ಮೀರ್‌ಪುರ್: ರಿಷಭ್ ಪಂತ್ (93) ಹಾಗೂ ಶ್ರೇಯಸ್ ಅಯ್ಯರ್ (87) ಅಮೂಲ್ಯ ಅರ್ಧಶತಕದ ನೆರವಿನಿಂದಾಗಿ ಭಾರತ ತಂಡವು ಬಾಂಗ್ಲಾದೇಶ ತಂಡದ ವಿರುದ್ಧದ ಎರಡನೇ ಟೆಸ್ಟ್‌ನ (IND Vs BNG) ಮೊದಲ ಇನಿಂಗ್ಸ್‌ನಲ್ಲಿ 314 ರನ್‌ಗಳಿಗೆ ಆಲೌಟ್ ಆಗಿದೆ. ಹಾಗೆಯೇ, 87 ರನ್‌ಗಳ ಮುನ್ನಡೆ ಪಡೆದಿದೆ.
ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 227 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೆ.ಎಲ್.ರಾಹುಲ್ (10), ಶುಭ್‌ಮನ್ ಗಿಲ್ (20), ಚೇತೇಶ್ವರ ಪೂಜಾರ (24) ಹಾಗೂ ವಿರಾಟ್ ಕೊಹ್ಲಿ (24) ಬೇಗನೆ ವಿಕೆಟ್ ಒಪ್ಪಿಸಿದರು.
ಇಂತಹ ಸಂದರ್ಭದಲ್ಲಿ ಜತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್, ತಂಡವನ್ನು ಅಪಾಯದಿಂದ ಪಾರು ಮಾಡಿದರು. ಅಲ್ಲದೆ, ಮುನ್ನಡೆ ಕೂಡ ಪಡೆಯಲು ನೆರವಾಯಿತು. ಆದರೆ, ಇಬ್ಬರೂ ಶತಕದ ಸನಿಹದಲ್ಲಿ ಔಟ್ ಆಗಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು. ಬಾಂಗ್ಲಾ ಪರ ಶಕೀಬ್ ಹಾಗೂ ತೈಜುಲ್ ಇಸ್ಲಾಂ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. 87 ರನ್‌ಗಳ ಹಿನ್ನಡೆಯೊಂದಿಗೆ ಬಾಂಗ್ಲಾ ಎರಡನೇ ಇನಿಂಗ್ಸ್ ಆರಂಭಿಸಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾ ಮೊದಲ ಇನಿಂಗ್ಸ್ 227
ಭಾರತ ಮೊದಲ ಇನಿಂಗ್ಸ್ 314
(ರಿಷಭ್ ಪಂತ್ 93, ಶ್ರೇಯಸ್ ಅಯ್ಯರ್ 87, ತೈಜುಲ್ ಇಸ್ಲಾಂ 74/4)
ಇದನ್ನೂ ಓದಿ | IPL Auction 2023 | ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು; ಸನ್‌ರೈಸರ್ ಪಾಲಾದ ಮಯಾಂಕ್