Site icon Vistara News

Virat Kohli : ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ ಕೊಹ್ಲಿ, ರೋಹಿತ್​ ಟಿ20 ಭವಿಷ್ಯ

Virat Kohli

ಬೆಂಗಳೂರು: 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಕೊನೆಯ ವಿದೇಶ ಪ್ರವಾಸದ ಸಮಯ ಬಂದಿದೆ ಏಕದಿನ ವಿಶ್ವಕಪ್ ಸೋಲಿನ ನಿರಾಸೆಯ ನಂತರ, ನಿಧಾನವಾಗಿ ಗಮನ 2024ರ ಟಿ 20 ವಿಶ್ವಕಪ್ ಕಡೆಗೆ ತಿರುಗುತ್ತಿದೆ. ಏತನ್ಮಧ್ಯೆ ಡಿಸೆಂಬರ್ 10 ರಂದು ನಡೆಯುವ ಟಿ 20 ಸರಣಿ ಮೊದಲ ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಪ್ರಾರಂಭವಾಗಲಿದೆ. ಅದಕ್ಕೂ ಮುಂಚಿತವಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟಿಸುವುದು ಹಾಗೂ 2024 ರ ಟಿ20 ವಿಶ್ವಕಪ್​ಗೆ ಮುಂಚಿತವಾಗಿ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ (Virat Kohli) ಟಿ20 ಆ ಮಾದರಿಯಲ್ಲಿ ಉಳಿಯುತ್ತಾರೆಯೇ ಎಂಬುದನ್ನು ನಿರ್ಧರಿಸಬೇಕು. ಹೀಗಾಗಿ ಇನ್ನೊಂದು ವಾರದಲ್ಲಿ ಕೊಹ್ಲಿ ಮತ್ತು ರೊಹಿತ್ ಶರ್ಮಾ ಜೋಡಿಯು ಟಿ20 ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ.

ಎರಡೂ ವೈಟ್-ಬಾಲ್ ಸರಣಿಗಳಿಗೆ ತಂಡಗಳನ್ನು ಒಟ್ಟಿಗೆ ಘೋಷಣೆಯಾಗಲಿದೆ. ಆದಾಗ್ಯೂ, ಭಾರತ ಎ ಸರಣಿ ಆಡುವ ತನಕ ಟೆಸ್ಟ್ ತಂಡದ ಘೋಷಣೆ ಆಗಲಾರದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಖಚಿತ. ಆದರೆ, ಟಿ20 ಕ್ರಿಕೆಟ್​ ಭವಿಷ್ಯ ಏನು ಎಂಬುದೇ ಕೌತುಕ.

ಸೋಮವಾರದ ವಾರಾಂತ್ಯದಲ್ಲಿ ತಂಡವನ್ನು ಆಯ್ಕೆ ಮಾಡಲಾಗುವುದು. ಈ ವೇಳೆ ಚರ್ಚಿಸಲು ಬಹಳಷ್ಟು ವಿಷಯಗಳಿವೆ. ಆದರೆ ಟೆಸ್ಟ್​ಗೆ ಮುನ್ನ ನಮ್ಮ ತಂಡ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ದೊಡ್ಡ ನಿರ್ಧಾರ ಸಭೆಯಲ್ಲಿ ಪ್ರಕಟವಾಗಲಿದೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರೋಹಿತ್-ವಿರಾಟ್ ವೈಟ್ ಬಾಲ್ ಭವಿಷ್ಯ

ಏಕದಿನ ಪಂದ್ಯಗಳ ಬಗ್ಗೆ ಕೊಹ್ಲಿ ಮತ್ತು ರೋಹಿತ್ ಗಮನ ಹರಿಸುತ್ತಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡದ ಭಾಗವಾಗದೇ ಇದ್ದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವಿರಾಮ ಹೆಚ್ಚಿಸು ಸಾಧ್ಯತೆಗಳಿವೆ. ಅಂಥ ಸಂದರ್ಭದಲ್ಲಿ ಇಬ್ಬರೂ ಟೆಸ್ಟ್ ಸರಣಿಗೆ ಮಾತ್ರ ತಂಡಕ್ಕೆ ಮರಳುತ್ತಾರೆ. ವಿರಾಟ್ ಮತ್ತು ರೋಹಿತ್ ಇಬ್ಬರೂ ಕಳೆದ ವರ್ಷ ಟಿ 20 ವಿಶ್ವಕಪ್ ನಂತರ ಟಿ 20ಐ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಜೂನ್​ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024ಕ್ಕೆ ಮೊದಲು ಆಯ್ಕೆ ಸಮಿತಿಗೆ ಕೇವಲ ಆರು ಟಿ 20 ಪಂದ್ಯಗಳು ಮಾತ್ರ ಅವರ ಆಯ್ಕೆ ಸವಾಲಾಗಿದೆ.

