IND vs Pak | ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತವೇ ಬಲಿಷ್ಠ - Vistara News

ಕ್ರಿಕೆಟ್

IND vs Pak | ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತವೇ ಬಲಿಷ್ಠ

ಏಷ್ಯಾ ಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತಂಡವೇ ಪಾಕಿಸ್ತಾನಕ್ಕಿಂತ ಹೆಚ್ಚು ಜಯ ಗಳಿಸುವ ಮೂಲಕ ಬಲಿಷ್ಠ ತಂಡ ಎನಿಸಿಕೊಂಡಿದೆ.

VISTARANEWS.COM


on

IND vs Pak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ : ಭಾರತ ಹಾಗೂ ಪಾಕಿಸ್ತಾನ ನಡುವೆ ಸೆಪ್ಟೆಂಬರ್‌ ೪ರಂದು ಏಷ್ಯಾ ಕಪ್‌ ಪಂದ್ಯ ನಡೆಯಲಿದೆ. ಇದು ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ಪಂದ್ಯ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಇತ್ತಿಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳೆನಿಸಿಕೊಂಡಿವೆ. ಪಾಕಿಸ್ತಾನ ತಂಡದಲ್ಲಿ ನಾಯಕ ಬಾಬರ್‌ ಅಜಮ್‌ ಹಾಗೂ ಆರಂಭಿಕ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ ಸತತವಾಗಿ ಮಿಂಚುತ್ತಿದ್ದರೆ, ಭಾರತ ತಂಡದ ಪರ ಯುವ ಬ್ಯಾಟರ್‌ಗಳು ಗೆಲುವಿನ ಟ್ರಂಪ್‌ ಕಾರ್ಡ್‌ಗಳೆನಿಸಿಕೊಂಡಿದ್ದಾರೆ. ಆದಾಗ್ಯೂ, ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ತಂಡವೇ ಯಶಸ್ವಿ ತಂಡ ಎನಿಸಿಕೊಂಡಿದೆ. ಅಂತೆಯ ಪಾಕ್‌ ವಿರುದ್ಧದ ಮುಖಾಮುಖಿಯಲ್ಲೂ ಭಾರತವೇ ಹೆಚ್ಚುಗಾರಿಕೆ ಹೊಂದಿದೆ.

ಟಿ೨೦ ಮಾದರಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಇದುವರೆಗೆ ೧೦ ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನಕ್ಕೆ ಎರಡು ಪಂದ್ಯಗಳಲ್ಲಿ ಮಾತ್ರ ಯಶಸ್ಸು ಲಭಿಸಿದೆ. ಅಂತಯೇ ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ೧೫ ಬಾರಿ ಪರಸ್ಪರ ಆಡಿದೆ. ಅದರಲ್ಲಿ ಭಾರತ ತಂಡ ೯ ಬಾರಿ ಜಯ ಸಾಧಿಸಿದ್ದರೆ, ೫ ಜಯ ಪಾಕಿಸ್ತಾನಕ್ಕೆ ಲಭಿಸಿದೆ.

ಕಳೆದ ಭಾನುವಾರ (ಆಗಸ್ಟ್‌ ೨೮) ನಡೆದ ಏಷ್ಯಾ ಕಪ್‌ ಮುಖಾಮುಖಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕೊನೇ ಪಂದ್ಯವಾಗಿದೆ. ಅದರಲ್ಲಿ ಭಾರತ ೫ ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಅಂತೆಯೇ ಕಳೆದ ವರ್ಷ ಆಕ್ಟೋಬರ್‌ನಲ್ಲಿ ನಡೆದ ಟಿ೨೦ ವಿಶ್ವ ಕಪ್‌ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು.

