World Cup 2023 : ಭಾರತ, ಪಾಕಿಸ್ತಾನ ಪಂದ್ಯದ ತಾಣ ಬದಲು; ಜಯ್​ ಶಾ ಸ್ಪಷ್ಟನೆ ಏನು? Vistara News

ಕ್ರಿಕೆಟ್

World Cup 2023 : ಭಾರತ, ಪಾಕಿಸ್ತಾನ ಪಂದ್ಯದ ತಾಣ ಬದಲು; ಜಯ್​ ಶಾ ಸ್ಪಷ್ಟನೆ ಏನು?

ಸದಸ್ಯ ರಾಷ್ಟ್ರಗಳು ಬದಲಾವಣೆಗೆ ಮನವಿ ಮಾಡಿರುವ ಕಾರಣ (World Cup 2023) ವೇಳಾಪಟ್ಟಿಯನ್ನು ಬದಲಿಸಲಾಗುವುದು ಎಂದು ಜಯ್​ ಶಾ ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

World cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೆಲವು ಸದಸ್ಯ ತಂಡಗಳು ಕಳವಳಗಳನ್ನು ವ್ಯಕ್ತಪಡಿಸಿದ ಕಾರಣ ಕೆಲವು ದಿನಗಳ ಹಿಂದೆ ಘೋಷಿಸಲಾಗಿರುವ ಐಸಿಸಿ ವಿಶ್ವಕಪ್ 2023 ವೇಳಾಪಟ್ಟಿ ಕೆಲವು ಬದಲಾವಣೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಕೆಲವು ಪಂದ್ಯಗಳ ನಡುವಿನ ಸಣ್ಣ ಅಂತರವನ್ನು ಉಲ್ಲೇಖಿಸಿ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸದಸ್ಯ ರಾಷ್ಟ್ರಗಳಿಂದ ವಿನಂತಿಗಳು ಬಂದಿವೆ ಎಂದು ಶಾ ಒತ್ತಿ ಹೇಳಿದರು. ಅಕ್ಟೋಬರ್ 15ರಿಂದ 14 ರವರೆಗೆ ಅಹಮದಾಬಾದ್​ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿ ಮೆಗಾ ಪಂದ್ಯದ ದಿನಾಂಕವನ್ನು ಸ್ಥಳಾಂತರಿಸಲು ಬಿಸಿಸಿಐ ನೋಡುತ್ತಿದೆ ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಅದಕ್ಕೀಗ ಪುಷ್ಟಿ ಸಿಕ್ಕಿದ್ದು, ಪಂದ್ಯದ ವೇಳಾಪಟ್ಟಿ ಬದಲಾಗುವುದು ಬಹುತೇಕ ಖಚಿತವಾಗಿದೆ.

ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ಹಲವಾರು ಪೂರ್ಣ ಸದಸ್ಯ ರಾಷ್ಟ್ರಗಳು ವೇಳಾಪಟ್ಟಿಯಲ್ಲಿ ಎರಡು ಅಥವಾ ಮೂರು ದಿನಾಂಕಗಳನ್ನು ಬದಲಾಯಿಸಲು ವಿನಂತಿಸಿ ಪತ್ರ ಬರೆದಿವೆ. ನಾವು ಐಸಿಸಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಎರಡು ಅಥವಾ ಮೂರು ದಿನಗಳಲ್ಲಿ ನಿರ್ಣಯಿಸಲು ಸಾಧ್ಯವಾಗುತ್ತದೆ ಎಂದು ಜಯ್ ಶಾ ಗುರುವಾರ ದೆಹಲಿಯಲ್ಲಿ ನಡೆದ ಬಿಸಿಸಿಐ ಸಭೆಯ ನಂತರ ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯಲ್ಲಿ ಪಂದ್ಯಗಳ ಸ್ಥಳಗಳು ಒಂದೇ ಆಗಿರುತ್ತವೆ. ಆದರೆ ಆಟಗಳ ನಡುವಿನ ಅಂತರವನ್ನು ಸರಿಹೊಂದಿಸಲಾಗುವುದು ಎಂದು ಅವರು ಹೇಳಿದರು.

