ಕೊಲೊಂಬೊ: ಮಳೆ ಮತ್ತೆ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಭಾರತ ಮತ್ತು ಪಾಕಿಸ್ತಾನ (ind vs pak) ಕ್ರಿಕೆಟ್ ತಂಡಗಳ ನಡುವಿನ ಏಷ್ಯಾ ಕಪ್ (Asia Cup 2023) ಕ್ರಿಕೆಟ್ ಪಂದ್ಯ ಸೆ. 10ರಂದು ಪೂರ್ಣಗೊಂಡಿಲ್ಲ. ಬಿಡದೇ ಸುರಿದ ಮಳೆಯಿಂದಾಗಿ ಈ ಜಿದ್ದಾಜಿದ್ದಿನ ಹಣಾಹಣಿ ಮೀಸಲು ದಿನವಾದ ಸೋಮವಾರಕ್ಕೆ ಮಂದೂಡಿಕೆಯಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಎಲ್ಲಿ ಪಂದ್ಯ ನಿಂತಿದೆಯೋ ಅಲ್ಲಿಂದಲೇ ಶುರುವಾಗಲಿದೆ.
ಮಳೆ ಬಂದು ಪಂದ್ಯಕ್ಕೆ ಅಡಚಣೆಯಾಗಬಹುದು ಎಂದು ಮೊದಲೇ ಹವಾಮಾನ ವರದಿಯ ಪ್ರಕಾರ ನಿರೀಕ್ಷೆ ಮಾಡಲಾಗಿತ್ತು. ಆದಾಗ್ಯೂ ಅದೇ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಸಲು ಆಯೋಜಕರು ತೀರ್ಮಾನಿಸಿದ್ದರು. ಜತೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಹಣಾಹಣಿಗೆ ಮೀಸಲು ದಿನವನ್ನು ಇಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸದಂತೆ ನೋಡಿಕೊಂಡಿತ್ತು. ಇದೀಗ ನಿರೀಕ್ಷೆಯಂತೆಯೇ ಮಳೆ ಸುರಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 24.1 ಓವರ್ಗಳಲ್ಲಿ 147 ರನ್ ಬಾರಿಸಿದ್ದ ಹೊತ್ತಲ್ಲಿ ಜೋರಾಗಿ ಮಳೆ ಸುರಿಯಿತು. ಗ್ರೌಂಡ್ ಸಿಬ್ಬಂದಿ ಇಡೀ ಮೈದಾನದಕ್ಕೆ ಹೊದಿಕೆ ಹಾಸುವ ಮೂಲಕ ಪಿಚ್ ಹಾಗೂ ಗ್ರೌಂಡ್ ಒದ್ದೆಯಾಗದಂತೆ ನೋಡಿಕೊಂಡರು. ಆದರೂ, ಸುರಿದ ಮಳೆಯ ವೇಗಕ್ಕೆ ಮೈದಾನದಲ್ಲಿ ನೀರು ತುಂಬಿಕೊಂಡಿತು.
ಸುಮಾರು ಅರ್ಧ ಗಂಟೆ ಕಾಲ ಸುರಿದ ಮಳೆ ಮೈದಾನವಿಡೀ ನೀರು ತುಂಬಿಕೊಳ್ಳುವುದಕ್ಕೆ ಕಾರಣವಾಯಿತು. ಮಳೆ ನಿಂತ ಬಳಿಕ ಹೊದಿಕೆ ತೆಗೆದ ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ ಮೈದಾನ ಒಣಗಿಸಲು ಸತತವಾಗಿ ಪ್ರಯತ್ನಿಸಿದರು. ಹಲವು ಬಾರಿ ಪರಿಶೀಲನೆ ನಡೆಸಿದ ಅಂಪೈರ್ಗಳು ಮೈದಾನ ಆಡುವುದಕ್ಕೆ ಸೂಕ್ತವಾಗಿಲ್ಲ ಎಂದು ರಾತ್ರಿ 8.30ರ ತನಕ ಕಾದರು. ಆದರೆ ರಾತ್ರಿಯ ಬಳಿಕ ಮತ್ತೆ ಮಳೆ ಸುರಿದ ಕಾರಣ ಮೈದಾನಕ್ಕೆ ಮತ್ತೆ ಹೊದಿಕೆ ಹಾಕಲಾಯಿತು. ಈ ವೇಳೆ ಫೀಲ್ಡ್ ಅಂಪೈರ್ಗಳು ಪಂದ್ಯವನ್ನು ಮೀಸಲು ದಿನಕ್ಕೆ ತೆಗೆದುಕೊಂಡು ಹೋಗುವ ನಿರ್ಧಾರ ಪ್ರಟಿಸಿದರು.