ಇದನ್ನೂ ಓದಿ | Sexy ಪದ ಬಳಸಲು ನಾಚಿದ ಕೋಚ್‌ ರಾಹುಲ್‌ ದ್ರಾವಿಡ್‌, ಬಿಡದೇ ಬಾಯ್ಬಿಡಿಸಿದ ಪತ್ರಕರ್ತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IND vs AGF: ವಿಶ್ವ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ

IND vs AGF: ವಿರಾಟ್​ ಕೊಹ್ಲಿ ಅವರು ಅಫಘಾನಿಸ್ತಾನ ಎದುರಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ(most fours in T20 World Cup) ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ

VISTARANEWS.COM


on

IND vs AGF
Koo

ಬಾರ್ಬಡೋಸ್: ಭಾರತ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ವಿಶ್ವ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ, ನಾಳೆ(ಗುರುವಾರ) ನಡೆಯುವ ಅಫಘಾನಿಸ್ತಾನ(IND vs AGF) ವಿರುದ್ಧದ ಸೂಪರ್​-8 ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ. ಜತೆಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ತವಕದಲ್ಲಿದ್ದಾರೆ.

ವಿರಾಟ್​ ಕೊಹ್ಲಿ ಅವರು ಅಫಘಾನಿಸ್ತಾನ ಎದುರಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ(most fours in T20 World Cup) ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 104* ಬೌಂಡರಿ ಬಾರಿಸಿದ್ದಾರೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ ಟೂರ್ನಿಯಲ್ಲಿ ಕೊಹ್ಲಿ 700ಕ್ಕೂ ಅಧಿಕ ರನ್​ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ, ಈ ಯಶಸ್ಸು ಕೊಹ್ಲಿಗೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕೈ ಹಿಡಿಯಲಿಲ್ಲ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್​ ಆಗಿದೆ. ಇದೀಗ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಾದರೂ ಅವರು ಉತ್ತಮ ಬ್ಯಾಟಿಂಗ್​ ನಡೆಸಿ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರಾ? ಎಂದು ಕಾದು ನೋಡಬೇಕಿದೆ.

ಟ20 ವಿಶ್ವಕಪ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​ಬೌಂಡರಿ
ಮಹೇಲಾ ಜಯವರ್ಧನೆಶ್ರೀಲಂಕಾ31111
ವಿರಾಟ್ ಕೊಹ್ಲಿಭಾರತ30104*
ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
ಡೇವಿಡ್​ ವಾರ್ನರ್ಆಸ್ಟ್ರೇಲಿಯಾ3897*
ರೋಹಿತ್​ ಶರ್ಮ​ಭಾರತ4296*
ಕ್ರಿಸ್​ ಗೇಲ್​ವೆಸ್ಟ್​ ಇಂಡೀಸ್​3178
ಜಾಸ್​ ಬಟ್ಲರ್​ಇಂಗ್ಲೆಂಡ್​3178*
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​2971*
ಬ್ರೆಂಡನ್ ಮೆಕಲಮ್ನ್ಯೂಜಿಲ್ಯಾಂಡ್2567
ಕುಮಾರ್ ಸಂಗಕ್ಕಾರಶ್ರೀಲಂಕಾ3163

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು. ಹೀಗಾಗಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನಲಾಗಿದೆ.

ಇದನ್ನೂ ಓದಿ Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

ಟೀಮ್​ ಇಂಡಿಯಾದ ಆಟಗಾರರು ಹಾಲಿ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಸೂಪರ್​-8 ಪಂದ್ಯವನ್ನಾಡಲು ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿದ್ದಾರೆ(Barbados). ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವೇಳೆ ತಂಡದ ಸದಸ್ಯರು ವಿಂಡೀಸ್ ದಂತಕಥೆ ಸರ್ ವೆಸ್ಲಿ ಹಾಲ್(Sir Wesley Hall) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವೆಸ್ಲಿ ಹಾಲ್ ಅವರು ವಿರಾಟ್​ ಕೊಹ್ಲಿ(Virat Kohli) ಜತೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿ 80 ಶತಕ ಬಾರಿಸಿರುವ ನೀವು 100 ಶತಕವನ್ನು ಪೂರ್ತಿಗೊಳಿಸಬೇಕು ಎಂದು ಹಾರೈಸಿದ್ದಾರೆ. ಜತೆಗೆ ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ಹಸ್ತಾಕ್ಷರದೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ.