“ಸಾಧ್ಯವಾದಷ್ಟು, ನಾವು ಸ್ಥಳ ಮತ್ತು ಪಂದ್ಯಗಳನ್ನು ಬದಲಾಯಿಸದಿರಲು ನೋಡುತ್ತಿದ್ದೇವೆ. ಸ್ಥಳವನ್ನು ಬದಲಾಯಿಸದಿರುವುದು ಬಹಳ ಮುಖ್ಯ. ಪಂದ್ಯಗಳ ನಡುವೆ ಆರು ದಿನಗಳ ಅಂತರವನ್ನು ಹೊಂದಿರುವ ತಂಡಗಳು, ನಾವು ಅದನ್ನು ನಾಲ್ಕು-ಐದು ದಿನಗಳಿಗೆ ಇಳಿಸಲು ಪ್ರಯತ್ನಿಸುತ್ತಿದ್ದೇವೆ. ಕೇವಲ ಎರಡು ದಿನಗಳ ಅಂತರವನ್ನು ಹೊಂದಿರುವವುಗಳನ್ನು ನಾವು ಮೂರು ದಿನಗಳಿಗೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜಯ್​ ಶಾ ಹೇಳಿದರು.

ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆಯೂ ಮಾತನಾಡಿದ ಅವರು, ಅಕ್ಟೋಬರ್ 15 ರಂದು ಅಹಮದಾಬಾದ್ ಪೊಲೀಸರು ಸಾಕಷ್ಟು ಭದ್ರತೆಯನ್ನು ಒದಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳನ್ನು ಸುಳ್ಳು ಎಂದರು.

ಇದನ್ನೂ ಓದಿ : ind vs wi : ವಿಂಡೀಸ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್​​ ಸುಲಭ ಜಯ

ಭದ್ರತೆಯು ಸಮಸ್ಯೆಯಾಗಿದ್ದರೆ ಪಂದ್ಯವು ಅಲ್ಲಿಗೆ (ಅಹಮದಾಬಾದ್​ಗೆ) ಏಕೆ ಹೋಗುತ್ತಿತ್ತು. [ಅಕ್ಟೋಬರ್] 14-15 ಸಮಸ್ಯೆಯಲ್ಲ. ವ್ಯವಸ್ಥಾಪನಾ ಸವಾಲುಗಳ ಆಧಾರದ ಮೇಲೆ ಬದಲಾಯಿಸುವಂತೆ ಕೋರಿ ಎರಡು ಅಥವಾ ಮೂರು ಮಂಡಳಿಗಳು ಪತ್ರ ಬರೆದಿವೆ. ಕೇವಲ ಎರಡು ದಿನಗಳ ಅಂತರವಿರುವ ಕೆಲವು ಪಂದ್ಯಗಳಿವೆ, ಆದ್ದರಿಂದ ಆಡುವುದು ಮತ್ತು ನಂತರ ಮರುದಿನ ಪ್ರಯಾಣಿಸುವುದು ಕಷ್ಟವಾಗುತ್ತದೆ [ನಂತರ ಮತ್ತೆ ಆಡುವುದು] ಎಂದು ಶಾ ನುಡಿದಿದ್ದಾರೆ.

ವಿಶ್ವಕಪ್ 2023 ಅಕ್ಟೋಬರ್ 5 ರಂದು ಅಹಮದಾಬಾದ್​​ನಲ್ಲಿ ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

ಇಂಗ್ಲೆಂಡ್(INDW vs ENGW)​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 4 ವಿಕೆಟ್​ಗಳ ಅಂತರದಿಂದ ಸೋತು ಸರಣಿಯನ್ನು ಕಳೆದುಕೊಂಡಿದೆ.

