ಚೆನ್ನೈ : ಮಹಾಬಲಿಪುರಮ್‌ನಲ್ಲಿ ಜುಲೈ ೨೮ರಿಂದ ಆಗಸ್ಟ್ ೧೦ರವರೆಗೆ ನಡೆಯಲಿರುವ chess olympiad ಸ್ಪರ್ಧೆಯಿಂದ ಏಕಾಏಕಿ ಹಿಂದೆ ಸರಿಯುವ ಮೂಲಕ ರಾಜಕೀಯ ಮಾಡಿದ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಚೆಸ್ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದು ಅಭ್ಯಾಸ ಆರಂಭಿಸಿರುವ ಹೊರತಾಗಿಯೂ, ಏಕಾಏಕಿ ವಾಪಸಾಗುವ ಮೂಲಕ ಪಾಕಿಸ್ತಾನ ಕ್ರೀಡೆಯಲ್ಲೂ ರಾಜಕೀಯ ಮಾಡಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
೪೪ನೇ chess olympiad ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪಾಕಿಸ್ತಾನದಿಂದಲೂ ಚೆಸ್ ಪಟುಗಳ ತಂಡ ಭಾರತಕ್ಕೆ ಬಂದಿತ್ತು. ಇಲ್ಲಿ ಅಭ್ಯಾಸವನ್ನೂ ಆರಂಭಿಸಿತ್ತು. ಏತನ್ಮಧ್ಯೆ, chess olympiad ಕ್ರೀಡಾ ಜ್ಯೋತಿ ಯಾತ್ರೆ ಜಮ್ಮು ಕಾಶ್ಮೀರದ ಶ್ರೀನಗರ ಮೂಲಕ ಹಾದು ಹೋಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಾಕಿಸ್ತಾನ ತಮ್ಮ ಸ್ಪರ್ಧಿಗಳನ್ನು ವಾಪಸ್ ಕರೆಸಿಕೊಂಡು, ಬಹಿಷ್ಕಾರ ಹೇಳಿತ್ತು. ಶ್ರೀನಗರದಲ್ಲಿ ಜ್ಯೋತಿ ಯಾತ್ರೆ ನಡೆಸುವ ಮೂಲಕ ಭಾರತ ಕ್ರೀಡೆಯಲ್ಲಿ ಗಡಿ ತಂಟೆಯ ವಿವಾದವನ್ನು ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿತ್ತು.
ಈ ಹಿನ್ನಲೆಯಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ “ಪಾಕಿಸ್ತಾನ chess olympiad ಸ್ಪರ್ಧೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸುವುದು ಅಚ್ಚರಿ ತಂದಿದೆ. ಒಂದು ಬಾರಿ ಭಾರತಕ್ಕೆ ತಲುಪಿದ ಬಳಿಕವೂ ವಾಪಸ್ ತೆರಳಿರುವುದು ಸರಿಯುವ ಮೂಲಕ ರಾಜಕೀಯ ಮಾಡಲು ಮುಂದಾಗಿದೆ,” ಎಂದು ಹೇಳಿದೆ.
“ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಭಾರತದ ಅವಿಭಾಜ್ಯ ಭೂಪ್ರದೇಶವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿಯೂ ಪಾಕಿಸ್ತಾನ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಸಂಗತಿ,” ಎಂದು ಅವರು ಹೇಳಿದ್ದಾರೆ.
chess olympiad ಆರಂಭದಲ್ಲಿ ರಷ್ಯಾದ ಅತಿಥ್ಯದಲ್ಲಿ ನಡೆಯುವುದಾಗಿ ಹೇಳಲಾಗಿತ್ತು. ಆದರೆ ಉಕ್ರೇನ್ ಮೇಲಿನ ಮಿಲಿಟರಿ ದಾಳಿಯನ್ನು ಖಂಡಿಸಿ ಆ ದೇಶದಿಂದ ಆತಿಥ್ಯ ವಾಪಸ್ ಪಡೆಯಲಾಗಿತ್ತು. ಅದನ್ನು ಭಾರತಕ್ಕೆ ನೀಡಲಾಗಿತ್ತು.