Site icon Vistara News

IND VS SL : ಟಿ20 ವಿಶ್ವ ಕಪ್​ ಮುಗಿಸಿ ಲಂಕಾಗೆ ಹಾರಲಿದೆ ಭಾರತ ಕ್ರಿಕೆಟ್​ ತಂಡ

Srilanka Cricket team

ನವದೆಹಲಿ: ಮುಂದಿನ ವರ್ಷದ ಮಧ್ಯಂತರದಲ್ಲಿ ಭಾರತವು ಆರು ವೈಟ್-ಬಾಲ್ ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರ ಶ್ರೀಲಂಕಾಗೆ (IND VS SL) ಪ್ರವಾಸ ಕೈಗೊಳ್ಳಲಿದೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಬುಧವಾರ (ನವೆಂಬರ್ 29) ಪ್ರಕಟಿಸಿದೆ. 2024ರ ಜುಲೈನಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. ಜೂನ್ 4 ರಿಂದ ಜೂನ್ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್​ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಸರಣಿ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ವೇಳಾಪಟ್ಟಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದೆ. ಫ್ಯೂಚರ್ ಟೂರ್ಸ್ ಪ್ರೋಗ್ರಾಂನ ಭಾಗವಾಗಿ ಭಾರತವು ತಂಡವು ವೈಟ್-ಬಾಲ್ ಕ್ರಿಕೆಟ್​ಗಾಗಿ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ ಎಂದು ಹೇಳಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಗಿದ ನಂತರ ಸರಣಿ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ನಿಷೇಧಿಸಿದ್ದರೂ, ಇದು ದ್ವಿಪಕ್ಷೀಯ ಸರಣಿಗೆ ಅಡ್ಡಿಯಾಗುವುದಿಲ್ಲ. ವೇಳಾಪಟ್ಟಿಯು ಎಫ್ ಟಿಪಿಯ ಭಾಗವಾಗಿರುವುದರಿಂದ ತಂಡಗಳು ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಆಡಬಹುದು. ಹೀಗಾಗಿ ಭಾರತ ಅಲ್ಲಿಗೆ ಪ್ರವಾಸ ಮಾಡಲಿದೆ. ಅದೇ ರೀತಿ ಟಿ20 ವಿಶ್ವಕಪ್ ಮುಗಿದ ಕೂಡಲೇ ಭಾರತ ತಂಡಕ್ಕೆ ತಕ್ಷಣವೇ ಎದುರಾಗುವ ಪ್ರವಾಸವಾಗಲಿದೆ. ಟಿ 20 ವಿಶ್ವಕಪ್​ನಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲವು ಹಿರಿಯ ಆಟಗಾರರಿಗೆ ಶ್ರೀಲಂಕಾ ಪ್ರವಾಸದಿಂದ ವಿಶ್ರಾಂತಿ ಸಿಗಬಹುದು.

“ನಾವು ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಆಡಬೇಕಾಗಿದೆ. ಇದು ನಮಗೆ ಉತ್ತಮ ವರ್ಷವಾಗಿದೆ. ಏಕೆಂದರೆ ನಮ್ಮ ತಂಡವು ವರ್ಷಪೂರ್ತಿ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ತೊಡಗಲಿದೆ” ಎಂದು ಶ್ರೀಲಂಕಾ ಕ್ರಿಕೆಟ್​​ನ ಸಿಇಒ ಆಶ್ಲೆ ಡಿ ಸಿಲ್ವಾ ಹೇಳಿದರು.

“2024 ಕ್ಯಾಲೆಂಡರ್ ನಮ್ಮ ಆಟಗಾರರಿಗೆ ಸಾಕಷ್ಟು ಆಟದ ಅವಕಾಶಗಳು ನೀಡುವ ನಿರೀಕ್ಷೆಯಿದೆ” ಎಂದು ಡಿ ಸಿಲ್ವಾ ಹೇಳಿದರು.

ಲಂಕಾಗೆ ಹಲವು ಸರಣಿಗಳು

ಶ್ರೀಲಂಕಾ ಪುರುಷರ ತಂಡವು ತನ್ನ 2024 ರ ಅಂತಾರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಅನ್ನು ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ತವರು ಸರಣಿಯೊಂದಿಗೆ ಪ್ರಾರಂಭಿಸಲಿದೆ. ತಲಾ ಮೂರು ಏಕದಿನ ಮತ್ತು ಟಿ 20 ಪಂದ್ಯಗಳನ್ನು ಈ ಸರಣಿ ಒಳಗೊಂಡಿದೆ. ಇದರ ನಂತರ ಜನವರಿ ಮತ್ತು ಫೆಬ್ರವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳು ಸೇರಿದಂತೆ ಎಲ್ಲಾ ಸ್ವರೂಪದ ಸರಣಿಯಲ್ಲಿ ಶ್ರೀಲಂಕಾ ತಂಡ ಪಾಲ್ಗೊಳ್ಳಲಿದೆ.

ಇದನ್ನೂ ಓದಿ : Rinku Singh : ರಿಂಕು ಸಿಂಗ್​ ಉತ್ತಮ ಫಿನಿಶರ್ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಆಶೀಶ್​ ನೆಹ್ರಾ

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಸ್ಪರ್ಧಿಸುವ ಮೊದಲು ಶ್ರೀಲಂಕಾ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಲಿದೆ. ತವರಿನಲ್ಲಿ ಭಾರತದ ವಿರುದ್ಧ ಆಡಿದ ನಂತರ, ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​ಗೆ ಪ್ರವಾಸ ಮಾಡಲಿದೆ. ನಂತರ, ಅವರು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳಿಎಗ ಆತಿಥ್ಯ ವಹಿಸಲಿದ್ದಾರೆ. 2024ರ ಋತುವಿನ ಕೊನೆಯಲ್ಲಿ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​​ಗೆ ಭೇಟಿ ನೀಡಲಿದೆ.

Exit mobile version