VISTARANEWS.COM


on

Nat Sciver-Brunt celebrates dismissing Harmanpreet Kaur
Koo

ಮುಂಬಯಿ: ಪ್ರವಾಸಿ ಇಂಗ್ಲೆಂಡ್(INDW vs ENGW)​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿಯೂ ಭಾರತ ಮಹಿಳಾ ತಂಡ ಮುಗ್ಗರಿಸಿದೆ. ಅತ್ಯಂತ ಕಳಪೆ ಬ್ಯಾಟಿಂಗ್​ ನಡೆಸಿದ ಭಾರತ 4 ವಿಕೆಟ್​ಗಳ ಅಂತರದಿಂದ ಸೋತು ಸರಣಿಯನ್ನು ಕಳೆದುಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡ ಇಂಗ್ಲೆಂಡ್​ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ. ಅಂತಿಮ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.

ಮುಂಬೈಯ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಬ್ಯಾಟಿಂಗ್​ ಮರೆತವರಂತೆ ಆಡಿ 16.2 ಓವರ್​ಗಳಲ್ಲಿ ಕೇವಲ 80 ರನ್​ಗೆ ಸರ್ವಪತನ ಕಂಡಿತು. ಜವಾಬಿತ್ತ ಇಂಗ್ಲೆಂಡ್​ ಕೂಡ 6 ವಿಕೆಟ್​ ಕಳೆದುಕೊಂಡು 11.2 ಓವರ್​ನಲ್ಲಿ 82 ರನ್​ ಬಾರಿಸಿ ಕಷ್ಟದ ಗೆಲುವು ಸಾಧಿಸಿತು. ಭಾರತ ಕನಿಷ್ಠ 120 ರನ್​ ಬಾರಿಸುತ್ತಿದ್ದರೆ ಗೆಲ್ಲುವ ಸಾಧ್ಯತೆ ಇತ್ತು.

ಮಾನ ಉಳಿಸಿದ ಜೆಮಿಮಾ

ಪಟಪಟನೆ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಆಸರೆಯಾದದ್ದು ಜೆಮಿಮಾ ರೋಡ್ರಿಗಸ್.​ ಅವರು ಏಕಾಂಗಿಯಾಗಿ ಹೋರಟ ನಡೆಸಿದ ಪರಿಣಾಮ ಭಾರತ 50 ಗಡಿ ದಾಟಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಓವರ್​ನ 2ನೇ ಎಸೆತದಲ್ಲೇ ಎಲ್​ಬಿಡಬ್ಲ್ಯೂ ಆಗಿ ಶೂನ್ಯ ಸುತ್ತಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಅನುಭವಿ ಆಟಗಾರ್ತಿ ಎನಿಸಿಕೊಂಡ ಸ್ಮೃತಿ ಮಂಧಾನ ಅವರ ಕಳಪೆ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕಳೆದೊಂದು ವರ್ಷದಿಂದ ಅವರು ತಂಡದಲ್ಲಿ ಕೇವಲ ಲೆಕ್ಕ ಭರ್ತಿಗೆ ಇದ್ದಂತೆ ತೋರುತ್ತಿದೆ. ಪತ್ರಿ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಪಂದ್ಯದಲ್ಲಿ ಅವರ ಗಳಿಕೆ 10 ರನ್​. ಇನ್ನು ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಥೆಯೂ ಕೂಡ ಇದೇ ಆಗಿದೆ. ಅವರು ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

