Site icon Vistara News

India Open 2024 Final: ಇಂಡಿಯಾ ಓಪನ್​ ಫೈನಲ್​ನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿಗೆ ಸೋಲು

India Open 2024 Final Badminton

ನವದೆಹಲಿ: ವಿಶ್ವ ನಂ.2 ಭಾರತೀಯ ಖ್ಯಾತ ಬ್ಯಾಡ್ಮಿಂಟನ್​ ಜೋಡಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwik-Chirag) ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌(India Open 2024 Final) ಪಂದ್ಯಾವಳಿಯ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ. ಇದು ವರ್ಷದ ಎರಡನೇ ಬ್ಯಾಡ್ಮಿಂಟನ್‌ ಫೈನಲ್​ನಲ್ಲಿ ಈ ಜೋಡಿಗೆ ಎದುರಾದ ಸೋಲಾಗಿದೆ. ಕಳೆದ ವಾರ ನಡೆದಿದ್ದ ಮಲೇಷ್ಯಾ ಓಪನ್‌ ಸೂಪರ್‌ 1000′ ಬ್ಯಾಡ್ಮಿಂಟನ್​ ಕೂಟದ(Malaysia Open) ಫೈನಲ್‌ನಲ್ಲಿ ಈ ಜೋಡಿ ಸೋಲು ಕಂಡಿತ್ತು.

ಭಾನುವಾರ ನಡೆದ ಪುರುಷರ ಫೈನಲ್​ನಲ್ಲಿ ವಿಶ್ವ ನಂ.3 ಕೊರಿಯಾದ ಎಸ್​ಜೆ. ಸಿಯೋ-ಎಂಎಚ್​ ಕಾಂಗ್​ ಜೋಡಿ ಎದುರು 21-15, 11-21, 18-21 ತೀವ್ರ ಪೈಪೋಟಿ ನಡೆಸಿ ಸೋಲುಂಡರು. ಮೊದಲ ಗೇಮ್​ ಗೆದ್ದು ಮುನ್ನಡೆ ಕಾಯ್ದುಕೊಂಡ ಭಾರತೀಯ ಜೋಡಿಗೆ ದ್ವಿತೀಯ ಗೇಮ್​ನಲ್ಲಿ ಕೊರಿಯಾ ಜೋಡಿ ಆಘಾತ ನೀಡಿತು. 11-21 ಗೆದ್ದು ಹೋರಾಟವನ್ನು ಸಮಬಲಕ್ಕೆ ತಂದಿತು. ಮೂರನೇ ಹಾಗೂ ನಿರ್ಣಾಯಕ ಗೇಮ್​ನಲ್ಲಿ ಉಭಯ ತಂಡದ ಆಟಗಾರರು ಕೂಡ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದರು. ಆದರೆ ಅಂತಿಮ ಹಂತದಲ್ಲಿ ಬಿರುಸಿನ ಹೊಡೆತಗಳ ಮೂಲಕ 2 ಅಂಕದ ಅಂತರದಿಂದ ಭಾರತೀಯ ಜೋಡಿಯನ್ನು ಸಿಯೋ ಮತ್ತು​ ಕಾಂಗ್ ಹಿಮ್ಮೆಟ್ಟಿಸಿದರು.

ಶನಿವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯೊರಾಜ್​ ಜೋಡಿ ಮಾಜಿ ವಿಶ್ವ ಚಾಂಪಿಯನ್​, ವಿಶ್ವದ 4ನೇ ಶ್ರೇಯಾಂಕಿತ ಜೋಡಿ ಆರೋನ್​ ಚಿಯಾ ಮತ್ತು ಸೊಹ್​ ವೂಯಿ ಯಿಕ್​ ಅವರನ್ನು 21-18, 21 14 ನೇರ ಗೇಮ್​ಗಳಿಂದ ಮಣಿಸಿದ್ದರು. ಇದರೊಂದಿಗೆ ವರ್ಷದ ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದ್ದರು. ಆದರೆ ಫೈನಲ್​ನಲ್ಲಿ ಸೋತು ನಿರಾಸೆ ಮೂಡಿಸಿದರು.

ಇದನ್ನೂ ಓದಿ Rohit Sharma: ಧೋನಿ, ಸೆಹವಾಗ್ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​

ಕಳೆದ ಭಾನುವಾರ ನಡೆದಿದ್ದ ಮಲೇಷ್ಯಾ ಓಪನ್‌ ಸೂಪರ್‌ 1000′ ಬ್ಯಾಡ್ಮಿಂಟನ್​ ಕೂಟದ(Malaysia Open) ಫೈನಲ್‌ನಲ್ಲಿಯೂ ಭಾರತೀಯ ಜೋಡಿ ಸೋಲು ಕಂಡಿತ್ತು. ಅಲ್ಲಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧವೂ ತೀವ್ರ ಪೈಪೋಟಿ ನಡೆಸಿ 21-9, 18-21, 17-21 ಅಂತರದ ಸೋಲು ಕಂಡಿದ್ದರು.

Exit mobile version