Continue Reading

ಕ್ರೀಡೆ

Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

Virat Kohli: 86 ವರ್ಷ ವಯಸ್ಸಿನ ವೆಸ್ಟ್ ಇಂಡೀಸ್ ದಂತಕಥೆ ಹಾಲ್ ಅವರು ತಮ್ಮ “ಆನ್ಸರಿಂಗ್ ದಿ ಕಾಲ್-ದಿ ಎಕ್ಸ್‌ಟ್ರಾರ್ಡಿನರಿ ಲೈಫ್ ಆಫ್ ಸರ್ ವೆಸ್ಲಿ ಹಾಲ್”(Answering the Call -The extraordinary Life of Sir Wesley Hall) ಹೆಸರಿನ ತಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಟೀಮ್​ ಇಂಡಿಯಾ ಆಟಗಾರರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

VISTARANEWS.COM


on

Virat Kohli
Koo

ಬಾರ್ಬಡೋಸ್: ಟೀಮ್​ ಇಂಡಿಯಾದ ಆಟಗಾರರು ಹಾಲಿ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಸೂಪರ್​-8 ಪಂದ್ಯವನ್ನಾಡಲು ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿದ್ದಾರೆ(Barbados). ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವೇಳೆ ತಂಡದ ಸದಸ್ಯರು ವಿಂಡೀಸ್ ದಂತಕಥೆ ಸರ್ ವೆಸ್ಲಿ ಹಾಲ್(Sir Wesley Hall) ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ವೆಸ್ಲಿ ಹಾಲ್ ಅವರು ವಿರಾಟ್​ ಕೊಹ್ಲಿ(Virat Kohli), ರೋಹಿತ್​ ಶರ್ಮ(Rohit Sharma) ಮತ್ತು ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್(rahul dravid)​ ಅವರಿಗೆ ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ಹಸ್ತಾಕ್ಷರದೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ.

100 ಶತಕ ಬಾರಿಸುವಂತೆ ಕೊಹ್ಲಿಗೆ ಹಾರೈಕೆ


ವೆಸ್ಲಿ ಹಾಲ್ ಅವರು ವಿರಾಟ್​ ಕೊಹ್ಲಿ ಜತೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಅವರು ನಾನು ನಿಮ್ಮ ಕ್ರಿಕೆಟ್​ ಸಾಧನೆಯನ್ನು ನೋಡುತ್ತಿದ್ದೇನೆ. 80 ಶತಕ ಬಾರಿಸಿರುವ ನೀವು 100 ಶತಕವನ್ನು ಪೂರ್ತಿಗೊಳಿಸಬೇಕು ಎಂದು ಹಾರೈಸಿದ್ದಾರೆ. ಇದಕ್ಕೆ ಕೊಹ್ಲಿ ಖಂಡಿತವಾಗಿಯೂ… ಎಂದು ಅಷ್ಟೇ ವಿನಮ್ರದಿಂದ ಉತ್ತರಿಸಿ ಅವರಿಂದ ಆಶೀರ್ವಾದ ಪಡೆದರು.

86 ವರ್ಷ ವಯಸ್ಸಿನ ವೆಸ್ಟ್ ಇಂಡೀಸ್ ದಂತಕಥೆ ಹಾಲ್ ಅವರು ತಮ್ಮ “ಆನ್ಸರಿಂಗ್ ದಿ ಕಾಲ್-ದಿ ಎಕ್ಸ್‌ಟ್ರಾರ್ಡಿನರಿ ಲೈಫ್ ಆಫ್ ಸರ್ ವೆಸ್ಲಿ ಹಾಲ್”(Answering the Call -The extraordinary Life of Sir Wesley Hall) ಹೆಸರಿನ ತಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಟೀಮ್​ ಇಂಡಿಯಾ ಆಟಗಾರರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು. ವೆಸ್ಲಿ ಹಾಲ್ ಅವರು ವೆಸ್ಟ್​ ಇಂಡೀಸ್​ ಪರ 48 ಟೆಸ್ಟ್​ ಪಂದ್ಯಗಳನ್ನು ಆಡಿ 192 ವಿಕೆಟ್​ ಮತ್ತು 818 ರನ್​ ಬಾರಿಸಿದ್ದಾರೆ. 80ರ ದಶಕದಲ್ಲಿ ವಿಂಡೀಸ್​ ಪರ ಅಮೋಘ ಸಾಧನೆ ತೋರಿದ್ದರು.

ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಮಹತ್ವದ ಸೂಪರ್​-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ. ಭಾರತ ನಾಳೆ ನಡೆಯುವ ಸೂಪರ್​-8 ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಬಾರ್ಬಡೋಸ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ Virat Kohli: ಶಾರುಖ್, ಸಲ್ಮಾನ್ ಹಿಂದಿಕ್ಕಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಕಿಂಗ್​ ಕೊಹ್ಲಿ


ಭಾರತ-ಆಸೀಸ್​ ಪಂದ್ಯಕ್ಕೆ ಮಳೆ ಭೀತಿ


ಜೂನ್​ 24ರಂದು ಗ್ರಾಸ್​ ಐಲೆಟ್​ನಲ್ಲಿ ನಡೆಯಲಿರುವ ಭಾರತ-ಆಸೀಸ್​(Australia vs India) ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ ಅಫಘಾನಿಸ್ತಾನ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್​ ಟಿಕೆಟ್​ ಖಾತ್ರಿಗೊಳಿಸಬೇಕು. ಜೂನ್​ 29ರಂದು ಬ್ರಿಜ್​ಟೌನ್​ನಲ್ಲಿ ನಿಗದಿಯಾಗಿರುವ ಫೈನಲ್​ ಪಂದ್ಯವೂ ಮಳೆ ಭೀತಿ ಎದುರಾಗಿದೆ.

Continue Reading

ಕ್ರೀಡೆ

Virat Kohli: ಶಾರುಖ್, ಸಲ್ಮಾನ್ ಹಿಂದಿಕ್ಕಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಕಿಂಗ್​ ಕೊಹ್ಲಿ

Virat Kohli: 2022ರಲ್ಲಿ ವಿರಾಟ್​ ಕೊಹ್ಲಿ ಅವ ಬ್ರಾಂಡ್ ಮೌಲ್ಯ 1,474 ಕೋಟಿ ರೂ. ಇತ್ತು. ಈ ವರ್ಷದಲ್ಲಿ ಅವರ ಒಟ್ಟಾರೆ ಬ್ರಾಂಡ್ ಮೌಲ್ಯ ಅಂದಾಜು 29 ಪ್ರತಿಶತದಷ್ಟು ಏರಿಕೆ ಕಂಡಿದೆ. ಬಾಲಿವುಡ್​ ನಟ ರಣವೀರ್ ಸಿಂಗ್(Ranveer Singh) ದ್ವಿತೀಯ ಸ್ಥಾನಿಯಾಗಿದ್ದಾರೆ.

VISTARANEWS.COM


on

Virat Kohli
Koo

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ(Virat Kohli) ಅವರು ಭಾರತದ ಅತ್ಯಂತ ಮೌಲ್ಯಯುತ, ಜನಪ್ರಿಯ ಸೆಲೆಬ್ರಿಟಿ(Kohli is India’s most valued celebrity) ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 2023ರಲ್ಲಿ ಕೊಹ್ಲಿ 1900 ಕೋಟಿ ರೂ. ಬ್ರಾಂಡ್​ ಮೌಲ್ಯ ಹೊಂದಿದ್ದಾರೆ. ನಿವೃತ್ತ ಕ್ರಿಕೆಟಿಗ ಎಂಎಸ್ ಧೋನಿ(MS Dhoni) 799 ಕೋಟಿ ರೂ. ಮೌಲ್ಯದೊಂದಿಗೆ ಪಟ್ಟಿಯಲ್ಲಿ ಏಳನೇ, ಸಚಿನ್ ತೆಂಡೂಲ್ಕರ್(Sachin Tendulkar) 760 ಕೋಟಿ ರೂ. ಬ್ರಾಂಡ್ ಮೌಲ್ಯದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

