Site icon Vistara News

World Cup 2023 : ಭಾರತ, ಪಾಕಿಸ್ತಾನ ಪಂದ್ಯದ ತಾಣ ಬದಲು; ಜಯ್​ ಶಾ ಸ್ಪಷ್ಟನೆ ಏನು?

World cup

ನವದೆಹಲಿ: ಕೆಲವು ಸದಸ್ಯ ತಂಡಗಳು ಕಳವಳಗಳನ್ನು ವ್ಯಕ್ತಪಡಿಸಿದ ಕಾರಣ ಕೆಲವು ದಿನಗಳ ಹಿಂದೆ ಘೋಷಿಸಲಾಗಿರುವ ಐಸಿಸಿ ವಿಶ್ವಕಪ್ 2023 ವೇಳಾಪಟ್ಟಿ ಕೆಲವು ಬದಲಾವಣೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಕೆಲವು ಪಂದ್ಯಗಳ ನಡುವಿನ ಸಣ್ಣ ಅಂತರವನ್ನು ಉಲ್ಲೇಖಿಸಿ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸದಸ್ಯ ರಾಷ್ಟ್ರಗಳಿಂದ ವಿನಂತಿಗಳು ಬಂದಿವೆ ಎಂದು ಶಾ ಒತ್ತಿ ಹೇಳಿದರು. ಅಕ್ಟೋಬರ್ 15ರಿಂದ 14 ರವರೆಗೆ ಅಹಮದಾಬಾದ್​ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿ ಮೆಗಾ ಪಂದ್ಯದ ದಿನಾಂಕವನ್ನು ಸ್ಥಳಾಂತರಿಸಲು ಬಿಸಿಸಿಐ ನೋಡುತ್ತಿದೆ ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಅದಕ್ಕೀಗ ಪುಷ್ಟಿ ಸಿಕ್ಕಿದ್ದು, ಪಂದ್ಯದ ವೇಳಾಪಟ್ಟಿ ಬದಲಾಗುವುದು ಬಹುತೇಕ ಖಚಿತವಾಗಿದೆ.

ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ಹಲವಾರು ಪೂರ್ಣ ಸದಸ್ಯ ರಾಷ್ಟ್ರಗಳು ವೇಳಾಪಟ್ಟಿಯಲ್ಲಿ ಎರಡು ಅಥವಾ ಮೂರು ದಿನಾಂಕಗಳನ್ನು ಬದಲಾಯಿಸಲು ವಿನಂತಿಸಿ ಪತ್ರ ಬರೆದಿವೆ. ನಾವು ಐಸಿಸಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಎರಡು ಅಥವಾ ಮೂರು ದಿನಗಳಲ್ಲಿ ನಿರ್ಣಯಿಸಲು ಸಾಧ್ಯವಾಗುತ್ತದೆ ಎಂದು ಜಯ್ ಶಾ ಗುರುವಾರ ದೆಹಲಿಯಲ್ಲಿ ನಡೆದ ಬಿಸಿಸಿಐ ಸಭೆಯ ನಂತರ ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯಲ್ಲಿ ಪಂದ್ಯಗಳ ಸ್ಥಳಗಳು ಒಂದೇ ಆಗಿರುತ್ತವೆ. ಆದರೆ ಆಟಗಳ ನಡುವಿನ ಅಂತರವನ್ನು ಸರಿಹೊಂದಿಸಲಾಗುವುದು ಎಂದು ಅವರು ಹೇಳಿದರು.

“ಸಾಧ್ಯವಾದಷ್ಟು, ನಾವು ಸ್ಥಳ ಮತ್ತು ಪಂದ್ಯಗಳನ್ನು ಬದಲಾಯಿಸದಿರಲು ನೋಡುತ್ತಿದ್ದೇವೆ. ಸ್ಥಳವನ್ನು ಬದಲಾಯಿಸದಿರುವುದು ಬಹಳ ಮುಖ್ಯ. ಪಂದ್ಯಗಳ ನಡುವೆ ಆರು ದಿನಗಳ ಅಂತರವನ್ನು ಹೊಂದಿರುವ ತಂಡಗಳು, ನಾವು ಅದನ್ನು ನಾಲ್ಕು-ಐದು ದಿನಗಳಿಗೆ ಇಳಿಸಲು ಪ್ರಯತ್ನಿಸುತ್ತಿದ್ದೇವೆ. ಕೇವಲ ಎರಡು ದಿನಗಳ ಅಂತರವನ್ನು ಹೊಂದಿರುವವುಗಳನ್ನು ನಾವು ಮೂರು ದಿನಗಳಿಗೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜಯ್​ ಶಾ ಹೇಳಿದರು.

ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆಯೂ ಮಾತನಾಡಿದ ಅವರು, ಅಕ್ಟೋಬರ್ 15 ರಂದು ಅಹಮದಾಬಾದ್ ಪೊಲೀಸರು ಸಾಕಷ್ಟು ಭದ್ರತೆಯನ್ನು ಒದಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳನ್ನು ಸುಳ್ಳು ಎಂದರು.

ಇದನ್ನೂ ಓದಿ : ind vs wi : ವಿಂಡೀಸ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್​​ ಸುಲಭ ಜಯ

ಭದ್ರತೆಯು ಸಮಸ್ಯೆಯಾಗಿದ್ದರೆ ಪಂದ್ಯವು ಅಲ್ಲಿಗೆ (ಅಹಮದಾಬಾದ್​ಗೆ) ಏಕೆ ಹೋಗುತ್ತಿತ್ತು. [ಅಕ್ಟೋಬರ್] 14-15 ಸಮಸ್ಯೆಯಲ್ಲ. ವ್ಯವಸ್ಥಾಪನಾ ಸವಾಲುಗಳ ಆಧಾರದ ಮೇಲೆ ಬದಲಾಯಿಸುವಂತೆ ಕೋರಿ ಎರಡು ಅಥವಾ ಮೂರು ಮಂಡಳಿಗಳು ಪತ್ರ ಬರೆದಿವೆ. ಕೇವಲ ಎರಡು ದಿನಗಳ ಅಂತರವಿರುವ ಕೆಲವು ಪಂದ್ಯಗಳಿವೆ, ಆದ್ದರಿಂದ ಆಡುವುದು ಮತ್ತು ನಂತರ ಮರುದಿನ ಪ್ರಯಾಣಿಸುವುದು ಕಷ್ಟವಾಗುತ್ತದೆ [ನಂತರ ಮತ್ತೆ ಆಡುವುದು] ಎಂದು ಶಾ ನುಡಿದಿದ್ದಾರೆ.

ವಿಶ್ವಕಪ್ 2023 ಅಕ್ಟೋಬರ್ 5 ರಂದು ಅಹಮದಾಬಾದ್​​ನಲ್ಲಿ ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

Exit mobile version