Site icon Vistara News

IND vs ENG | ಕೊಹ್ಲಿ, ಪಾಂಡ್ಯ ಅರ್ಧ ಶತಕ; ಇಂಗ್ಲೆಂಡ್‌ಗೆ 169 ರನ್‌ ಗೆಲುವಿನ ಗುರಿ ಒಡ್ಡಿದ ಭಾರತ

IND vs ENG

ಅಡಿಲೇಡ್​: ವಿರಾಟ್‌ ಕೊಹ್ಲಿ (೫೦ ರನ್‌ ೪೦ ಎಸೆತ, ೪ ಫೋರ್‌, ೧ ಸಿಕ್ಸರ್‌), ಹಾರ್ದಿಕ್‌ ಪಾಂಡ್ಯ (೬೩ ರನ್‌, ೩೩ ಎಸೆತ, ೪ ಫೋರ್‌, ೫ ಸಿಕ್ಸರ್‌) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಭಾರತ ತಂಡ ಟಿ೨೦ ವಿಶ್ವ ಕಪ್‌ನ ಸೆಮಿ ಫೈನಲ್‌ ಪಂದ್ಯದಲ್ಲಿ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ ೧೬೯ ರನ್‌ ಗೆಲುವಿನ ಗುರಿ ಒಡ್ಡಿದೆ. ಅಡಿಲೇಡ್​ ಓವಲ್​ ಕ್ರಿಕೆಟ್​ ಸ್ಟೇಡಿಯಮ್‌ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ ೬ ವಿಕೆಟ್​ಗೆ ೧೬೮ ರನ್​ ಗಳಿಸಿತು. ಇಂಗ್ಲೆಂಡ್​ ಪರ ವಿಕೆಟ್​ ಕಿತ್ತು ಮಧ್ಯಮ ವೇಗಿ ಕ್ರಿಸ್‌ ಜೋರ್ಡಾನ್‌ ೩ ವಿಕೆಟ್‌ ಕಿತ್ತು ಭಾರತೀಯ ಬ್ಯಾಟರ್​ಗಳನ್ನು ಕಾಡಿದರು.

ಭಾರತಕ್ಕೆ ಆರಂಭಿಕ ಆಘಾತ

ಬಾಂಗ್ಲಾ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸತತ ಅರ್ಧಶತಕ ಬಾರಿಸಿ ಮಿಂಚಿದ್ದ ಕನ್ನಡಿಗ ಕೆ.ಎಲ್. ರಾಹುಲ್​ ಈ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು. ಕ್ರಿಸ್​ ವೋಕ್ಸ್​ ಅವರ ಮೊದಲ ಓವರ್​ನಲ್ಲೇ ಔಟಾಗುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ರಾಹುಲ್​ ಗಳಿಕೆ 5 ರನ್.​ ಅದರಲ್ಲಿ ಒಂದು ಬೌಂಡರಿ ಸೇರಿತ್ತು. ರಾಹುಲ್​ ವಿಕೆಟ್​ ಬಳಿಕ ನಿಧಾನಗತಿಯ ಆಟದ ಮೂಲಕ ತಂಡಕ್ಕೆ ನೆರವಾಗುವ ಸೂಚನೆ ನೀಡಿದ ನಾಯಕ ರೋಹಿತ್​ ಕೂಡ 27 ರನ್​ಗೆ ಆಟ ಮುಗಿಸಿದರು. ಕೊಹ್ಲಿ ಜತೆ ದ್ವಿತೀಯ ವಿಕೆಟ್​ಗೆ 47 ರನ್​ ಒಟ್ಟುಗೂಡಿಸಿದ್ದೇ ಸಮಾಧಾನಕರ ಸಂಗತಿ.