ಈ ಪಂದ್ಯದಲ್ಲಿ ಕೌರ್ ಗಳಿಕೆ 9 ರನ್​. ಆ ಬಳಿಕ ಬಂದ ಆಲ್​ರೌಂಡರ್​ ದೀಪ್ತಿ ಶರ್ಮಾ ಕೂಡ ಖಾತೆ ತೆರೆಯುವಲ್ಲಿ ವಿಫಲರಾದರು. ರಿಚಾ ಘೋಷ್ (4) ಹಾಗೂ ಪೂಜಾ ವಸ್ತ್ರಾಕರ್ (6) ಒಂದಂಕಿಗೆ ಸೀಮಿತವಾಯಿತು. ಕರ್ನಾಟಕದ ಯುವ ಆಟಗಾರ್ತಿ ಶ್ರೇಯಾಂಕ ಪಾಟೀಲ್​ ಈ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ತೋರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿತು. ಅವರು ಕೂಡ 4 ರನ್​ಗೆ ಸೀಮಿತರಾದರು.

ಇದನ್ನೂ ಓದಿ IND vs SA: ಬೌನ್ಸಿ ಪಿಚ್​ನಲ್ಲಿ ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಯಂಗ್​ ಇಂಡಿಯಾ?

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಟೊಂಕ ಕಟ್ಟಿ ನಿಂತ ಜೆಮಿಮಾ 33 ಎಸೆತಗಳಲ್ಲಿ 30 ರನ್ ಬಾರಿಸಿದರು. ಸಾರ ಗ್ಲೆನ್ ಓವರ್​ನಲ್ಲಿ ಸತತ 2 ಬೌಂಡರಿ ಬಾರಿಸಿದ ಮರು ಎಸೆತದಲ್ಲಿ ಸಿಂಗಲ್​ ತೆಗೆಯುವ ಪ್ರಯತ್ನದಲ್ಲಿ ನುಗ್ಗಿ ಬಂದ ಚೆಂಡು ಪ್ಯಾಡ್​ಗೆ ಬಡಿದು ಎಲ್​ಬಿಡಬ್ಲ್ಯು ಆದರು. ಅಂತಿಮವಾಗಿ ಸೈಕಾ ಇಶಾಖ್ 8 ರನ್​ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್​ ಇನಿಂಗ್ಸ್​ ಕೂಡ ಕೊನೆಗೊಂಡಿತು. ಭಾರತ ಪರ ಕೇವಲ 2 ಬ್ಯಾಟರ್​ ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು.

ಇಂಗ್ಲೆಂಡ್​ಗೂ ಆರಂಭಿಕ ಆಘಾತ

81 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭಿಕ ಆಘಾತ ಎದುರಿಸಿತು. ಮೂರನೇ ಓವರ್​ನಲ್ಲಿ ಸೋಫಿಯಾ ಡಂಕ್ಲಿ (6) ಹಾಗೂ ಡೇನಿಯಲ್ ವ್ಯಾಟ್ (0) ಅವರನ್ನು ಬೌಲ್ಡ್ ಮಾಡುವ ಮೂಲಕ ರೇಣುಕಾ ಸಿಂಗ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಆದರೆ ಮೂರನೇ ವಿಕೆಟ್​ಗೆ ಜತೆಯಾದ ಆಲಿಸ್ ಕ್ಯಾಪ್ಸಿ ಮತ್ತು ನ್ಯಾಟ್ ಸ್ಕಿವರ್​ ಬ್ರಂಟ್ ರಕ್ಷಣಾತ್ಮಕ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ ಗೆಲುವಿನ ದಡ ಸೇರಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 42 ರನ್​ಗಳಿಸಿತು. ಆಲಿಸ್ ಕ್ಯಾಪ್ಸಿ (25) ಮತ್ತು ಸ್ಕಿವರ್​ ಬ್ರಂಟ್(16) ರನ್​ ಬಾರಿಸಿದರು.

Continue Reading

ಕ್ರಿಕೆಟ್

ಕೊನೆಗೂ ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; ಯಾವ ತಂಡಕ್ಕೆ?

ದ್ವಿತೀಯ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ವೇದಾ ಕೃಷ್ಣಮೂರ್ತಿ(veda krishnamurthy) ಅವರನ್ನು ಗುಜರಾತ್ ಜೈಂಟ್ಸ್  ತಂಡ ಖರೀದಿ ಮಾಡಿದೆ.

