Site icon Vistara News

WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್​, ಕೌತುಕದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​

Viat kohli WTC Final 2023

#image_title

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ನ ಫೈನಲ್​ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟ್​ ಮಾಡುತ್ತಿರುವ ಭಾರತ ತಂಡ 3 ವಿಕೆಟ್​ ಕಳೆದಕೊಂಡು 164 ರನ್​ ಬಾರಿಸಿದೆ. ಸ್ಪೆಷಲಿಸ್ಟ್​ ಬ್ಯಾಟರ್​​ಗಳಾದ ವಿರಾಟ್​ ಕೊಹ್ಲಿ (44) ಹಾಗೂ ಅಜಿಂಕ್ಯ ರಹಾನೆ (20 ರನ್​) ಕ್ರೀಸ್​ನಲ್ಲಿ ಉಳಿದುಕೊಂಡಿದ್ದಾರೆ. ಭಾರತ ತಂಡದ ಗೆಲುವಿಗೆ 280 ರನ್​ ಬೇಕಾಗಿದ್ದು ಕೊನೇ ದಿನ 90 ಓವರ್​​ಗಳು ಬಾಕಿ ಉಳಿದಿವೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ಇನ್ನುಳಿದ ಏಳು ವಿಕೆಟ್​​ಗಳನ್ನು ಉರುಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ.

ಇಲ್ಲಿನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್​ ನಷ್ಟಕ್ಕೆ 270 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿತು. 444 ರನ್​​ಗಳ ಗುರಿಯೊಂದಿಗೆ ಬ್ಯಾಟ್​ ಮಾಡಿದ ಭಾರತ ತಂಡ ಮೊದಲ ವಿಕೆಟ್​ಗೆ 41 ರನ್ ಬಾರಿಸಿತು. ರೋಹಿತ್​ ಶರ್ಮಾ (43) ಹಾಗೂ ಶುಭಮನ್​ ಗಿಲ್​ (18) ಭರವಸೆ ಮೂಡಿಸಿದರು. ಆದರೆ, ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಬಳಿಕ ಶುಭ್​ಮನ್​ ಗಿಲ್​ ನಿರಾಸೆಯಿಂದ ಪೆವಿಲಿಯನ್​ಗೆ ಮರಳಬೇಕಾಯಿತು. ಬೋಲ್ಯಾಂಡ್ ಅವರ ಎಸೆತಕ್ಕೆ ಗ್ರೀನ್​ಗೆ ಕ್ಯಾಚ್ ನೀಡಿದ ಅವರು ಬೇಸರದಿಂದ ಹೊರಕ್ಕೆ ನಡೆದರು.

ನಂತರ ರೋಹಿತ್ ಮತ್ತು ಚೇತೇಶ್ವರ್​ ಪೂಜಾರ (27) 77 ಎಸೆತಗಳಲ್ಲಿ 51 ರನ್ ಗಳಿಸಿದರು. ನಂತರ ಇಬ್ಬರೂ ಬ್ಯಾಟ್ಸಮನ್​ಗಳು ಕೆಲವೇ ನಿಮಿಷಗಳಲ್ಲಿ ಔಟಾಗಿದ್ದಿಂದ ಭಾರತದ ಪ್ರಗತಿಗೆ ಅಡ್ಡಿಯಾಯಿತು. ರೋಹಿತ್​ ಸ್ವೀಪ್​ ಮಾಡಲು ಹೋಗಿ ನೇಥನ್​ ಲಯಾನ್​ ಎಸೆತಕ್ಕೆ ಎಲ್​ಬಿಡಬ್ಲ್ಯು ಆಡದರೆ, ಕಮಿನ್ಸ್ ಎಸೆತಕ್ಕೆ ಅನಗತ್ಯ ರನ್​ ಬಾರಿಸಲು ಮುಂದಾದ ಪೂಜಾರ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್​ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಗಿರುವ ಉಂಟಾದ ಹಾನಿಯನ್ನು ಸರಿಪಡಿಸಿದ್ದಾರೆ. ಜೊತೆಯಾಟವು 50 ರನ್​ಗಳ ಗಡಿ ದಾಟಿದೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿದ ದಾಖಲೆಯನ್ನು ಮುರಿಯಬೇಕಾಗಿದೆ.

ಇದನ್ನೂ ಓದಿ: WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಅಲೆಕ್ಸ್ ಕ್ಯೇರಿ ಅರ್ಧ ಶತಕ

ಮೂರನೇ ದಿನದಾಟದ ಅಂತ್ಯಕ್ಕೆ 123 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದ ಮೊದಲ ಸೆಶನ್​ನಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ಮರ್ನಸ್​ ಲಾಬುಶೇನ್​ ಆರಂಭದಲ್ಲಿಯೇ ವಿಕೆಟ್​ ಒಪ್ಪಿಸಿದರು. ಆದರೆ ಏಳನೆ ವಿಕೆಟ್​ಗೆ ಅಲೆಕ್ಸ್​ ಕ್ಯೇರಿ (ಅಜೇಯ 66) ಹಾಗೂ ಮಿಚೆಲ್ ಸ್ಟಾರ್ಕ್​ (41) 93 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಗುರಿಯನ್ನು ಒಡ್ಡಲು ನೆರವಾದರು. ಅದಕ್ಕಿಂತ ಮೊದಲು ಸ್ಮಿತ್ (34) ಹಾಗೂ ಟ್ರಾವಿಡ್​ ಹೆಡ್​ (18) ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಕೊಡುಗೆ ಕೊಟ್ಟರು.

Exit mobile version