2022ರಲ್ಲಿ ವಿರಾಟ್​ ಕೊಹ್ಲಿ ಅವ ಬ್ರಾಂಡ್ ಮೌಲ್ಯ 1,474 ಕೋಟಿ ರೂ. ಇತ್ತು. ಈ ವರ್ಷದಲ್ಲಿ ಅವರ ಒಟ್ಟಾರೆ ಬ್ರಾಂಡ್ ಮೌಲ್ಯ ಅಂದಾಜು 29 ಪ್ರತಿಶತದಷ್ಟು ಏರಿಕೆ ಕಂಡಿದೆ. ಬಾಲಿವುಡ್​ ನಟ ರಣವೀರ್ ಸಿಂಗ್(Ranveer Singh) ದ್ವಿತೀಯ ಸ್ಥಾನಿಯಾಗಿದ್ದಾರೆ. ಅವರ ಬ್ರಾಂಡ್ ಮೌಲ್ಯ 1,692 ಕೋಟಿ ರೂ. ಶಾರುಖ್ ಖಾನ್(Shah Rukh Khan) 1,006 ಕೋಟಿ ರೂ.ಗಳ ಒಟ್ಟು ಬ್ರಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ 930 ಕೋಟಿ ರೂ. ಮೌಲ್ಯದೊಂದಿಗೆ 2022ರಲ್ಲಿನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ನಟಿ ಆಲಿಯಾ ಭಟ್ 842 ಕೋಟಿ ರೂ. ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ, ದೀಪಿಕಾ ಪಡುಕೋಣೆ 800 ಕೋಟಿ ರೂ. ಮೌಲ್ಯದೊಂದಿಗೆ 6ನೇ ಸ್ಥಾನ ತಲುಪಿದ್ದಾರೆ. ಸಲ್ಮಾನ್ ಖಾನ್ 680 ಕೋಟಿ ರೂ. ಮೌಲ್ಯದೊಂದಿಗೆ 2023ರಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Euro 2024: ಅಂತಿಮ ಹಂತದಲ್ಲಿ ಗೋಲು ಬಾರಿಸಿ ಪೋರ್ಚುಗಲ್​ಗೆ ರೋಚಕ ಗೆಲುವು ತಂದ ಫ್ರಾನ್ಸಿಸ್ಕೊ

ವಿಶ್ವಕಪ್​ನಲ್ಲಿ ಕೊಹ್ಲಿ ವಿಫಲ


ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಮಹತ್ವದ ಸೂಪರ್​-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ. ಭಾರತ ನಾಳೆ ನಡೆಯುವ ಸೂಪರ್​-8 ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಬಾರ್ಬಡೋಸ್​ನಲ್ಲಿ ನಡೆಯಲಿದೆ.

ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

Continue Reading

ಕ್ರೀಡೆ

Kane Williamson: ನಾಯಕತ್ವದಿಂದ ಕೆಳಗಿಳಿದ ಕೇನ್​ ವಿಲಿಯಮ್ಸನ್

Kane Williamson: “ವಿಲಿಯಮ್ಸನ್ ಅವರು ಕೇಂದ್ರ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ ಭವಿಷ್ಯದಲ್ಲಿ ಅವರು ಮತ್ತೆ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಸಿದ್ಧರಿದ್ದಾರೆ” ಎಂದು ಕ್ರಿಕೆಟ್​ ಮಂಡಳಿ ತಿಳಿಸಿದೆ.