VISTARANEWS.COM


on

veda krishnamurthy
Koo

ಬೆಂಗಳೂರು: ಕರ್ನಾಟಕ ಮೂಲದ, ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ(veda krishnamurthy) ಅವರು ಕೊನೆಗೂ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ಸೋಲ್ಡ್​ ಆಗಿದ್ದಾರೆ. ಅವರನ್ನು ಗುಜರಾತ್ ಜೈಂಟ್ಸ್ ತಂಡ ಮೂಲ ಬೆಲೆ 30 ಲಕ್ಷ ರೂ. ನೀಡಿ ಖರೀದಿ ಮಾಡಿದೆ.

ಆರಂಭಿಕ ಹಂತದ ಬಿಡ್ಡಿಂಗ್​ನಲ್ಲಿ ಅವರು ಅನ್​ಸೋಲ್ಡ್​​ ಆಗಿದ್ದರು. ಬಳಿಕ ದ್ವಿತೀಯ ಸುತ್ತಿನ ಬಿಡ್ಡಿಂಗ್​ನಲ್ಲಿ ಅವರನ್ನು ಗುಜರಾತ್ ಜೈಂಟ್ಸ್ ತನ್ನ ಪಾಳಯಕ್ಕೆ ಸೇರಿಸಿಕೊಂಡಿತು. ಮೊದಲ ಹಂತದಲ್ಲಿ ಖರೀದಿ ಮಾಡದಿದ್ದಾಗ ನಿರಾಸೆಗೊಂಡಿದ್ದ ಅವರು ಬಳಿಕದ ಸುತ್ತಿನಲ್ಲಿ ಖರೀದಿಯಾದ ಕಾರಣ ಸಂತಸಗೊಂಡಿದ್ದಾರೆ. ಕ್ರಿಕೆಟ್​ಗೆ ಮರಳುವ ಅವರ ಕನಸು ಮತ್ತೆ ಚಿಗುರೊಡೆದಿದೆ.

2011 ರಲ್ಲಿ ಭಾರತ ವನಿತಾ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ ವರ್ಷ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

ಉತ್ತಮ ಫೀಲ್ಡರ್​

31  ವರ್ಷದ ವೇದಾ ಕೃಷ್ಣಮೂರ್ತಿ ಚಿಕ್ಕಮಗಳೂರಿನವರಾಗಿದ್ದು, 18ರ ಹರೆಯದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೇದಾ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ಅತ್ಯುತ್ತಮ ಫೀಲ್ಡರ್‌ ಆಗಿದ್ದಾರೆ. 2020ರ ಟಿ20 ವಿಶ್ವಕಪ್‌ ವೇಳೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಸಲ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಮೂಲಕ ಮತ್ತೆ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ WPL Auction 2024: ಹರಾಜಿನ ಬಳಿಕ ಎಲ್ಲ 5 ತಂಡಗಳ ಆಟಗಾರ್ತಿಯರ ಪಟ್ಟಿ ಹೀಗಿದೆ

ಗುಜರಾತ್ ಜೈಂಟ್ಸ್ ತಂಡ

ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.

ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು

ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್ ಹಾಗೂ ಭಾರತದ ಅನ್​ಕ್ಯಾಪ್ಡ್​ ಆಟಗಾರ್ತಿ ಕಾಶ್ವಿ ಗೌತಮ್ ಈ ಬಾರಿಯ ಬಿಡ್ಡಿಂಗ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್​ ಆದರು. ಕರ್ನಾಟಕದ ವೃಂದಾ ದಿನೇಶ್​ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್​ ಆದರು.

