿ ಕೇಳಿದ್ದೀರ’? ಎಂದು ಜಾಡಿಸಿದ್ದಾಗಿ ನಡೆದ ಘಟನೆಯನ್ನು ಅಖ್ತರ್ ಹೇಳಿದರು.
ಕುಲ್ದೀಪ್, ಬುಮ್ರಾಗೆ ಮೆಚ್ಚುಗೆ
ಸಣ್ಣ ಮೊತ್ತವನ್ನು ಹಿಡಿದು ನಿಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ಬೌಲರ್ಗಳಾದ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾಗೆ ಅಖ್ತರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಶ್ರೇಷ್ಠ ಮಟ್ಟದ ಬೌಲಿಂಗ್ ಹೊಂದಿದೆ, ಇಲ್ಲವಾದರೆ ಈ ಮೊತ್ತವನ್ನು ಹಿಡಿದು ನಿಲ್ಲಸಲು ಅಸಾಧ್ಯವಾಗುತ್ತಿತ್ತು ಎಂದು ಹೇಳಿದರು.
’ನಾನು ಈ ಹಿಂದೆ ಹೇಳಿದಂತೆ ಜಸ್ಪ್ರೀತ್ ಬುಮ್ರಾ ಅವರು ಭಾರತ ತಂಡಕ್ಕೆ ಮರಳಿದರೆ ತಂಡ ಹೆಚ್ಚು ಸಮತೋಲಿತ ಮತ್ತು ಬಲಿಷ್ಠಗೊಳ್ಳಲಿದೆ ಎನ್ನುವುದಕ್ಕೆ ಲಂಕಾ ವಿರುದ್ಧದ ಪ್ರದರ್ಶನವೇ ಸಾಕ್ಷಿ. ವಿಶ್ವಕಪ್ನಲ್ಲಿಯೂ ಅವರು ಎಲ್ಲ ತಂಡಗಳಿಗೆ ತಲೆನೋವಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನ ಬೇಡ. ಅದರಲ್ಲೂ ತವರಿನಲ್ಲಿ ಬುಮ್ರಾ ಎಷ್ಟು ಘಾತಕ ಎನ್ನುವುದುದನ್ನು ನಾವು ಈಗಾಗಕೇ ಐಪಿಎಲ್ ಸೇರಿ ಅನೇಕ ದ್ವಿಪಕ್ಷೀಯ ಸರಣಿಯಲ್ಲಿ ಕಂಡಿದ್ದೇವೆ’ ಎಂದು ಅಖ್ತರ್ ಹೇಳಿದರು.
ಇದನ್ನೂ ಓದಿ IND vs SL: ಸೋಲಿನ ನಿರಾಸೆಯಲ್ಲಿ ಭಾರತದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಲಂಕಾ ಅಭಿಮಾನಿಗಳು
ಅಸಮಾಧಾನ ಹೊರ ಹಾಕಿದ್ದ ಕೋಚ್
ಸೋಮವಾರ ನಡೆದಿದ್ದ ಸೂಪರ್ -4 ಪಂದ್ಯದಲ್ಲಿ ಭಾರತ(IND vs PAK) ವಿರುದ್ಧ ಪಾಕಿಸ್ತಾನ ಅತ್ಯಂತ ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದಕ್ಕೆ ಆಟಗಾರರ ಬಗ್ಗೆ ತಂಡದ ಕೋಚ್ ಗ್ರಾಂಟ್ ಬ್ರಾಡ್ಬರ್ನ್(Grant Bradburn) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಹೆಸರಿಗೆ ಮಾತ್ರ ವಿಶ್ವದ ಶ್ರೇಷ್ಠ ತಂಡ ಆದರೆ ಪ್ರದರ್ಶನ ಮಾತ್ರ ತೀರ ಕಳಪೆ ಎಂದು ಆಟಗಾರರನ್ನು ಹೀಯಾಳಿದ್ದರು. ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯಮೋಘ ನಿರ್ವಹಣೆ ತೋರಿ ಪಾಕಿಸ್ತಾನ ವಿರುದ್ಧ ದಾಖಲೆಯ 228 ರನ್ಗಳ ಭಾರಿ ಗೆಲುವು ಸಾಧಿಸಿತ್ತು.