VISTARANEWS.COM


on

Kane Williamson
Koo

ವೆಲ್ಲಿಂಗ್ಟನ್​: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ(T20 World Cup 2024) ನ್ಯೂಜಿಲ್ಯಾಂಡ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್​ ಹಂತದಿಂದಲೇ ಹೊರ ಬಿದ್ದಿತ್ತು. ಈ ಸೋಲಿನಿಂದ ಹತಾಶರಾದ ಕೇನ್​ ವಿಲಿಯಮ್ಸನ್(Kane Williamson)​ ಅವರು ನಾಯಕ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ 2024-25 ಋತುವಿಗಾಗಿ ಮಂಡಳಿಯಿಂದ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ. ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಲಿಯಮ್ಸನ್ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದೆ. ನಾಯಕತ್ವದಿಂದ ಕೆಳಗಿಳಿದರೂ ಕೂಡ ತಂಡದ ಪರ ಕೆಲ ಕಾಲ ಆಡುವುದಾಗಿ ವಿಲಿಯಮ್ಸನ್​ ಖಚಿತಪಡಿಸಿದ್ದಾರೆ.

33 ವರ್ಷದ ಕೇನ್​ ವಿಲಿಯಮ್ಸನ್​ ಈ ಬೇಸಿಗೆಯಲ್ಲಿ ಒಂದು ವಿಶ್ರಾಂತಿ ಪಡೆಯಲು ಬಯಸಿದ್ದಾರೆ. 2024-25ರ ಸಾಲಿನಲ್ಲಿ ನ್ಯೂಜಿಲ್ಯಾಂಡ್​ ತಂಡ ಕಡಿಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತದೆ. ಇದೇ ಕಾರಣದಿಂದ ಅವರು ಮೂರು ಮಾದರಿ ಕ್ರಿಕೆಟ್​ನ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

“ವಿಲಿಯಮ್ಸನ್ ಅವರು ಕೇಂದ್ರ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ ಭವಿಷ್ಯದಲ್ಲಿ ಅವರು ಮತ್ತೆ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಸಿದ್ಧರಿದ್ದಾರೆ” ಎಂದು ಕ್ರಿಕೆಟ್​ ಮಂಡಳಿ ತಿಳಿಸಿದೆ.

ಇದನ್ನೂ ಓದಿ USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

“ಕ್ರಿಕೆಟ್‌ ಹೊರಗಿನ ನನ್ನ ಜೀವನವು ಬದಲಾಗಿದೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಮನೆಯಲ್ಲಿ ಅಥವಾ ವಿದೇಶದಲ್ಲಿ ಅವರೊಂದಿಗೆ ಅನುಭವಗಳನ್ನು ಆನಂದಿಸುವುದು ನನಗೆ ಇನ್ನೂ ಹೆಚ್ಚು ಮುಖ್ಯವಾದ ವಿಷಯವಾಗಿದೆ” ಎಂದು ಹೇಳುವ ಮೂಲಕ ಕೇನ್​ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ತಂಡ ಚೊಚ್ಚಲ ಟೆಸ್ಟ್​ ವಿಶ್ವಕಪ್​ ಗೆದ್ದ ಸಾಧನೆ ಮಾಡಿದೆ. 2019ರಲ್ಲಿ ಏಕದಿನ ವಿಶ್ವಕಪ್​ ಫೈನಲ್​, 2023ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ 2016 ಮತ್ತು 2022ರ ಟಿ20 ವಿಶ್ವಕಪ್​ನಲ್ಲಿ ತಂಡ ಸೆಮಿಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದೆ.


