ರಾಯ್ಪುರ: ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಾಲ್ಕನೇ ಟಿ 20 ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 20 ರನ್ಗಳಿಂದ ಸೋಲಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. ಸರಣಿಯಲ್ಲೀಗ ತಂಡ 3-1 ಮುನ್ನಡೆ ಪಡೆದುಕೊಂಡಿದೆ. ಇದು ಭಾರತ ತಂಡಕ್ಕೆ ತವರು ನೆಲದಲ್ಲಿ 14 ನೇ ಟಿ 20 ಸರಣಿ ಗೆಲುವು. ಇದಲ್ಲದೆ, ತಂಡವು ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಹೊಸ ದಾಖಲೆಯನ್ನು ಮಾಡಿದೆ. ಈ ಪ್ರಕ್ರಿಯೆಯಲ್ಲಿ ನೆರೆಯ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಈ ಮೂಲಕ ಭಾರತ 136ನೇ ಟಿ20 ಗೆಲುವು ದಾಖಲಿಸಿದರೆ, ಪಾಕಿಸ್ತಾನ 135 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ (102), ಆಸ್ಟ್ರೇಲಿಯಾ (95) ಮತ್ತು ದಕ್ಷಿಣ ಆಫ್ರಿಕಾ (95) ನಂತರದ ಸ್ಥಾನಗಳಲ್ಲಿವೆ.
ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ. ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 174 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ತಮ್ಮ ಪಾಲಿನ 20 ಓವರ್ಗಳಲ್ಲಿ 7 ವಿಕೆಟ್ಗೆ 154 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ 3 ವಿಕೆಟ್ ಪಡೆದರೆ ದೀಪಕ್ ಚಾಹರ್ 2 ವಿಕೆಟ್ ಉರುಳಿಸಿದರು. ಭಾರತ ತಂಡ ಹೈದರಾಬಾದ್ ಹಾಗೂ ತಿರುವನಂತಪುರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ ಆಸ್ಟ್ರೇಲಿಯಾ ತಂಡ ಗುವಾಹಟಿಯಲ್ಲಿ ಗೆಲುವು ಕಂಡಿತ್ತು. ಅಂದ ಹಾಗೆ ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್ವೆಲ್ ಸೇರಿದಂತೆ ಪ್ರಮುಖ ಬ್ಯಾಟರ್ಗಳು ಇಲ್ಲದಿರುವುದು ಕೂಡ ಭಾರತ ತಂಡಕ್ಕೆ ಲಾಭ ಎನಿಸಿತು.
ಭಾರತ ತಂಡ ಸಾಧಾರಣ ಮೊತ್ತ ಪೇರಿಸಿದ್ದ ಕಾರಣ ಗೆಲುವು ಸುಲಭ ಎಂದು ಅಂದುಕೊಂಡಿರಲಿಲ್ಲ. ಆದರೆ, ಭಾರತದ ಸ್ಪಿನ್ನ್ ಬೌಲರ್ಗಳು ಅದನ್ನು ಸಾಧ್ಯವಾಗಿಸಿದರು. ಕೊನೇ ಹಂತದಲ್ಲಿ ಬಿಗಿಯಾದ ಬೌಲಿಂಗ್ ಸಂಘಟಿಸಿ ಗೆಲುವು ತನ್ನದಾಗಿಸಿಕೊಂಡಿತು. ಆಸೀಸ್ ಪರ ನಾಯಕ ಮ್ಯಾಥ್ಯೂ ವೇಡ್ 36 ರನ್ ಬಾರಿಸಿದರೆ, ಮ್ಯಾಥ್ಯೂ ಶಾರ್ಟ್ಸ್ 22 ರನ್ ಕೊಡುಗೆ ಕೊಟ್ಟರು. ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅಬ್ಬರದ 31 ರನ್ ಬಾರಿಸಿ ಭಯ ಹುಟ್ಟಿಸಿದ್ದರು.
ರಿಂಕು, ಜಿತೇಶ್ ನೆರವು
The unstoppable Rinku Singh. 🔥pic.twitter.com/ACc8li1e0v
— Johns. (@CricCrazyJohns) December 1, 2023
ಭಾರತ ತಂಡದ ಬ್ಯಾಟಿಂಗ್ ಆರಂಭ ಹಿಂದಿನ ಎರಡು ಪಂದ್ಯಗಳಷ್ಟು ಅಬ್ಬರ ಇರಲಿಲ್ಲ. ಮೊದಲ ಓವರ್ನಲ್ಲಿ ಕೇವಲ 1 ರನ್ ಮಾತ್ರ ಬಂತು. ಆ ಬಳಿಕ ಆರಂಭಿಕ ಬ್ಯಾಟರ್ 28 ಎಸೆತಗಳಲ್ಲಿ 37 ರನ್ ಬಾರಿಸಿದರು. ಅವರ ಪ್ರಯತ್ನದಿಂದಾಗಿ ಭಾರತದ ಸ್ಕೋರ್ ಬೋರ್ಡ್ ನಿಧಾನಕ್ಕೆ ಹಿಗ್ಗಿತು. ಆ ಬಳಿಕ ತಪ್ಪು ಹೊಡೆದ ಹೊಡೆದ ಜೈಸ್ವಾಲ್ ಔಟ್ ಆದರು. ನಾಲ್ಕನೇ ಪಂದ್ಯಕ್ಕೆ ತಂಡಕ್ಕೆ ಪ್ರವೇಶ ಪಡೆದ ಶ್ರೇಯಸ್ ಅಯ್ಯರ್ 8 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಒಂದು ರನ್ ಮಾಡಿ ಔಟಾಗುವ ಮೂಲಕ ಭಾರತ ತಂಡದ ಮೇಲೆ ಒತ್ತಡ ಬಿತ್ತು.
ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್
ಮೂರನೇ ವಿಕೆಟ್ ಪತನಗೊಂಡ ಬಳಿಕ ಆಡಲು ಬಂದ ರಿಂಕು ಸಿಂಗ್ ಭರವಸೆ ಮೂಡಿಸಿದರು. ಆದರೆ, ಈ ವೇಳೆ ಋತುರಾಜ್ ಗಾಯಕ್ವಾಡ್ 32 ರನ್ ಮಾಡಿ ಔಟಾದರು. ಹೀಗಾಗಿ 111 ರನ್ಗಳಿಗೆ 4 ವಿಕೆಟ್ ಉರುಳಿತು. ಆಡುವ ಅವಕಾಶ ಪಡೆದ ಜಿತೇಶ್ ಶರ್ಮಾ ಹಾಗೂ ರಿಂಕು ಸಿಂಗ್ 57 ರನ್ಗಳ ಜತೆಯಾಟವಾಡಿದರು. ಹೀಗಾಗಿ ಭಾರತಕ್ಕೆ ಸ್ಪರ್ಧತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಕೊನೇ ಹಂತದಲ್ಲಿ ಸತತವಾಗಿ ವಿಕೆಟ್ ಕಳೆದದುಕೊಂಡ ಭಾರತ 200 ರನ್ಗಳ ಸನಿಹ ಮೊತ್ತವನ್ನು ಹೆಚ್ಚಿಸುವ ಅವಕಾಶ ಕಳೆದುಕೊಂಡರು. ಅಕ್ಷರ್ ಪಟೇಲ್ ಹಾಗೂ ದೀಪಕ್ ಚಾಹರ್ ಶೂನ್ಯಕ್ಕೆ ಔಟಾದರು.