Site icon Vistara News

ind vs NZ : ಭಾರತ ತಂಡಕ್ಕೆ 274 ರನ್​ಗಳ ಗೆಲುವಿನ ಗುರಿ

Daril Mitchel

ಧರ್ಮಶಾಲಾ: ಡ್ಯಾರಿಲ್ ಮಿಚೆಲ್​ (130) ಅವರ ಶತಕ ಹಾಗೂ ಯುವ ಬ್ಯಾಟರ್​ ರಚಿನ್ ರವೀಂದ್ರ (75) ಅವರ ಅರ್ಧ ಶತಕದ ನೆರವು ಪಡೆದ ನ್ಯೂಜಿಲ್ಯಾಂಡ್ (ind vs NZ )​ ತಂಡ ಭಾರತ ವಿರುದ್ಧದ ವಿಶ್ವ ಕಪ್​​ನ ಪಂದ್ಯದಲ್ಲಿ 273 ರನ್​ಗಳನ್ನು ಗಳಿಸಿದೆ. ಇದರೊಂದಿಗೆ ಭಾರತ ತಂಡಕ್ಕೆ 274 ರನ್​ಗಳ ಗೆಲುವಿನ ಸವಾಲು ಎದುರಾಗಿದೆ. ಹಾಲಿ ವಿಶ್ವ ಕಪ್​ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್​ ತಲಾ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಮೊದಲ ಸ್ಥಾನಕ್ಕಾಗಿ ಇತ್ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 273 ರನ್​ಗಳಿಗೆ ಆಲ್​ಔಟ್​ ಆಯಿತು. ಭಾರತ ತಂಡದ ಪರ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಡಿದ 54 ರನ್​ಗಳಿಗೆ 5 ವಿಕೆಟ್​ ಪಡೆದು ಮಿಂಚಿದರು. ಮೊದಲ ಪಂದ್ಯದಲ್ಲಿಯೇ ಅವರು 5 ವಿಕೆಟ್​ ಪಡೆದು ಮಿಂಚಿದರು.

ಬ್ಯಾಟಿಂಗ್​ ಶುರುಮಾಡಿದ ನ್ಯೂಜಿಲ್ಯಾಂಡ್​ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಉತ್ತಮ ಫಾರ್ಮ್​ನಲ್ಲಿದ್ದ ಡೆವೋನ್​ಕಾನ್ವೆ 9 ಎಸೆತಗಳನ್ನು ಎದುರಿಸಿ ಸೊನ್ನೆಗೆ ಔಟಾದರು. ಈ ವೇಳೆ ತಂಡ 9 ರನ್ ಬಾರಿಸಿತ್ತು. ಸಿರಾಜ್​ ಎಸೆತಕ್ಕೆ ಶ್ರೇಯಸ್​ ಅಯ್ಯರ್​ ಹಿಡಿದ ಅದ್ಭುತ ಕ್ಯಾಚ್​ಗೆ ಅವರು ಕಾನ್ವೆ ಔಟಾದರು. ಅದೇ ರೀತಿ 19 ರನ್​ಗೆ ಕಿವೀಸ್ ತಂಡದ ಎರಡನೇ ವಿಕೆಟ್ ಪತನಗೊಂಡಿತ್ತು. ಮತ್ತೊಬ್ಬ ಆರಂಭಿಕ ಬ್ಯಾಟರ್​ ವಿಲ್ ಯಂಗ್​ 17 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

