ಬೆಂಗಳೂರು: ಏಷ್ಯಾ ಕಪ್ 2023 ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪೂರಕವಾಗಿರಲಿಲ್ಲ. ನಂ.1 ಏಕದಿನ ತಂಡವಾಗಿ ಪಂದ್ಯಾವಳಿ ಪ್ರವೇಶಿಸಿದ ಪಾಕ್ ತಂಡ ಇದೀಗ ಮೂರನೇ ತಂಡಕ್ಕೆ ಇಳಿದಿದೆ. ಇದಕ್ಕೆ ಕಾರಣ ಭಾರತ ತಂಡ. ಸತತವಾಗಿ ಎರಡು ಗೆಲುವು ದಾಖಲಿಸಿರುವ ಭಾರತ ರ್ಯಾಂಕ್ ಪಟ್ಟಿಯಲ್ಲಿ ಮೇಲಕ್ಕೇರಿದೆ. ಹೀಗಾಗಿ ಪಾಕ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ರೋಹಿತ್ ಬಳಗ ಪಾಕ್ ತಂಡದ ಗಾಯದ ಮೇಲೆ ಉಪ್ಪು ಸವರಿದಿದೆ. ಇದಕ್ಕೆ ಶ್ರೀಲಂಕಾ ತಂಡವೂ ಕಾರಣ. ಸೂಪರ್ 4 ಹಂತದ ಪಂದ್ಯದಲ್ಲಿ ಲಂಕಾ ತಂಡವೂ ಪಾಕ್ ತಂಡವನ್ನು ಸೋಲಿಸಿದೆ.
ಬಾಬರ್ ಅಜಮ್ ನೇತೃತ್ವದ ತಂಡವು ನೇಪಾಳ ಮತ್ತು ಬಾಂಗ್ಲಾದೇಶದ ವಿರುದ್ಧ ದೊಡ್ಡ ಗೆಲುವುಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿತು ಆದರೆ ಸೂಪರ್ 4 ಹಂತದಲ್ಲಿ ಭಾರತದ ವಿರುದ್ಧ ದೊಡ್ಡ ಅಂತರದ ಸೋಲನ್ನು ಅನುಭವಿಸಿತು. ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ, ಕೊನೆಯ ಎಸೆತದವರೆಗೂ ಹೋದ ಪಂದ್ಯದಲ್ಲಿ ಅವರು ಎರಡು ವಿಕೆಟ್ಗಳಿಂದ (ಡಕ್ವರ್ತ್ ಲೂಯಿಸ್ ವಿಧಾನದ ಮೂಲಕ) ಸೋಲು ಕಂಡರು.
ಪಾಕಿಸ್ತಾನ ತನ್ನ ಇಬ್ಬರು ಪ್ರಮುಖ ವೇಗದ ಬೌಲರ್ಗಳಾದ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಅವರನ್ನು ಟೂರ್ನಿಯಲ್ಲಿ ಕಳೆದುಕೊಂಡಿತು. ಭಾರತ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಇಬ್ಬರೂ ಗಾಯಗೊಂಡಿದ್ದು, ಅಕ್ಟೋಬರ್ 5ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ 2023ರ ಆರಂಭದ ವೇಳೆಯೂ ಅವರ ಸೇವೆ ಪಾಕ್ ತಂಡಕ್ಕೆ ಸಿಗುವ ಸಾಧ್ಯತೆಗಳಿಲ್ಲ. ಈ ಇಬ್ಬರೂ ಆಟಗಾರರು ಗಾಯಗೊಂಡಿರುವುದು ಭಾರತ ವಿರುದ್ಧದ ಪಂದ್ಯದ ವೇಳೆ ಎಂಬುದು ಕಾಕತಾಳೀಯ.
