Site icon Vistara News

ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ’ಪದಕ ಶತಕ’ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತ

India win 111 medals

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ಇಂದು(ಶನಿವಾರ) ಮುಕ್ತಾಯ ಕಂಡ ಪ್ಯಾರಾ ಏಷ್ಯಾಡ್‌(para asian game) ಕೂಟದಲ್ಲಿ ಭಾರತ 111 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಈ ಟಕೂಟದಲ್ಲಿ 100 ಪದಕದ ಗಡಿ ದಾಟಿದ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಭಾರತ 2018ರಲ್ಲಿ 72 ಪದಕಗಳನ್ನು ಗೆದ್ದಿತ್ತು. 29 ಚಿನ್ನ, 31 ಬೆಳ್ಳಿ, 51 ಕಂಚು ಸೇರಿ ಒಟ್ಟು 111 ಪದಕ ಗೆದ್ದ ದಾಖಲೆ ಮಾಡಿದೆ. ಕಳೆದ ತಿಂಗಳು ಇಲ್ಲೇ ಮುಕ್ತಾಯ ಕಂಡಿದ ಏಷ್ಯನ್​ ಗೇಮ್ಸ್​ನಲ್ಲಿಯೂ ಭಾರತ 100ಕ್ಕೂ ಅಧಿಕ ಪದಕ ಗೆದ್ದು ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿತ್ತು.

ಭಾರತಕ್ಕೆ 5ನೇ ಸ್ಥಾನ

ಈ ಕೂಟದಲ್ಲಿ ಭಾರತ 5ನೇ ಸ್ಥಾನಯಾಗಿ ಹೊರಹೊಮ್ಮಿದೆ. 521 ಪದಕ ಗೆದ್ದ ಚೀನ ಅಗ್ರಸ್ಥಾನ ಪಡೆದರೆ 131 ಪದಕ ಗೆದ್ದ ಇರಾನ್​ ದ್ವಿತೀಯ ಸ್ಥಾನ, 150 ಪದಕ ಗೆದ್ದ ಜಪಾನ್​ ಮೂರನೇ ಸ್ಥಾನ ಪಡೆಯಿತು. ಜಪಾನ್​ ದೇಶ ಇರಾನ್​ಗಿಂತ ಹೆಚ್ಚು ಪದಕ ಗೆದ್ದರೂ ಚಿನ್ನ ಸಾಧನೆಯಲ್ಲಿ ಹಿಂದಿದ್ದ ಕಾರಣ ಮೂರನೇ ಸ್ಥಾನ ಪಡೆಯಿತು. ಕಡೆಯ ದಿನ ಭಾರತ ಅಂತಿಮ ದಿನ 12 ಪದಕ ಗೆದ್ದಿತು.

ಐಎಎಸ್‌ ಅಧಿಕಾರಿ ಸುಹಾಸ್‌ ಚಿನ್ನ ಸಾಧನೆ

ಟೋಕಿಯೊ ಪ್ಯಾರ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದಿದ್ದ ಐಎಎಸ್‌ ಅಧಿಕಾರಿ, ಹಾಸನದ ಯತಿರಾಜ್‌ ಸುಹಾಸ್‌ ಅವರು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಏಷ್ಯಾಡ್‌ನಲ್ಲಿ ಕರ್ನಾಟಕದಿಂದ 2 ಮಂದಿ ಭಾಗಿಯಾಗಿದ್ದರು. ಚಿಕ್ಕಮಗಳೂರು ಮೂಲದ ರಕ್ಷಿತಾ ರಾಜು ಅವರು, 1500 ಮೀ. ಓಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಅವಳಿ ಚಿನ್ನ ಗೆದ್ದ ಸಾಧಕರು

ಈ ಕೂಟದಲ್ಲಿ ನೀರಜ್‌ ಯಾದವ್‌, ಇನಾನಿ ದರ್ಪಣ್‌ ಮತ್ತು ಶೀತಲ್‌ ದೇವಿ ಅವರು ಅವಳಿ ಚಿನ್ನ ಗೆದ್ದ ಸಾಧಕರು. ನೀರಜ್‌ ಯಾದವ್‌ ಅವರು ಡಿಸ್ಕಸ್‌ ಥ್ರೋ ಮತ್ತು ಜಾವೆಲಿನ್‌ ಥ್ರೋವಿನಲ್ಲಿ ಚಿನ್ನ ಗೆದ್ದರೆ, ಚೆಸ್‌ನಲ್ಲಿ ಸತೀಶ್‌ ಇನಾನಿ ದರ್ಪಣ್‌ ಎರಡು ಚಿನ್ನ ಗೆದ್ದಿದ್ದಾರೆ. ಶೀತಲ್‌ ದೇವಿಗೆ ಬಿಲ್ಲುಗಾರಿಕೆಯಲ್ಲಿ ಎರಡು ಚಿನ್ನ ಒಲಿದಿವೆ. ಈ ಮೂಲಕ ಮೂವರು ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Asian Games 2023 : ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಗಳ ಉದ್ಯೋಗದಲ್ಲಿ ಮೀಸಲು; ಸಿಎಂ ಭರವಸೆ

ಯಾವ ವಿಭಾಗದಲ್ಲಿ ಎಷ್ಟು

ಅಥ್ಲೆಟಿಕ್ಸ್‌ 55, ಬ್ಯಾಡ್ಮಿಂಟನ್‌ 21, ಚೆಸ್‌ 08, ಬಿಲ್ಲುಗಾರಿಕೆ 7, ಶೂಟಿಂಗ್‌ 6, ಅಂತಿಮ ದಿನ 12 ಪದಕ ಗೆದ್ದ ಭಾರತ 4ನೇ ಏಷ್ಯಾಡ್​ನಲ್ಲಿ ಚಾರಿತ್ರಿಕ ಸಾಧನೆ ಮಾಡಿದೆ. ಭಾರತ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಮತ್ತು ಕ್ರೀಡಾ ಸಚಿನ ಅನುರಾಗ್​ ಠಾಕೂರ್​ ಸೇರಿ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version