ವಿಲಿಯಮ್ಸನ್​ ಟೆಸ್ಟ್ ಕ್ರಿಕೆಟ್​ನಲ್ಲಿ 40 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 22 ಪಂದ್ಯಗಳನ್ನು ಗೆದ್ದಿದ್ದಾರೆ. 8 ಪಂದ್ಯ ಡ್ರಾ ಮತ್ತು 10 ಪಂದ್ಯಗಳಲ್ಲಿ ಸೋಲನುಭವಿಸಿದೆ. 91 ಏಕದಿನ ಪಂದ್ಯಗಳಲ್ಲಿ 46 ಜಯ, 40 ಸೋಲು ಕಂಡಿವೆ. ಟಿ20 ಕ್ರಿಕೆಟ್​ನಲ್ಲಿ 75 ಪಂದ್ಯಗಳಲ್ಲಿ ಮುನ್ನಡೆಸಿ 39 ಜಯ, 34 ಸೋಲು ಕಂಡಿದ್ದಾರೆ. ಒಟ್ಟಾರೆಯಾಗಿ ನ್ಯೂಜಿಲ್ಯಾಂಡ್​ ತಂಡ ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ ಶೇ.50 ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು ಕಂಡಿದೆ. 2019ರಲ್ಲಿ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಚೊಚ್ಚಲ ವಿಶ್ವಕಪ್​ ಗೆಲ್ಲಲಿದೆ ಎನ್ನುವಷ್ಟರಲ್ಲಿ ಅಂಪೈರ್​ ಧರ್ಮಶೇನ ನೀಡಿದ ತೀರ್ಪು ಮತ್ತು ಆ ಬಳಿಕ ಬೌಂಡರಿ ಲೆಕ್ಕಾಚಾರದ ಫಲಿತಾಂಶದಿಂದ ನ್ಯೂಜಿಲ್ಯಾಂಡ್​ ಕಪ್​ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು.

Continue Reading
Advertisement
Road Accident
ಕರ್ನಾಟಕ5 mins ago

Road Accident: ಹಂಪಿ ಕನ್ನಡ ವಿವಿ ಬಳಿ ಕಾರು ಗುದ್ದಿ ಇಬ್ಬರು ಸವಾರರ ದುರ್ಮರಣ

IND vs AGF
ಕ್ರೀಡೆ11 mins ago

IND vs AGF: ವಿಶ್ವ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ

Divya Uruduga kishan belgali In ninagagi serial
ಕಿರುತೆರೆ21 mins ago

Divya Uruduga: ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ!

Gold Rate Today
ಚಿನ್ನದ ದರ29 mins ago

Gold Rate Today: ಚಿನ್ನದ ದರದಲ್ಲಿ ಯಾವುದೇ ಏರಿಳಿತವಿಲ್ಲ; ಆಭರಣ ಖರೀದಿಸುವವರು ಬೆಲೆ ಚೆಕ್‌ ಮಾಡಿ

DK Shivakumar
ರಾಜಕೀಯ32 mins ago

‌DK Shivakumar: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಣಕ್ಕಿಳಿಯಲು ಡಿಕೆ ಶಿವಕುಮಾರ್ ರೆಡಿ; ಕನಕಪುರ ತಮ್ಮನಿಗೆ?

Hajj Pilgrims
ವಿದೇಶ52 mins ago

Hajj Pilgrims: ಪವಿತ್ರ ಹಜ್‌ ಯಾತ್ರೆಗೆ ತಟ್ಟಿದ ಬಿಸಿಲಿನ ತಾಪ; 550 ಯಾತ್ರಾರ್ಥಿಗಳ ಸಾವು

Virat Kohli
ಕ್ರೀಡೆ1 hour ago

Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

Actor Darshan case reaction by umapathy d boss Fans violent
ಸ್ಯಾಂಡಲ್ ವುಡ್1 hour ago

Actor Darshan: ʻಡಿ ಬಾಸ್ʼ ಹೊರ ಬಂದ್ಮೇಲೆ ಉತ್ತರ ಸಿಗೋ ರೀತಿಯಲ್ಲೇ ಸಿಗುತ್ತೆ; ಉಮಾಪತಿ ವಿರುದ್ಧ ದಚ್ಚು ಫ್ಯಾನ್ಸ್‌ ಕಿಡಿ!

viral video snake in amazon box
ವೈರಲ್ ನ್ಯೂಸ್1 hour ago

Viral video: ಅಮೆಜಾನ್‌ ಕಂಪನಿಯ ಪಾರ್ಸೆಲ್‌ನಲ್ಲಿ ಬಂತು ಜೀವಂತ ನಾಗರ! ಗೇಮಿಂಗ್‌ ಬಾಕ್ಸ್‌ ಜೊತೆ ಹಾವು ಫ್ರೀ!

Hardeep Singh Nijjar
ವಿದೇಶ2 hours ago

Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