Site icon Vistara News

Anurag Thakur : 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್​​; ಅನುರಾಗ್ ಠಾಕೂರ್​

Anurag Thakur

ಬೆಂಗಳೂರು: 2036ರ ಒಲಿಂಪಿಕ್ಸ್​ ಆಯೋಜಿಸಲು ಭಾರತ ಸಿದ್ಧವಿದೆ ಎಂಬುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ. ಈ ವೇಳೆ ಅವರು ಭಾರತದ ಮಹತ್ವಾಕಾಂಕ್ಷೆಯ ಒಲಿಂಪಿಕ್ ಆಕಾಂಕ್ಷೆಗಳನ್ನು ಹಲವು ಕ್ರೀಡಾಕೂಟಗಳ ಆಯೋಜನೆ ಮೂಲಕ ಹೇಗೆ ಸಾಧಿಸಬಹುದು ಎಂಬುದನ್ನು ವಿವರಿಸಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics) ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಠಾಕೂರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರದರ್ಶನವನ್ನು ಹೆಚ್ಚಿಸಲು ದೃಢ ಬದ್ಧತೆ ವ್ಯಕ್ತಪಡಿಸಿದರು. ಅದೇ ರೀತಿ ಭವಿಷ್ಯದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಭಾರತ ಆತಿಥ್ಯ ವಹಿಸುವ ಯೋಜನೆಗಳನ್ನು ಠಾಕೂರ್​ ಇದೇ ವೇಳೆ ತಿಳಿಸಿ ಅದುವೇ ಒಲಿಂಪಿಕ್ಸ್ ಆಚರಣೆಗೆ ಮಾನದಂಡವಾಗಲಿದೆ ಎಂದು ಹೇಳಿದರು.

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನಾವು ನಮ್ಮ ಪದಕಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. 2030ರ ಯೂತ್ ಒಲಿಂಪಿಕ್ಸ್ ಮತ್ತು 2036ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯವನ್ನು ಭಾರತದಲ್ಲಿ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮುಂಬೈನಲ್ಲಿ ನಡೆದ ಐಒಸಿ ಅಧಿವೇಶನದಲ್ಲಿ 2036 ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು ಎಂದು ಠಾಕೂರ್ ನುಡಿದರು.

ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆ

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಲಾಸ್ ಏಂಜಲೀಸ್​​ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್​​ನಲ್ಲಿ ಕ್ರಿಕೆಟ್ ಆಟವನ್ನು ಸ್ಪರ್ಧೆಗಳ ಪಟ್ಟಿಗೆ ಸೇರಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ, ಈವೆಂಟ್ ಅನ್ನು 20 ಓವರ್​ಗಳ ಸ್ವರೂಪದಲ್ಲಿ ನಡೆಸಲಾಗುತ್ತದೆ ಆದಾಗ್ಯೂ, ಚತುಷ್ಕೋನ ಪಂದ್ಯಾವಳಿಯಲ್ಲಿ ಕ್ರೀಡೆಯನ್ನು ಆಯೋಜಿಸಲು ಟಿ 10 ಸ್ವರೂಪವನ್ನು ಸಹ ಪರಿಗಣಿಸಬಹುದು ಎಂಬ ವದಂತಿಗಳು ಹೆಚ್ಚಾಗಿವೆ.

ಇದನ್ನೂ ಓದಿ : Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

ಇದಕ್ಕೂ ಮೊದಲು 2023 ರಲ್ಲಿ, ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಲಾಸ್ ಏಂಜಲೀಸ್​​ನಲ್ಲಿ ನಡೆಯಲಿರುವ ಕ್ರೀಡಾಕೂಟದ ಭಾಗವಾಗಿ ಕ್ರಿಕೆಟ್​ ಆಟವನ್ನು ಸೇರಿಸಲು ಅಂತಾರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅನುಮೋದನೆ ನೀಡಿದೆ ಎಂಬ ಮಾಹಿತಿ ಹಂಚಿಕೊಂಡಿದ್ದರು.

“ಎಲ್ಎ 28 ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯನ್ನು ಐಒಸಿ ಅಧಿವೇಶನವು ಒಪ್ಪಿದೆ. ಎಲ್ಎ 28 ಕ್ರೀಡಾಕೂಟದಲ್ಲಿ ನಮ್ಮ ಶ್ರೇಷ್ಠ ಕ್ರೀಡೆಯನ್ನು ಪ್ರದರ್ಶಿಸುವ ಅವಕಾಶ ನಮಗಿದೆ ಎಂದು ಹೇಳಿದ್ದರು.

Exit mobile version