ಪಾಕ್ ಹಿಂದಿಕ್ಕಿದ ಆಸೀಸ್
ಪಾಕಿಸ್ತಾನ ತಂಡದ ಸಮಸ್ಯೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲೆರುವ ಪಂದ್ಯಗಳನ್ನು ಪಂದ್ಯಗಳನ್ನು ಗೆಲ್ಲುವ ಆಸ್ಟ್ರೇಲಿಯಾವು ಪಾಕ್ ತಂಡವನ್ನು ಮೊದಲ ಸ್ಥಾನದಿಂದ ಕೆಳಕ್ಕೆ ಇಳಿಸಿತ್ತು. ಆದರೆ ಈಗ ಪಾಕಿಸ್ತಾನವು ಎರಡನೇ ಸ್ಥಾನವವನ್ನೂ ಸಹ ಕಳೆದುಕೊಂಡಿದೆ. ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲನುಭವಿಸಿದ ನಂತರ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬದಲಾವಣೆ ಕಂಡುಬಂದಿದೆ. ಭಾರತವು ಅವರನ್ನು ಹಿಂದಿಕ್ಕಿದ್ದರಿಂದ ಪಾಕ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಏಷ್ಯಾಕಪ್ ಗೆದ್ದರೆ ಭಾರತ ನಂ.1
ಭಾರತ 116 ಅಂಕಗಳೊಂದಿಗೆ ಎರಡನೇ , ಪಾಕಿಸ್ತಾನ 115 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ 118 ರೇಟಿಂಗ್ ಅಂಕಗಳೊಂದಿಗೆ ಮೊದಲ . ಈ ವಾರಾಂತ್ಯದ ವೇಳೆಗೆ ಶ್ರೇಯಾಂಕದಲ್ಲಿ ಹೆಚ್ಚಿನ ಬದಲಾವಣೆಗಳು ಆಗಬಹುದು.
ಇದನ್ನೂ ಓದಿ : Tilak Varma: ಏಕದಿನಕ್ಕೆ ಪದಾರ್ಪಣೆ ಮಾಡಿದ ತಿಲಕ್ ವರ್ಮ; ಗಾಯಾಳು ಅಯ್ಯರ್ ಬದಲು ವಿಶ್ವಕಪ್ಗೆ ಆಯ್ಕೆ?
ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ ಶುಕ್ರವಾರ ಬಾಂಗ್ಲಾದೇಶಕ್ಕೆ ಮುಖಾಮುಖಿಯಾಗಿದೆ. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಏಷ್ಯಾಕಪ್ ಗೆದ್ದರೆ, ರೋಹಿತ್ ಶರ್ಮಾ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಉಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಸೋತರೆ ಅಗ್ರ ಶ್ರೇಯಾಂಕದ ತಂಡ ಎನಿಸಿಕೊಳ್ಳಲಿದೆ. . ವಿಶ್ವಕಪ್ಗೆ ಮುನ್ನ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕಾಗಿ ಹೋರಾಡಲಿವೆ.
ಗುರುವಾರ ನಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತ್ಯಂತ ರೋಚಕವಾಗಿತ್ತು. ಪಂದ್ಯಕ್ಕೆ ಮಳೆ ಅಡಚಣೆ ಉಂಡು ಮಾಡಿದ ಕಾರಣ 42 ಓವರ್ಗಳಿಗೆ ಕಡಿತ ಮಾಡಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 7 ವಿಕೆಟ್ ನಷ್ಟಕ್ಕೆ 252 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಸಹ ಆತಿಥೇಯ ಲಂಕಾ ಬಳಗ 42ನೇ ಓವರ್ನ ಕೊನೇ ಎಸೆತದಲಲಿ 2 ರನ್ ಬಾರಿಸಿತು. ಈ ಮೂಲಕ 8 ವಿಕೆಟ್ಗಳಿಗೆ 252 ರನ್ ಬಾರಿಸಿತು. ಆದರೆ, ಡಕ್ವತ್ತ್ ಲೂಯಿಸ್ ನಿಯಮದ ಪ್ರಕಾರ ಲಂಕಾ ಗೆದ್ದಿತು ಹಾಗೂ ಫೈನಲ್ಗೆ ಪ್ರವೇಶಿಸಿತು.