Site icon Vistara News

IND vs SA 3rd T2O | ಮತ್ತೆ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ, ಭಾರತದ ಬ್ಯಾಟಿಂಗ್‌

IND SA

ವಿಶಾಖಪಟ್ಟಣಂ: ಭಾರತ- ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ನಗರದ ವೈ.ಎಸ್‌.ರಾಜಶೇಖರರೆಡ್ಡಿ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಮತ್ತೆ ಟಾಸ್‌ ಸೋತಿದೆ.

ಸತತವಾಗಿ ಮೂರನೇ ಪಂದ್ಯದಲ್ಲಿಯೂ ಟಾಸ್‌ ಗೆದ್ದಿರುವ ದಕ್ಷಿಣ ಆಪ್ರಿಕಾ ಈ ಪಂದ್ಯದಲ್ಲಿಯೂ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೊದಲು ಬ್ಯಾಂಟಿಂಗ್‌ ಆರಂಭಿಸಿರುವ ಭಾರತ ತಂಡ 13 ಒವರ್‌ಗಳಲ್ಲಿ 2 ವಿಕೇಟ್‌ ಕಳೆದುಕೊಂಡು, 129 ರನ್‌ ಮಾಡಿದೆ.

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್‌ ಗಾಯಕ್‌ವಾಡ್ (‌57) ಔಟ್, ಇಶಾನ್‌ ಕಿಶನ್ (‌52)‌ ನಾಟೌಟ್‌, ಶ್ರೇಯಸ್‌ ಅಯ್ಯರ್ (‌14) ಔಟಾಗಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಪಡೆಯುವುದು ಭಾರತ ತಂಡಕ್ಕೆ ಬಹಳ ಅಗತ್ಯ, ಏಕೆಂದರೆ ಈ ಮ್ಯಾಚ್‌ನಲ್ಲಿ ಸೋತರೆ 5 ಪಂದ್ಯಗಳ ಟಿ20 ಸರಣಿ ಕೈತಪ್ಪಲಿದೆ. ಹೀಗಾಗಿ ಭಾರತದ ಆಟಗಾರರು ಹೇಗಾದರೂ ಮಾಡಿ ಪದ್ಯ ಗೆಲ್ಲಲೇಬೇಕೆಂಬ ಛಲದಲ್ಲಿದ್ದಾರೆ. ಮತ್ತೊಂದೆಡೆ ಸರಣಿ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ, ಈ ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿ ಇರುವುದರಿಂದ ಎರಡೂ ತಂಡಗಳ ನಡುವಿನ ಕಾಳಗ ರಸವತ್ತರವಾಗಿ ಸಾಗಬಹುದು ಎಂದು ಕ್ರಿಕೆಟ್‌ ತಜ್ಞರು ತಿಳಿಸಿದ್ದಾರೆ.

ವಿಶಾಖಪಟ್ಟಣಂ ಕ್ರೀಡಾಂಗಣ ಭಾರತ ತಂಡಕ್ಕೆ ಅದೃಷ್ಟದ ವೇದಿಕೆಯಾಗಿದೆ. ಈವರೆಗೂ ಆಡಿರುವ ಏಕದಿನ, ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಈ ಕ್ರೀಡಾಂಗಣದಲ್ಲಿ ಅತ್ಯಧಿಕ ಗೆಲುವುಗಳನ್ನು ದಾಖಲಿಸಿದೆ. ಇನ್ನು ಇಂದಿನ ಪಂದ್ಯದಲ್ಲಿ ಪಿಚ್‌ ಬ್ಯಾಟಿಂಗ್‌ಗೆ ಅನುಕೂಲವಾಗಿರಲಿದೆ. ಮೊದಲು ಬ್ಯಾಟಿಂಗ್‌ ಮಾಡಿದ ತಂಡ 200 ರನ್‌ ದಾಟಿದರೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ಎಂದು ಕ್ರಿಕೆಟ್‌ ಪಂಡಿತರು ವಿಶ್ಲೇಷಿಸಿದ್ದಾರೆ.

ಈ ಪಂದ್ಯದಲ್ಲಿ ಎರಡೂ ತಂಡಗಳು ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿವೆ. ಎರಡನೇ ಪಂದ್ಯದಲ್ಲಿ ಆಡಿದ ಆಟಗಾರರನ್ನೇ ಈ ಪಂದ್ಯದಲ್ಲೂ ಮುಂದುವರಿಸಲಾಗಿದೆ.ಎರಡೂ ತಂಡಗಳ ಆಡುವ ಹನ್ನೊಂದರ ಬಳಗಗಳ ಮಾಹಿತಿ ಹೀಗಿದೆ.
ಭಾರತ ತಂಡ: ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್(ನಾಯಕ, ವಿಕೆಟ್‌ ಕೀಪರ್), ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಯುಜ್ವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌.

ದಕ್ಷಿಣ ಆಫ್ರಿಕಾ ತಂಡ: ರೀಜಾ ಹ್ಯಾಂಡ್ರಿಕ್ಸ್‌, ಟೆಂಬಾ ಬವುಮಾ(ನಾಯಕ), ರಸ್ಸಿ ವ್ಯಾನ್‌ ಡರ್‌ ಡಸ್ಸೆನ್‌, ಡೇವಿಡ್‌ ಮಿಲ್ಲರ್‌, ತ್ರಿಸ್ಟನ್‌ ಸ್ಟಬ್ಸ್‌, ವೇಯ್ನ್‌ ಪರ್ನೆಲ್‌, ಡ್ವೈನ್‌ ಪಿಟೋರಿಯಸ್‌, ಕೇಶವ್‌ ಮಹಾರಾಜ್‌, ತಬ್ರಿಜ್‌ ಶಂಸಿ, ಕಗಿಸೊ ರಬಾಡ, ಅನ್ರಿಚ್‌ ನೊಕಿಯೆ.

ಇದನ್ನೂ ಓದಿ | Mithali raj | ಆಟಗಾರ್ತಿಯಾಗಿ ಇನಿಂಗ್ಸ್‌ ಅಂತ್ಯಗೊಳಿಸಿದ ಮಿಥಾಲಿ ರಾಜ್‌, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ

Exit mobile version