Site icon Vistara News

IND vs NZ : ಕಿವೀಸ್ ವಿರುದ್ಧ 397 ರನ್​ಗಳ ಬೃಹತ್ ಮೊತ್ತ ಪೇರಿಸಿದ ಭಾರತ ತಂಡ

Virat kohli 1

ಮುಂಬಯಿ: ವಿರಾಟ್​ ಕೊಹ್ಲಿಯ (117) ವಿಶ್ವ ದಾಖಲೆಯ ಶತಕ ಹಾಗೂ ಶ್ರೇಯಸ್​ ಅಯ್ಯರ್ (105) ಅವರ ಅಮೋಘ ಶತಕ (101) ನೆರವಿನಿಂದ ಮಿಂಚಿದ ಭಾರತ ತಂಡ ನ್ಯೂಜಿಲ್ಯಾಂಡ್ (IND vs NZ) ​ ವಿರುದ್ಧದ ವಿಶ್ವ ಕಪ್​ ಸೆಮಿ ಫೈನಲ್ ಪಂದ್ಯದಲ್ಲಿ 397 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಈ ಮೂಲಕ ಎದುರಾಳಿ ನ್ಯೂಜಿಲ್ಯಾಂಡ್​ಗೆ ಅಸಾಮಾನ್ಯ ಗೆಲುವಿನ ಸವಾಲನ್ನು ಒಡ್ಡಿದೆ. ಆರಂಭಿಕ ಬ್ಯಾಟರ್​ ಶುಭ್​ಮನ್​ ಗಿಲ್​ (80) ಕೂಡ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.

ಇಲ್ಲಿನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬ್ಯಾಟ್ ಮಾಡಿದ ತಂಡದ ಬ್ಯಾಟರ್​ಗಳು ಟೂರ್ನಿಯ ಪ್ರಮುಖ ಪಂದ್ಯವೊಂದರಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು.

ಇನಿಂಗ್ಸ್ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎಂದಿನಂತೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 29 ಎಸೆತಗಳಲ್ಲಿ 47 ರನ್​ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್​​ನಲ್ಲಿ 4 ಫೊರ್ ಹಾಗೂ 4 ಸಿಕ್ಸರ್​ಗಳಿದ್ದವು. ಅವರಿಗೆ ಉತ್ತಮವಾಗಿ ಸಾಥ್​ ಕೊಟ್ಟ ಯುವ ಬ್ಯಾಟರ್​ ಶುಭ್​ಮನ್​ ಗಿಲ್ ಭಾರತ ತಂಡಕ್ಕೆ ವಿಶ್ವಾಸ ಮೂಡಿಸಿದರು. ಅವರಿಬ್ಬರು ಮೊದಲ ವಿಕೆಟ್​ಗೆ 71 ರನ್ ಬಾರಿಸಿದರು. ಆದರೆ ಸೌಥಿ ಎಸೆತಕ್ಕೆ ವಿಲಿಯಮ್ಸನ್​ಗೆ ಕ್ಯಾಚ್ ನೀಡಿದ ರೋಹಿತ್​ ಔಟಾದರು.

ಕೊಹ್ಲಿಯ ಉತ್ತಮ ಬ್ಯಾಟಿಂಗ್​

ರೋಹಿತ್ ಔಟಾಗುತ್ತಿದ್ದಂತೆ ಆಡಲ ಇಳಿದ ವಿರಾಟ್​ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು. ಆರಂಭದಲ್ಲಿ ಸಾವಧಾನದಿಂದ ಬ್ಯಾಟ್​ ಮಾಡಿದ ಅವರು ಎಂದಿನಂತೆಯೇ ರನ್ ಗಳಿಕೆಗೆ ವೇಗ ತಂದದು. ಅವರಿಗೆ ಶುಭ್​ಮನ್ ಗಿಲ್ ಕೂಡ ಸಾಥ್ ಕೊಟ್ಟರು. ಆದರೆ, ಮುಂಬಯಿಯ ಉರಿ ಬಿಸಿಲು ತಾಳಲಾರದೆ ಶುಭ್​ಮನ್ ಗಿಲ್ ಅಸ್ವಸ್ಥರಾದರು. ಹೀಗಾಗಿ 79 ರನ್​ ಬಾರಿಸಿ ಅವರು ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ಶ್ರೇಯಸ್ ಅಯ್ಯರ್​ ಕಣಕ್ಕೆ ಇಳಿದರು. ಶ್ರೇಯಸ್​ ಮತ್ತು ಕೊಹ್ಲಿ ನ್ಯೂಜಿಲ್ಯಾಂಡ್ ಬೌಲರ್​ಗಳನ್ನು ಬೆಂಡೆತ್ತಿದರು.

