Site icon Vistara News

Asia Cup 2023 : ಭಾರತ ತಂಡದ ಗೆಲುವಿಗೆ 51 ರನ್​ಗಳ ಸಾಧಾರಣ ಗುರಿ

Siraj

ಕೊಲೊಂಬೊ: ಏಷ್ಯಾ ಕಪ್​ ಫೈನಲ್​ನಲ್ಲಿ (Asia Cup 2023 ) ಭಾರತ ತಂಡದ ಬೌಲರ್​ಗಳು ಅಬ್ಬರಿಸಿದ್ದಾರೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್​ಗಳಿಗೆ ಆಲ್​ಔಟ್​ ಮಾಡಿದೆ. ಇದು ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ತಂಡದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಕಂಡರು. ಕುಸಾಸ್​ ಮೆಂಡಿಸ್​​ (17) ಹಾಗೂ ದುಶಾನ್​ ಹೇಮಂತ (13) ಬಿಟ್ಟರೆ ಉಳಿದ ಯಾವ ಆಟಗಾರರೂ ಎರಂಡಕಿ ಮೊತ್ತ ದಾಟಲಿಲ್ಲ.

ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್​ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟರ್​ಗಳೆಲ್ಲರೂ ಪತರಗುಟ್ಟುವಂತೆ ಮಾಡಿದ ಅವರು ತಮ್ಮ 7 ಓವರ್​ಗಳ ಸ್ಪೆಲ್​ನಲ್ಲಿ 21 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ತಮ್ಮ ಬೆಂಕಿಯುಂಡೆಯಂಥ ಚೆಂಡುಗಳ ಮೂಲಕ ಲಂಕಾದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್​ ಮಾಡಿದ್ದಾರೆ.

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ 2.2 ಓವರ್​ಗಳ 3 ರನ್​ ಬಾರಿಸಿ 3 ವಿಕೆಟ್ ಪಡೆದರು. ಜಸ್​ಪ್ರಿತ್​ ಬುಮ್ರಾ ತಮ್ಮ 5 ಓವರ್​ಗಳ ಸ್ಪೆಲ್​ನಲ್ಲಿ 23 ರನ್​ಗಳಿಗೆ 1 ವಿಕೆಟ್​ ಪಡೆದರು.

ಲಂಕಾದ ಕಳಪೆ ಬ್ಯಾಟಿಂಗ್​

ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡ ಒಂದು ರನ್​ಗೆ 1 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಕಳಪೆ ಆರಂಭ ಪಡೆಯಿತು. ಕುಸಾಲ್​ ಪೆರೆರಾ ಶೂನ್ಯಕ್ಕೆ ಔಟಾದರು. ಇದಾದ ಬಳಿಕ 8 ರನ್​ಗೆ 2 ನೇ ವಿಕೆಟ್ ಪತನಗೊಂಡಿತು. ಕುಸಾಲ್ ಮೆಂಡಿಸ್​ 17 ರನ್ ಬಾರಿಸಿ ಸ್ವಲ್ಪ ಹೊತ್ತು ಉಳಿದರು. ಅವರು ಸಿರಾಜ್​ ಬೌಲಿಂಗ್​ಗೆ ಬೌಲ್ಡ್ ಆದರು. ಬಳಿಕ ಬಂದ ಸದೀರ ಸಮರವಿಕ್ರಮ, ಚರಿತ್​ ಅಸಲಂಕಾ, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಧನಂಜಯ ಡಿಸಿಲ್ವಾ 4 ರನ್​ಗೆ ಔಟಾದರೆ, ದಸುನ್​ ಶನಕ ಶೂನ್ಯಕ್ಕೆ ಪೆವಿಲಿಯನ್​ಗೆ ಮರಳಿದರು. ದುನಿತ್​ ವೆಲ್ಲಾಲಗೆ 8 ರನ್​ಗೆ ಪೆವಿಲಿಯನ್​ಗೆ ಮರಳಿದರೆ, 13 ರನ್​ ಬಾರಿಸಿದ ದುಶಾನ್​ ಔಟಾಗದೇ ಉಳಿದರು. ಪ್ರಮೋದ್ ಮದುಶಾನ್​ 1 ರನ್​ ಹಾಗೂ ಮತೀಶಾ ಮತಿರಾಣಾ ಶೂನ್ಯಕ್ಕೆ ಔಟಾದರು.