Continue Reading

ಕ್ರಿಕೆಟ್

WPL Auction 2024: ಹರಾಜಿನ ಬಳಿಕ ಎಲ್ಲ 5 ತಂಡಗಳ ಆಟಗಾರ್ತಿಯರ ಪಟ್ಟಿ ಹೀಗಿದೆ

VISTARANEWS.COM


on

Women’s Premier League 2024
Koo

ಮುಂಬಯಿ: ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024 ಆಟಗಾರ್ತಿಯರ ಹರಾಜು(WPL Auction 2024) ಪ್ರಕ್ರಿಯೆ ಇಂದು (ಡಿ.9) ಮುಂಬೈಯಲ್ಲಿ ನಡೆಯಿತು. ಒಟ್ಟು 165 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿದ್ದರು. ಇದರಲ್ಲಿ ಐದು ತಂಡಗಳಲ್ಲಿ 30 ಆಟಗಾರ್ತಿಯನ್ನು ಖರೀದಿ ಮಾಡಿತು. ಎಲ್ಲ ತಂಡಗಳ ಆಟಗಾರ್ತಿಯ ಪಟ್ಟಿ ಇಂತಿದೆ.

ಮಲ್ಲಿಕಾ ಸಾಗರ್ ಪ್ರಮುಖ ಆಕರ್ಷಣೆ

ಬಿಡ್ಡಿಂಗ್​ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಹರಾಜುಗಾರ್ತಿ ಮಲ್ಲಿಕಾ ಸಾಗರ್. ಮುಂಬೈ ಮೂಲದವರಾದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಈಗ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯುವ ಪುರುಷರ ಐಪಿಎಲ್​ ಬಿಡ್ಡಿಂಗ್​ನಲ್ಲಿಯೂ ಇವರು ಪಾಲ್ಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು

ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್ ಹಾಗೂ ಭಾರತದ ಅನ್​ಕ್ಯಾಪ್ಡ್​ ಆಟಗಾರ್ತಿ ಕಾಶ್ವಿ ಗೌತಮ್ ಈ ಬಾರಿಯ ಬಿಡ್ಡಿಂಗ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್​ ಆದರು. ಕರ್ನಾಟಕದ ವೃಂದಾ ದಿನೇಶ್​ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್​ ಆದರು.

ಆರ್​ಸಿಬಿ ತಂಡ

ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

ಇದನ್ನೂ ಓದಿ RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್​ಸಿಬಿ; ಆಟಗಾರ್ತಿಯರ ಫುಲ್​ ಲೀಸ್ಟ್​ ಇಲ್ಲಿದೆ 

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್, ಅಪರ್ಣಾ ಮೊಂಡಲ್, ಅಶ್ವನಿ ಕುಮಾರಿ.

ಗುಜರಾತ್ ಜೈಂಟ್ಸ್ ತಂಡ

ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.

ಮುಂಬೈ ಇಂಡಿಯನ್ಸ್​

ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸ್ಕೈವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನ್‌ದೀಪ್ ಕೌರ್, ಫಾತಿಮಾ ಜಾಫರ್, ಕೀರ್ತನಾ ಬಾಲಕೃಷ್ಣನ್.

ಯುಪಿ ವಾರಿಯರ್ಸ್​ ತಂಡ

ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ, ಡ್ಯಾನಿಯಲ್​ ವ್ಯಾಟ್, ವೃಂದಾ ದಿನೇಶ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.

Continue Reading

ಕ್ರಿಕೆಟ್

RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್​ಸಿಬಿ; ಆಟಗಾರ್ತಿಯರ ಫುಲ್​ ಲೀಸ್ಟ್​ ಇಲ್ಲಿದೆ 

ವುಮೆನ್ಸ್​ ಪ್ರೀಮಿಯರ್ ಲೀಗ್​ ದ್ವಿತೀಯ ಆವೃತ್ತಿಗಾಗಿ ನಡೆದ ಮಿನಿ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 7 ಆಟಗಾರ್ತಿಯರನ್ನು ಖರೀದಿ ಮಾಡಿದೆ.