ಅಜಿತ್ ಅಗರ್ಕರ್ ಇಬ್ಬರು ಸೂಪರ್​​ಸ್ಟಾರ್​ಗಳ ಜತೆ ಕುಳಿತು ಅವರ ವೈಟ್-ಬಾಲ್ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇಬ್ಬರೂ ಟೆಸ್ಟ್​ನಲ್ಲಿ ಮುಂದುವರಿಯುವುದು ಖಚಿತವಾಗಿದ್ದರೂ, ರೋಹಿತ್ ಶರ್ಮಾ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸುತ್ತಾರೆಯೇ ಎಂಬುದು ಇನ್ನೂ ಪ್ರಶ್ನಾರ್ಥಕ ಸಂಗತಿಯಾಗಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಮುಂದುವರಿಯಬಹುದು.

ಇದನ್ನೂ ಓದಿ : Ind vs Aus : ತಿಲಕ್ ವರ್ಮಾಗೆ ಇದು ಕೊನೇ ಚಾನ್ಸ್​?

ಹಿರಿಯ ಆಟಗಾರರು ಮ್ಯಾನೇಜ್ಮೆಂಟ್​ ಜತೆ ಮಾತನಾಡಲಿದ್ದಾರೆ ಎಂಬುದು ನನಗೆ ಖಾತ್ರಿಯಿದೆ. ಆಯ್ಕೆ ಸಮಿತಿಯು ಯಾವಾಗಲೂ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ. ಭವಿಷ್ಯದ ಯೋಜನೆಗಳು ಏನು, ಅವರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತದೆ. ಏಕದಿನ ವಿಶ್ವಕಪ್ ಋತು ಮುಗಿದ ನಂತರ ಹೊಸ ಟಿ 20 ವಿಶ್ವಕಪ್ ಬರಲಿದೆ. ಆದ್ದರಿಂದ ಮ್ಯಾನೇಜ್ಮೆಂಟ್ ಏನು ನಿರ್ಧರಿಸುತ್ತದೆ ಮತ್ತು ಅವರು ರೋಹಿತ್ ಮತ್ತು ವಿರಾಟ್ ಅವರೊಂದಿಗೆ ಏನು ಮಾತನಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸದಸ್ಯ ಮತ್ತು ಭಾರತದ ಸ್ಪಿನ್ನರ್ ಮಾಜಿ ಪ್ರಗ್ಯಾನ್ ಓಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ

ಹಾರ್ದಿಕ್ ಪಾಂಡ್ಯ ಇನ್ನೂ ಗಾಯದ ಸಮಸ್ಯೆಯಿಂದ ಸುಧಾರಿಸದ ಕಾರಣ ಆಯ್ಕೆದಾರರು ಸೂರ್ಯಕುಮಾರ್ ಯಾದವ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ವಿಶ್ವದ ನಂ.1 ಟಿ 20 ಬ್ಯಾಟರ್​ ವಿಶ್ವ ಕಪ್ ಬಳಿ ಇನ್ನೂ ವಿಶ್ರಾಂತಿ ಪಡೆದಿಲ್ಲ, ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಅಥವಾ ಟಿ 20 ಸರಣಿಯಿಂದ ವಿರಾಮ ಪಡೆಯಬಹುದು.

ದಕ್ಷಿಣ ಆಫ್ರಿಕಾ ವಿರುದ್ಧದದ ಟಿ 20 ತಂಡವು ಆಸ್ಟ್ರೇಲಿಯಾ ವಿರುದ್ಧದ ತಂಡದಂತೆಯೇ ಉಳಿಯುವ ಸಾಧ್ಯತೆಗಳಿವೆ . ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ಸರಣಿಯವರೆಗೆ ವಿರಾಮವನ್ನು ಪಡೆಯುವ ಸಾಧ್ಯತೆಯಿದೆ.

ಕೆಎಲ್ ರಾಹುಲ್ ಕೂಡ ಚರ್ಚೆಗೆ ಬರುವ ದೊಡ್ಡ ಹೆಸರು. ರೋಹಿತ್ ಮತ್ತು ಕೊಹ್ಲಿಯಂತೆ ರಾಹುಲ್ ಕೂಡ ಟಿ20 ಸರಣಿಯಲ್ಲಿದ್ದಾರೆ. ಆದರೆ 2024ರ ಟಿ20 ವಿಶ್ವಕಪ್ ಟೂರ್ನಿಗೆ ರಾಹುಲ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅವರು ಹಿಂತಿರುಗಿದರೆ, ಅವರು ಮತ್ತೊಮ್ಮೆ ನಾಯಕತ್ವಕ್ಕೆ ತೆಗೆದುಕೊಳ್ಳಬಹುದು.

Exit mobile version