ಇದನ್ನೂ ಓದಿ : India vs Sri Lanka Final: ರಾತ್ರಿ ಕೊಲಂಬೊ ತಲುಪಿದ ಸುಂದರ್​; ಮಧ್ಯಾಹ್ನ ಫೈನಲ್ ಪಂದ್ಯಕ್ಕೆ ಹಾಜರ್​​

ಏಷ್ಯಾಕಪ್​ನಲ್ಲಿ ದಾಖಲೆ

ಏಷ್ಯಾ ಕಪ್​ನ ಏಕದಿನ ಮಾದರಿಯಲ್ಲಿ ಅತಿ ಕಡಿಮೆ ರನ್​ ನೀಡಿ 6 ವಿಕೆಟ್ ಪಡೆದ ಲಂಕಾದ ಅಜಂತಾ ಮೆಂಡೀಸ್​ ಅವರ ದಾಖಲೆಯನ್ನು ಸಿರಾಜ್​ ಸರಿಗಟ್ಟಿದರು. ಮೆಂಡೀಸ್​ 2008ರಲ್ಲಿ 13 ರನ್​ಗೆ 6 ವಿಕೆಟ್​ ಕಡೆವಿದ್ದರು. ಇದು ಈವರೆಗಿನ ಏಷ್ಯಾಕಪ್​ ದಾಖಲೆಯಾಗಿತ್ತು. ಈಗ ಈ ದಾಖಲೆಯನ್ನು ಸಿರಾಜ್​ ಸರಿಗಟ್ಟಿದ್ದಾರೆ. ಸಿರಾಜ್​ ಕೂಡ 13 ರನ್​ಗೆ 6 ಕಿತ್ತರು.

ಸಿರಾಜ್​ ದರ್ಬಾರ್​

ಮೊಹಮ್ಮದ್​ ಸಿರಾಜ್​ ಒಂದೇ ಓವರ್​ನಲ್ಲಿ 4 ವಿಕೆಟ್​ ಕೆಡವಿದರು. ಇಲ್ಲಿಗೆ ಸುಮ್ಮನಾಗದ ಅವರು ಮುಂದಿನ ಓವರ್​ನಲ್ಲಿಯೂ ಒಂದು ವಿಕೆಟ್​ ಕಿತ್ತು ಮಿಂಚಿದರು. ಸಿರಾಜ್ ಅವರ ಬೆಂಕಿ ಎಸೆತಕ್ಕೆ ಯಾವ ರೀತಿ ಬ್ಯಾಟ್​ ಬೀಸಬೇಕೆಂದೇ ಲಂಕಾ ಆಟಗಾರರಿಗೆ ತಿಳಿಯದೇ ಹೋಯಿತು.

ಸಿರಾಜ್ ಮೊದಲು ಪಾತುಮ್ ನಿಸ್ಸಾಂಕಾ ಅವರ ವಿಕೆಟ್ ಕಿತ್ತರು. ಬಳಿಕ​ ಚರಿತ ಅಸಲಂಕಾ, ಸದೀರ ಸಮರವಿಕ್ರಮ ಮತ್ತು ಧನಂಜಯ ಡಿ ಸಿಲ್ವಾ ಅವರ ವಿಕೆಟ್‌ಗಳನ್ನು ಕಿತ್ತರು. ಶ್ರೀಲಂಕಾ ನಾಲ್ಕು ಓವರ್‌ಗಳಲ್ಲಿ 12 ರನ್​ಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಘಾತಕ ಬೌಲಿಂಗ್​ ನಡೆಸಿದ ಸಿರಾಜ್​ ಕೇವಲ 16 ಎಸೆತಗಳಲ್ಲಿ ಐದು ವಿಕೆಟ್​ ಉರುಳಿಸಿ ಚಾಮಿಂಡ ವಾಸ್​ ಅವರ ದಾಖಲೆಯನ್ನು ಮೀರಿ ನಿಂತರು. ಇದಲ್ಲದೆ ತಂಡದ 10 ಓವರ್​ಗೂ ಮುನ್ನ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡರು. ಇದಕ್ಕೂ ಮುನ್ನ ಜಾವಗಲ್​ ಶ್ರೀನಾಥ್​ ಅವರು 2003 ರಲ್ಲಿ 4 ವಿಕೆಟ್​ ಕಿತ್ತದ್ದು ಭಾರತೀಯ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಸಿರಾಜ್​ ಮುರಿದಿದ್ದಾರೆ.

Exit mobile version