ಇದನ್ನೂ ಓದಿ : Virat kohli : ಸಚಿನ್​ ರೆಕಾರ್ಡ್​ ಮುರಿದು ಶತಕಗಳ ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ

ಶ್ರೇಯಸ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ಅಂತಿಮವಾಗಿ ವಿರಾಟ್ ಕೊಹ್ಲಿ ಏಕ ದಿನ ಕ್ರಿಕೆಟ್ ಇತಿಹಾಸದದಲ್ಲಿ ಅತ್ಯಧಿಕ ಶತಕ (50) ಬಾರಿಸಿದ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಮುಂಬಯಿಯ ರಣ ಬಿಸಿಲಿಗೆ ಮೈಯೊಡ್ಡಿ ಆಡಿದ ವಿರಾಟ್​ ವಿಕೆಟ್​ಗಳ ಮಧ್ಯೆ ನಿರಂತರ ಓಡುತ್ತಾ ರನ್ ಗಳಿಸಿದರು. ಅವರು 106 ಎಸೆತಕ್ಕೆ ಶತಕ ಬಾರಿಸಿ 113 ಎಸೆತಕ್ಕೆ 117 ರನ್ ಪೇರಿಸಿ ಔಟಾದರು. ಅವರ ಇನಿಂಗ್ಸ್​ನಲ್ಲಿ 9 ಫೋರ್ ಹಾಗೂ 2 ಸಿಕ್ಸರ್​ಗಳಿದ್ದವು.

ಶ್ರೇಯಸ್ ಅಯ್ಯರ್​ ಅಬ್ಬರದ ಶತಕ

ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್​ ಅಯ್ಯರ್​ ಈ ಪಂದ್ಯದಲ್ಲೂ ಅಬ್ಬರದಿಂದ ಬ್ಯಾಟ್ ಮಾಡಿದರು. ಈ ಬಾರಿ 67 ಎಸೆತಗಳಲ್ಲಿ ಶತಕ ಬಾರಿಸಿದ ಅಯ್ಯರ್​ 70 ಎಸೆತಕ್ಕೆ 105 ರನ್ ಬಾರಿಸಿ ಔಟಾದರು. ಅವರ ಇನಿಂಗ್ಸ್​ನಲ್ಲಿ 8 ಸಿಕ್ಸರ್ ಮತ್ತು 4 ಫೋರ್​ಗಳಿದ್ದವು. ಕೊಹ್ಲಿ ಹಾಗೂ ಶ್ರೇಯಸ್​ ಬ್ಯಾಟಿಂಗ್​ನಿಂದಾಗಿ ಭಾರತ ದೊಡ್ಡ ಮೊತ್ತ ಪೇರಿಸಿತು.

ಅಂತಿಮವಾಗಿ ಕೆ. ಎಲ್ ರಾಹುಲ್​ 20 ಎಸೆತಗಳಲ್ಲಿ 39 ರನ್ ಬಾರಿಸಿ ಭಾರತ ತಂಡದ ಮೊತ್ತ 400 ಸನಿಹ ಬೆಳೆಯುವಂತೆ ನೋಡಿಕೊಂಡರು. ಸೂರ್ಯಕುಮಾರ್ ಯಾದವ್​ 1ರನ್‌ಗೆ ಔಟಾದ ಬಳಿಕ ಆಡಲು ಬಂದ ಶುಭ್​ಮನ್​ ಗಿಲ್​ ತಮ್ಮ ಮೊತ್ತವನ್ನು 80ಕ್ಕೆ ಏರಿಸಿದರು.

ನ್ಯೂಜಿಲ್ಯಾಂಡ್​ ಪರ ಟಿಮ್ ಸೌಥಿ 3 ವಿಕೆಟ್ ಪಡೆದರೆ ಬೌಲ್ಟ್​ 1 ವಿಕೆಟ್ ಪಡೆದರು.

Exit mobile version