Site icon Vistara News

India vs Netherlands | ನೆದರ್ಲೆಂಡ್ಸ್​ವಿರುದ್ಧದ ಹಣಾಹಣಿಯಲ್ಲಿ ಟಾಸ್‌ ಗೆದ್ದ ಭಾರತ ತಂಡದಿಂದ ಬ್ಯಾಟಿಂಗ್‌ ಆಯ್ಕೆ

t20

ಸಿಡ್ನಿ: ಐಸಿಸಿ ಟಿ20 ವಿಶ್ವ ಕಪ್ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿದ ಭಾರತ ಕ್ರಿಕೆಟ್ ತಂಡ, ದ್ವಿತೀಯ ಪಂದ್ಯದಲ್ಲಿ ನೆದರ್ಲೆಂಡ್ಸ್​ ತಂಡದ(India vs Netherlands) ವಿರುದ್ಧ ಟಾಸ್​ ಗೆದ್ದಿದ್ದು, ಮೊದಲು ಬ್ಯಾಟ್‌ ಮಾಡಲು ಮುಂದಾಗಿದೆ. ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆ ಈ ಪಂದ್ಯವನ್ನೂ ಗೆಲ್ಲುವ ಯೋಜನೆಯಲ್ಲಿದೆ. ಅತ್ತ ನೆದರ್ಲೆಂಡ್ಸ್​ ತಂಡ ಕೂಟದ ಮೊದಲ ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿದಿದೆ. ಭಾರತ ತಂಡ ಪಾಕ್‌ ವಿರುದ್ಧ ಆಡಿರುವ ತಂಡವನ್ನೇ ಕಣಕ್ಕೆ ಇಳಿಸಿದ್ದು ಯಾವುದೇ ಬದಲಾವಣೆ ಮಾಡಿಲ್ಲ.

ಪಿಚ್​ ರಿಪೋರ್ಟ್​: ಈ ಪಿಚ್​ ಹೆಚ್ಚಾಗಿ ಸ್ಪಿನ್​ ಬೌಲಿಂಗ್​ಗೆ ನೆರವಾಗಲಿದೆ. ಟಿ20 ವಿಶ್ವ ಕಪ್​ನ ಉದ್ಘಾಟನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ ತಂಡದ ಸ್ಪಿನ್ನರ್​ಗಳು ಮೇಲುಗೈ ಸಾಧಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ಉಭಯ ತಂಡಗಳು ಸ್ಪಿನ್​ ಅಸ್ತ್ರವನ್ನು ಬಳಸುವುದು ಖಚಿತ. ಉಳಿದಂತೆ ಬ್ಯಾಟರ್​ಗಳಿಗೂ ಈ ಪಿಚ್​ ನೆರವಾಗಲಿದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್​ದೀಪ್​ ಸಿಂಗ್.

ನೆದರ್ಲೆಂಡ್ಸ್​ ತಂಡ

ಸ್ಕಾಟ್‌ ಎಡ್ವರ್ಡ್ಸ್‌ (ನಾಯಕ), ಮ್ಯಾಕ್ಸ್‌ ಒ’ಡಾವ್ಡ್‌, ವಿಕ್ರಮ್‌ಜೀತ್​ ಸಿಂಗ್, ಬಾಸ್‌ ಡೆ ಲೀಡೆ, ಕಾಲಿನ್‌ ಅಕೆರ್ಮನ್‌, ಟಾಮ್‌ ಕೂಪರ್‌, ಟಿಮ್‌ ಪ್ರಿಂಗಲ್, ಟಿಮ್‌ ವ್ಯಾನ್‌ ಡೆರ್‌ ಗಟೆನ್‌, ಫ್ರೆಡ್‌ ಕ್ಲಾಸೆನ್‌, ಪಾಲ್‌ ವ್ಯಾನ್‌ ಮೀಕೆರೆನ್‌, ಶಾರಿಝ್‌ ಅಹ್ಮದ್‌/ ರಾಲ್ಫ್‌ ವ್ಯಾನ್‌ ಡೆರ್‌ ಮೆರ್ವ್‌.

ಇದನ್ನೂ ಓದಿ | IND | ನೆಟ್‌ ಪ್ರಾಕ್ಟೀಸ್‌ ಮೊಟಕುಗೊಳಿಸಿ ಐಸಿಸಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಟೀಮ್​ ಇಂಡಿಯಾ

Exit mobile version