VISTARANEWS.COM


on

rcb wpl
Koo

ಮುಂಬಯಿ: ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಕನ್ನಡಿಗರ ನಚ್ಚಿನ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB WPL 2024) ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ರಚಿಸಿದೆ. ಇಂದು(ಡಿ.9 ಶನಿವಾರ) ಮುಂಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರ್ತಿಯನ್ನು ಖರೀದಿಸುವ ಮೂಲಕ 2ನೇ ಆವೃತ್ತಿಯಲ್ಲಿ ಕಪ್​ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ ಬಾರಿ ಅತ್ಯಂತ ಕಳಪೆ ಪ್ರದರ್ಶನ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ್ತಿಯರಾದ ಸ್ಮೃತಿ ಮಂಧಾನ, ರಿಚಾ ಘೋಷ್​, ರೇಣುಕಾ ಸಿಂಗ್​ ಸೇರಿ ಆಸೀಸ್​ನ ಸ್ಟಾರ್​ ಆಲ್​ರೌಂಡರ್​ ಎಲ್ಲಿಸ್​ ಪೆರಿ, ಹೀದರ್ ನೈಟ್, ಸೋಫಿ ಡಿವೈನ್ ಅವರನ್ನೊಳ ಅತ್ಯಂತ ಬಲಿಷ್ಠ ತಂಡವಾಗಿದ್ದ ಆರ್​ಸಿಬಿ ಕಳೆದ ಚೊಚ್ಚಲ ಆವೃತ್ತಿಯಲ್ಲಿ ತೀರಾ ಕಳೆಪೆ ಪ್ರದರ್ಶನ ತೋರಿತ್ತು. ಈ ಮೂಲಕ ತಾವು ಕೂಡ ಪುರುಷರ ತಂಡದಂತೆ ನತದೃಷ್ಟರು ಎನಿಸಿಕೊಂಡಿದ್ದರು. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದರು.

ಮುಂದಿನ ಆವೃತ್ತಿಗೆ ಸ್ಟಾರ್​ ಆಟಗಾರ್ತಿರನ್ನು ಉಳಿಸಿಕೊಂಡು ಮತ್ತೆ ಮಿನಿ ಹರಾಜಿನಲ್ಲಿ ಕೆಲ ಸ್ಟಾರ್​ ಆಟಗಾರ್ತಿಯನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್​ಸಿಬಿ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಕಾದು ನೋಡಬೇಕಿದೆ. ಮಿನಿ ಹರಾಜಿನಲ್ಲಿ ಆರ್​ಸಿಬಿ 7 ಆಟಗಾರ್ತಿಯರನ್ನು ಖರೀದಿ ಮಾಡಿದೆ. ಭಾರತೀಯ ಆಟಗಾರ್ತಿ ಏಕ್ತಾ ಬಿಷ್ತ್ ಅವರನ್ನು 60 ಲಕ್ಷ ರೂ.ಗೆ, ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂ.ಗೆ, ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂ.ಗೆ, ಶುಭಾ ಸತೀಶ್ ಅವರನ್ನು 10 ಲಕ್ಷ ರೂ., ಎಸ್ ಮೇಘನಾ 30 ಲಕ್ಷ ರೂ., ಸೋಫಿ ಮೊಲಿನೆಕ್ಸ್ 30 ಲಕ್ಷ ರೂ. ನೀಡಿ ಖರೀದಿಸಿತು.

ಇದನ್ನೂ ಓದಿ ಅನುಭವಿ ಆಟಗಾರ್ತಿಯರನ್ನು ಹಿಂದಿಕ್ಕಿ ಕೋಟಿ ಮೊತ್ತ ಪಡೆದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

ಆರ್​ಸಿಬಿ ತಂಡ

ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

Continue Reading
Advertisement
kaivara tatayya
ಅಂಕಣ12 mins ago

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Madhu Bangarappa Beluru Gopalakrishna
ಅಂಕಣ27 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ27 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ42 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