ರಚಿನ್​, ಮಿಚೆಲ್ ಶತಕದ ಜತೆಯಾಟ

ಆರಂಭಿಕ ಹಿನ್ನಡೆಯ ಹೊರತಾಗಿಯೂ ನ್ಯೂಜಿಲ್ಯಾಂಡ್​ ತಂಡ ಚೇತರಿಸಿಕೊಂಡಿತು. ರಚಿನ್ ರವಿಂದ್ರ ಹಾಗೂ ಮಿಚೆಲ್​ ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಭಾರತ ತಂಡದ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಶತಕದ ಜತೆಯಾಟವಾಡಿತು. ಹಿಂದಿನ ಪಂದ್ಯಗಳಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ್ದ ಭಾರತ ತಂಡ ಈ ಧರ್ಮಶಾಲಾದಲ್ಲಿ ಕೆಟ್ಟ ಫೀಲ್ಡಿಂಗ್ ಪ್ರದರ್ಶನ ನೀಡಿತು. ಈ ಇಬ್ಬರಿಗೆ ಕೆಲವೊಂದು ಜೀವದಾನಗಳನ್ನು ಭಾರತೀಯ ಫೀಲ್ಡರ್​ಗಳು ನೀಡಿದರು. ಜಡೇಜಾ ಸಮೇತ ಹಲವರು ಕ್ಯಾಚ್ ಕೈಚೆಲ್ಲಿದರು. ಮಿಚೆಲ್ ಹಾಗೂ ರಚಿನ್ ಜೋಡಿ ಮೂರನೇ ವಿಕೆಟ್​ಗೆ 159 ರನ್ ಬಾರಿಸಿತು.

ಇದನ್ನೂ ಓದಿ : Rohit Sharma : ಗಾಯದ ನೋವಿಗೆ ಮೈದಾನವನ್ನೇ ಶಪಿಸಿದ ರೋಹಿತ್​ ಶರ್ಮಾ

ಶಮಿಯ ಎಸೆತಕ್ಕೆ ರಚಿನ್ ರವಿಂದ್ರ ಔಟಾದ ಬಳಿಕ ನ್ಯೂಜಿಲ್ಯಾಂಡ್​ ತಂಡ ರನ್​ ಗಳಿಕೆ ವೇಗ ಕಡಿಮೆಯಾಯಿತು. ಅಲ್ಲದೆ, ನಾಐಕ ಟಾಮ್ ಲೇಥಮ್​ 5 ರನ್ ಬಾರಿಸಿ ಔಟಾದರು. ಬಳಿಕ ಬಂದ ಗ್ಲೆನ್ ಫಿಲಿಪ್ಸ್​ 26 ಎಸೆತಗಳಿಗೆ 23 ರನ್ ಬಾರಿಸಿದರು. ಅದಕ್ಕಿಂತ ಮೊದಲು 100 ಎಸೆತಕ್ಕೆ ಡ್ಯಾರಿಲ್​ ಮಿಚೆಲ್​ ತಮ್ಮ ಶತಕ ಬಾರಿಸಿದರು. ಈ ವೇಳೆ ಕುಲ್ದೀಪ್​ ಯಾದವ್​ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೋಗಿ ಫಿಲಿಪ್ಸ್ ಔಟಾದರು. ಬಳಿಕ ಚಾಪ್ಮನ್ (6 ರನ್​)​ ಬುಮ್ರಾ ಎಸೆತಕ್ಕೆ ಔಟಾದರು. ಕೊನೆಯಲ್ಲಿ ನ್ಯೂಜಿಲ್ಯಾಂಡ್​ ಬೇಗ ವಿಕೆಟ್​ ಕಳೆದುಕೊಂಡಿತು. ಮಿಚೆಲ್​ ಸ್ಯಾಂಟ್ನರ್ ಹಾಗೂ ಮ್ಯಾಟ್​ ಹೆನ್ರಿಯನ್ನು ಮೊಹಮ್ಮದ್​ ಶಮಿ ಬೌಲ್ಡ್ ಮಾಡಿದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಡ್ಯಾರಿಲ್​ ಮಿಚೆಲ್​ 130 ರನ್​ಗಳಿಗೆ ಔಟಾಗಿದ್ದಾರೆ. ಅವರು 127 ಎಸೆತಗಳನ್ನು ಎದುರಿಸಿ 8 ಫೋರ್​ ಹಾಗೂ 5 ಸಿಕ್ಸರ್ ಬಾರಿಸಿದ್ದರು. ಶಮಿ ಎಸೆತಕ್ಕೆ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.

ಭಾರತ ಪರ ಬೌಲಿಂಗ್​ನಲ್ಲಿ ಶಮಿ ಮಿಂಚಿದರೆ, ಕುಲ್ದೀಪ್ ಯಾದವ್​ 2 ವಿಕೆಟ್​ ಹಾಗೂ ಜಸ್​ಪ್ರಿತ್​ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್​ ಪಡೆದರು.

Exit mobile version