ಕೊಹ್ಲಿ ಆಸರೆ

ಒಂದೆಡೆ ತಂಡದ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಕ್ರೀಸ್‌ನಲ್ಲಿ ತಳವೂಡಿ ನಿಂತು ಆಂಗ್ಲರ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ಸು ಕಂಡ ವಿರಾಟ್​ ಕೊಹ್ಲಿವ೪ ಫೋರ್‌, ೧ ಸಿಕ್ಸರ್​ ಜತೆಗೆ ತಂಡದ ಮೊತ್ತವನ್ನು ಹೆಚ್ಚಿಸಿದರು. ೪೦ ಎಸೆತ ಎದುರಿಸಿದ ಅವರು ಅರ್ಧಶತಕ ಪೂರ್ತಿಗೊಳಿಸಿದ ಬೆನ್ನಲ್ಲೇ ವಿಕೆಟ್‌ ಒಪ್ಪಿಸಿದರು. ಇನ್ನು ಪ್ರತಿ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗುತ್ತಿದ್ದ ಸೂರ್ಯಕುಮಾರ್​ ಯಾದವ್​ ಆದಿಲ್ ರಶೀದ್​ ಅವರ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಪ್ರಯತ್ನಿಸಿ ಸಾಲ್ಟ್​ಗೆ ಕ್ಯಾಚ್​ ನೀಡುವ ಮೂಲಕ ನಿರಾಶೆ ಮೂಡಿಸಿದರು. ಸೂರ್ಯಕುಮಾರ್​ ಗಳಿಕೆ 14 ರನ್​ಗೆ ಸೀಮಿತ ಗೊಂಡಿತು. ಹಾರ್ದಿಕ್‌ ಪಾಂಡ್ಯ ಕೂಡ ೬ ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು.

ಸಿಡಿದ ಹಾರ್ದಿಕ್​ ಪಾಂಡ್ಯ

ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಹಾರ್ದಿಕ್​ ಪಾಂಡ್ಯ ಈ ಮಹತ್ವದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಕೇವಲ ೩೩ ಎಸೆತಗಳಲ್ಲಿ ೬೩ ರನ್‌ ಬಾರಿಸಿ ಕೊನೇ ಹಂತದಲ್ಲಿ ತಂಡಕ್ಕೆ ನೆರವಾದರು. ಅವರ ಇನಿಂಗ್ಸ್‌ನಲ್ಲಿ ೫ ಸಿಕ್ಸರ್‌ ಹಾಗೂ ೪ ಫೋರ್‌ಗಳು ಸೇರಿಕೊಂಡಿದ್ದವು. ಆದರೆ, ಜೋರ್ಡನ್‌ ಎಸೆದ ಇನಿಂಗ್ಸ್‌ನ ಕೊನೇ ಎಸೆತದಲ್ಲಿ ಹಿಟ್‌ ವಿಕೆಟ್‌ ಅಗುವ ಮೂಲಕ ನಿರಾಸೆ ಎದುರಿಸಿದರು. ಆ ಎಸೆತವನ್ನು ಅವರು ಬೌಂಡರಿ ಗೆರೆಗಿಂತ ಆಚೆ ಅಟ್ಟಿದ್ದರೂ, ಆ ೪ ರನ್‌ಗಳು ನಷ್ಟವಾದವು.

ಸಂಕ್ಷಿಪ್ತ ಸ್ಕೋರ್​: ಭಾರತ 20 ಓವರ್​ಗಳಲ್ಲಿ ೬ ವಿಕೆಟ್​ಗೆ ೧೬೮ ( ರೋಹಿತ್​ ಶರ್ಮಾ 27, ವಿರಾಟ್‌ ಕೊಹ್ಲಿ ೫೦, ಹಾರ್ದಿಕ್‌ ಪಾಂಡ್ಯ ೬೩; ಕ್ರಿಸ್‌ ಜೋರ್ಡಾನ್‌ 43ಕ್ಕೆ೩).

ಇದನ್ನೂ ಓದಿ | IND VS ENG | 35 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್​ ಮಧ್ಯೆ ಸೆಮಿಫೈನಲ್​ ಕಾದಾಟ

Exit mobile version