Site icon Vistara News

Team India : ಬಾಂಗ್ಲಾದೇಶವನ್ನು ಮಣಿಸಿದ ಭಾರತ ಯುವ ಕ್ರಿಕೆಟ್​ ತಂಡ ಫೈನಲ್​ಗೆ

India A cricket

ಕೊಲೊಂಬೊ: ನಿಶಾಂತ್ ಸಿಂಧು (20 ರನ್​ಗಳಿಗೆ 5 ವಿಕೆಟ್​) ಮಾರಕ ಬೌಲಿಂಗ್ ದಾಳಿಯ ನೆರವು ಪಡೆದ ಭಾರತ ಎ ತಂಡ (Team India) ಎಸಿಸಿ ಪುರುಷರ ಉದಯೋನ್ಮುಖ ತಂಡಗಳ ಏಷ್ಯಾ ಕಪ್​​ನ ಸೆಮಿಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡನ್ನು 51 ರನ್​ಗಳಿಂದ ಮಣಿಸಿ ಫೈನಲ್​ಗೇರಿದೆ. ಪ್ರಶಸ್ತಿ ಹೋರಾಟದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ತಂಡ 49.1 ಓವರ್​ಗಳಲ್ಲಿ 211 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಆಡಿದ ಬಾಂಗ್ಲಾ ತಂಡ 34.2 ಓವರ್​ಗಳಲ್ಲಿ 160 ರನ್​ಗಳಿಗೆ ಆಲ್​ಔಟ್ ಆಯಿತು. ಬಾಂಗ್ಲಾದೇಶ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡದ ಬಳಿಕ ಏಕಾಏಕಿ ಕುಸಿತ ಕಂಡು ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಧಾನಗತಿಯ ಆಟದೊಂದಿಗೆ ಮುಂದುವರಿಯಿತು. ಸಾಯಿ ಸುದರ್ಶನ್​ 21 ರನ್​ಗಳಿಗೆ ಔಟಾದರೆ, ಅಭಿಷೇಕ್​ ಶರ್ಮಾ 34 ರನ್​ಗಳಿಗೆ ಔಟಾದರು. ನಿಕಿ ಜೋಸ್​ 17 ರನ್​ಗಳಿಕೆ ವಿಕೆಟ್​ ಒಪ್ಪಿಸಿದರು. ಬಳಿಕ ನಾಯಕ ಯಶ್​ ಧುಲ್​ ಸಮಾಧಾಚಿತ್ತದಿಂದ ಆಡಿ 66 ರನ್​ ಬಾರಿಸಿದರು. ಆದರೆ, ನಿಶಾಂತ್ ಸಿಂಧು (05) , ರಿಯಾನ್​ ಪರಾಗ್​ (12), ಧ್ರುವ್ ಜುರೆಲ್​ (1) ಹಾಗೂ ಹರ್ಷಿತ್​ ರಾಣಾ (9) ಬೇಗನೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಮಾನವ್​ ಸುತಾರ್​ (21) ಹಾಗೂ ಹಂಗರ್​ಗೇಕರ್​ (15) ಕೊನೆಯಲ್ಲಿ ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ತಂಡದ ಮೊತ್ತ 200ರ ಗಡಿ ದಾಡುವಂತೆ ಮಾಡಿದರು.

ಇದನ್ನೂ ಓದಿ : Virat kohli : ಧೋನಿ- ತೆಂಡೂಲ್ಕರ್ ಸಾಲಿಗೆ ಸೇರಲಿದ್ದಾರೆ ವಿರಾಟ್ ಕೊಹ್ಲಿ, ಏನದು ದಾಖಲೆ?

ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ಆರಂಭಿಕ ಬ್ಯಾಟರ್​ಗಳಾದ ಮೊಹಮ್ಮದ್​ ನೈಮ್​ (38) ಹಾಗೂ ತಂಜಿದ್ ಹಸನ್​​ (51) ಅವರ ನೆರವಿನಿಂದ ಮೊದಲ ವಿಕೆಟ್​ಗೆ 70 ರನ್​ ಬಾರಿಸಿತು. ಈ ವೇಳೆ ಭಾರತಕ್ಕೆ ಜಯ ಕಷ್ಟ ಎನಿಸಿತು. ಆದರೆ, ಆ ಬಳಿಕ ಭಾರತ ತಂಡದ ಸ್ಪಿನ್ನರ್​ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶ ತಂಡದ ವಿಕೆಟ್​ಗಳನ್ನು ಉರುಳಿಸಿದರು. ನಿಶಾಂತ್ ಸಿಂಧುಗೆ ಉತ್ತಮ ಸಾಥ್​ ಕೊಟ್ಟ ಮಾನವ್ ಸುತಾರ್​ 32 ರನ್​ಗಳಿಗೆ 3 ವಿಕೆಟ್​ ಉರುಳಿಸಿದರು. ಹೀಗಾಗಿ 17 ಓವರ್​ಗಳಲ್ಲಿ 94 ರನ್​ ಬಾರಿಸಿದ್ದ ಬಾಂಗ್ಲಾದೇಶ 35ನೇ ಓವರ್​ಗೆ ಆಲ್​ಔಟ್ ಆಯಿತು.

Exit mobile version