34 ಓವರ್ಗಳ ಪಂದ್ಯ
ಒಂದು ವೇಳೆ 8.30 ಪರಿಶೀಲನೆ ವೇಳೆ ಸ್ಟೇಡಿಯಮ್ ಆಡುವುದಕ್ಕೆ ರೆಡಿಯಾಗಿದ್ದರೆ 34 ಓವರ್ಗಳ ಪಂದ್ಯ ನಡೆಯುವ ಸಾಧ್ಯತೆ ಇತ್ತು. ಭಾರತ ತಂಡ ಈಗಾಗಲೇ 24.1 ಓವರ್ಗಳನ್ನು ಆಡಿತ್ತು. ಹೀಗಾಗಿ 9.5 ಓವರ್ಗಳಷ್ಟು ಬ್ಯಾಟಿಂಗ್ ಮುಂದುವರಿಸಿ ಪಾಕ್ ತಂಡಕ್ಕೆ ಗುರಿಯನ್ನು ಒಡ್ಡಬೇಕಿತ್ತು. ಆದರೆ, ಕೊನೇ ಹಂತದ ಪರಿಶೀಲನೆ ವೇಳೆ ಮಳೆ ಜೋರಾಗಿ ಸುರಿದ ಕಾರಣ ಓವರ್ಗಳನ್ನು ಕಡಿತಗೊಳಿಸಿದ ಡಕ್ವರ್ತ್ ಲೂಯಿಸ್ ನಿಯಮ ಅನ್ವಯ ಮಾಡಲು ಸಾಧ್ಯವಾಗಲಿಲ್ಲ.
ರೋಹಿತ್, ಗಿಲ್ ಅರ್ಧ ಶತಕ
ಪಂದ್ಯ ಮಳೆಯಿಂದ ನಿಲ್ಲುವ ಮೊದಲು ಭಾರತ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಪಾಕಿಸ್ತಾನದ ಮಾರಕ ವೇಗಿಗಳಿಗೆ ಈ ಬಾರಿ ಬೆದರದೇ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿಯಾದ ರೋಹಿತ್ ಶರ್ಮ (56) ಹಾಗೂ ಶುಭ್ ಮನ್ (58) ಅರ್ಧ ಶತಕಗಳನ್ನು ಬಾರಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 121 ರನ್ ಕಲೆ ಹಾಕುವ ಮೂಲಕ ಭದ್ರ ಬುನಾದಿ ಹಾಕಿತು. ಆದರೆ, ನಂತರದ ಎರಡು ರನ್ಗಳ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಸಣ್ಣ ಹಿನ್ನಡೆಗೆ ಕಾರಣರಾದರು. ಕ್ರೀಸ್ನಲ್ಲಿ ರೋಹಿತ್ ಶರ್ಮಾ (8) ಹಾಗೂ ಕೆ. ಎಲ್ ರಾಹುಲ್ (17) ಆಟ ಮುಂದುವರಿಸಿದ್ದರು.
ಮೈದಾನ ಒಣಗಿಸಲು ಸರ್ಕಸ್
ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗಳ ಬದ್ದತೆ ಮತ್ತೊಂದು ಬಾರಿ ಪ್ರಶಂಸೆಗೆ ಪಾತ್ರವಾಯಿತು. ಸೆ. 2ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ನಡೆದಾಗ ಮಳೆ ಬಂದು ಪಂದ್ಯ ಮೊಟುಕುಗೊಂಡಿತ್ತು. ಈ ವೇಳೆ ಮೈದಾನದ ಸಿಬ್ಬಂದಿ ಇಡೀ ಕ್ರೀಡಾಂಗಣಕ್ಕೆ ಹೊದಿಕೆ ಹಾಕಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದರು. ಅದೇ ಭಾನುವಾರವೂ ಮತ್ತೆ ಅದೇ ರೀತಿ ಸ್ಟೇಡಿಯಮ್ ಒದ್ದೆಯಾಗದಂತೆ ನೋಡಿಕೊಳ್ಳಲು ಯತ್ನಿಸಿದರು. ಆದರೆ, ನೀವು ಒಳಗೆ ನುಗ್ಗಿದ ಕಾರಣ ಅವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : Rohit Sharma : ಪಾಕ್ ಬೌಲರ್ಗಳ ಸೊಕ್ಕು ಮುರಿದು ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಮೈದಾನ ಒಣಗಿಸಲು ಮೈದಾನದ ಸಿಬ್ಬಂದಿ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಪಟ್ಟರು. ಮೈದಾನದ ಮೇಲೆ ಮ್ಯಾಟ್ ಹಾಕಿ ನೀರು ತೆಗೆಯಲು ಯತ್ನಿಸಿದರು. ಆದರೂ ನೀರು ಕಡಿಮೆಯಾಗದ ಕಾರಣ ಕೊನೆಗೆ ಪಿಚ್ ಬಳಿಗೆ ಎಲೆಕ್ಟ್ರಿಕ್ ಫ್ಯಾನ್ ತಂಡ ನೀರು ತೆಗೆಯಲು ಯತ್ನಿಸಿದರು. ಅಷ್ಟರಲ್ಲಿ ಅವರ ಮಳೆ ಸುರಿದ