ದುಬೈ : ಭಾರತ ಹಾಗೂ ಪಾಕಿಸ್ತಾನ ನಡುವೆ ಸೆಪ್ಟೆಂಬರ್ ೪ರಂದು ಏಷ್ಯಾ ಕಪ್ ಪಂದ್ಯ ನಡೆಯಲಿದೆ. ಇದು ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ಪಂದ್ಯ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಇತ್ತಿಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳೆನಿಸಿಕೊಂಡಿವೆ. ಪಾಕಿಸ್ತಾನ ತಂಡದಲ್ಲಿ ನಾಯಕ ಬಾಬರ್ ಅಜಮ್ ಹಾಗೂ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಸತತವಾಗಿ ಮಿಂಚುತ್ತಿದ್ದರೆ, ಭಾರತ ತಂಡದ ಪರ ಯುವ ಬ್ಯಾಟರ್‌ಗಳು ಗೆಲುವಿನ ಟ್ರಂಪ್ ಕಾರ್ಡ್‌ಗಳೆನಿಸಿಕೊಂಡಿದ್ದಾರೆ. ಆದಾಗ್ಯೂ, ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ತಂಡವೇ ಯಶಸ್ವಿ ತಂಡ ಎನಿಸಿಕೊಂಡಿದೆ. ಅಂತೆಯ ಪಾಕ್ ವಿರುದ್ಧದ ಮುಖಾಮುಖಿಯಲ್ಲೂ ಭಾರತವೇ ಹೆಚ್ಚುಗಾರಿಕೆ ಹೊಂದಿದೆ.
ಟಿ೨೦ ಮಾದರಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಇದುವರೆಗೆ ೧೦ ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನಕ್ಕೆ ಎರಡು ಪಂದ್ಯಗಳಲ್ಲಿ ಮಾತ್ರ ಯಶಸ್ಸು ಲಭಿಸಿದೆ. ಅಂತಯೇ ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ೧೫ ಬಾರಿ ಪರಸ್ಪರ ಆಡಿದೆ. ಅದರಲ್ಲಿ ಭಾರತ ತಂಡ ೯ ಬಾರಿ ಜಯ ಸಾಧಿಸಿದ್ದರೆ, ೫ ಜಯ ಪಾಕಿಸ್ತಾನಕ್ಕೆ ಲಭಿಸಿದೆ.
ಕಳೆದ ಭಾನುವಾರ (ಆಗಸ್ಟ್ ೨೮) ನಡೆದ ಏಷ್ಯಾ ಕಪ್ ಮುಖಾಮುಖಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕೊನೇ ಪಂದ್ಯವಾಗಿದೆ. ಅದರಲ್ಲಿ ಭಾರತ ೫ ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಅಂತೆಯೇ ಕಳೆದ ವರ್ಷ ಆಕ್ಟೋಬರ್‌ನಲ್ಲಿ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು.
ಇದನ್ನೂ ಓದಿ | Sexy ಪದ ಬಳಸಲು ನಾಚಿದ ಕೋಚ್ ರಾಹುಲ್ ದ್ರಾವಿಡ್, ಬಿಡದೇ ಬಾಯ್ಬಿಡಿಸಿದ ಪತ್ರಕರ್ತ