ಮೀರ್ಪುರ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವಿಗೆ 145 ರನ್ಗಳು ಬೇಕಾಗಿರುವ ಹೊರತಾಗಿಯೂ ಮೂರನೇ ದಿನದ ಅಂತ್ಯಕ್ಕೆ 45 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಭಾರತ ತಂಡದ ಗೆಲುವಿಗೆ ಇನ್ನೂ 100 ರನ್ಗಳು ಬೇಕಾಗಿದೆ.
ಇಲ್ಲಿನ ಶೇರ್ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದ ಮೂರನೇ ವಿಕೆಟ್ ನಷ್ಟವಿಲ್ಲದೆ 7 ರನ್ಗಳಿಂದ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಆತಿಥೇಯ ಬಾಂಗ್ಲಾದೇಶ ತಂಡ 231 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 37 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಶುಬ್ಮನ್ ಗಿಲ್ 7 ರನ್ಗಳಿಗೆ ಔಟಾದರೆ, ನಾಯಕ ಕೆ. ಎಲ್ ರಾಹುಲ್ 2 ರನ್ಗಳಿಗೆ ಔಟಾದರು. 12 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದ ಭಾರತಕ್ಕೆ ಅಕ್ಷರ್ ಪಟೇಲ್ (26) ಸ್ವಲ್ಪ ಹೊತ್ತು ಆಧಾರವಾಗಿದ್ದಾರೆ. ಚೇತೇಶ್ವರ್ ಪೂಜಾರ (6) ಹಾಗೂ ವಿರಾಟ್ ಕೊಹ್ಲಿ (1) ಕೂಡ ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಭಾರತದ ಹಿನ್ನಡೆಗೆ ಕಾರಣರಾದರು. ಬಾಂಗ್ಲಾದೇಶದ ಬೌಲರ್ ಮೆಹೆದಿ ಹಸನ್ ಮಿರ್ಜಾ 12 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.
ಅದಕ್ಕಿಂತ ಮೊದಲು ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 231 ರನ್ಗಳಿಗೆ ಆಲ್ಔಟ್ ಆಯಿತು. ಲಿಟನ್ ದಾಸ್ (73) ಹಾಗೂ ಜಾಕಿರ್ ಹಸನ್ (51) ಅರ್ಧ ಶತಕ ಬಾರಿಸಿ ಬಾಂಗ್ಲಾದೇಶ ತಂಡಕ್ಕೆ ನೆರವಾದರು.
ಇದನ್ನೂ ಓದಿ ’ INDvsBAN | ಬಾಂಗ್ಲಾದೇಶ 231 ರನ್ಗಳಿಗೆ ಆಲ್ಔಟ್; ಭಾರತಕ್ಕೆ 145 ರನ್ ಗೆಲುವಿನ ಗುರಿ