Site icon Vistara News

ICC World Cup 2023: 9 ಪಂದ್ಯಗಳಿಗಾಗಿ 8,400 ಕಿ.ಮೀ. ಸಂಚಾರ ಮಾಡಲಿದೆ ಭಾರತ ತಂಡ

team india

ಬೆಂಗಳೂರು: ಐಸಿಸಿ ಪುರುಷರ ಏಕದಿನ ಕ್ರಿಕೆಟ್​ನ ವೇಳಾಪಟ್ಟಿ(ICC World Cup 2023) ಮಂಗಳವಾರ ಪ್ರಕಟಗೊಂಡಿದೆ.(world cup 2023 schedule) ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್​ 5 ರಿಂದ ಆರಂಭವಾಗಿ ನವೆಂಬರ್​ 19ರ ತನಕ ಈ ಟೂರ್ನಿ ಸಾಗಲಿದೆ. ಇದು ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯಾಗಿರುದರಿಂದ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಇದೀಗ ಕುತೂಹಲ ಮೂಡಿಸಿದ ವಿಷಯವೆಂದರೆ ಭಾರತ ತನ್ನ 9 ಲೀಗ್​ ಪಂದ್ಯಗಳಿಗೋಸ್ಕರ 34 ದಿನಗಳ ಅವಧಿಯಲ್ಲಿ ಗರಿಷ್ಠ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಾಗಿದೆ.

ಟೂರ್ನಿಯ ಆತಿಥೇಯ ತಂಡವಾದ ಕಾರಣ ದೇಶದ ಪ್ರಮುಖ 9 ನಗರಗಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ಆಡಲಿದೆ. ಈ ವೇಳೆ ಭಾರತ ತನ್ನ ಲೀಗ್​ ಹಂತದ ಪಂದ್ಯಗಳಿಗೆ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಿದೆ. ಒಂದೊಮ್ಮೆ ಭಾರತ ತಂಡ ಸೆಮಿಫೈನಲ್‌ ಅಥವಾ ಫೈನಲ್‌ ತಲುಪಿದರೆ ಆಗ ಸುಮಾರು 9,700 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ವೇಳಾಪಟ್ಟಿ ಪ್ರಕಾರ ಭಾರತ ಅತೀ ಹೆಚ್ಚು 9 ನಗರಗಳಲ್ಲಿ ಲೀಗ್‌ ಪಂದ್ಯಗಳನ್ನು ಆಡಲಿರುವ ಏಕೈಕ ತಂಡವಾಗಿದೆ. ಉಳಿದ ತಂಡಗಳು ಒಂದು ತಾಣದಲ್ಲಿ ಗರಿಷ್ಠ 2 ಪಂದ್ಯಗಳನ್ನು ಆಡಲಿವೆ. ಭದ್ರತಾ ಕಾರಣಗಳಿಂದ ಪಾಕಿಸ್ತಾನ(world cup 2023 news Pakistan) ಕೇವಲ 5 ನಗರಗಳಲ್ಲಷ್ಟೇ ಲೀಗ್‌ ಪಂದ್ಯಗಳನ್ನು ಆಡುತ್ತದೆ. ಅಂದರೆ ಪಾಕ್​ 6,849 ಕಿ.ಮೀ. ದೂರ ಸಂಚಾರ ಮಾಡಲಿದೆ. ಒಟ್ಟಾರೆಯಾಗಿ ಭಾರತಕ್ಕೆ ಪಂದ್ಯ ಆಡುವುದಕ್ಕಿಂತ ಪ್ರಯಾಣದ್ದೇ ಹೆಚ್ಚಿನ ಚಿಂತೆಯಾಗಿದೆ.

ಇದನ್ನೂ ಓದಿ World Cup 2023 : ಬೆಂಗಳೂರಿನಲ್ಲಿ ಎಷ್ಟು ವಿಶ್ವ ಕಪ್​ ಪಂದ್ಯ​ಗಳಿವೆ? ಥ್ರಿಲ್ಲಿಂಗ್​ ಮ್ಯಾಚ್​​ಗಳ ವಿವರ ಇಲ್ಲಿದೆ

ಭಾರತ ತಂಡದ ಈ ಪ್ರಯಾಣದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ದೇಶದ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮೊದಲ ಬಾರಿ ಸಂಪೂರ್ಣವಾಗಿ ಟೂರ್ನಿಯ ಆತಿಥ್ಯ ದೊರೆಯಲು ರಾಜ್ಯ ಕ್ರಿಕೆಟ್​ ಸಂಘಗಳ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಭಾರತ 9 ತಾಣಗಳಲ್ಲಿ ಆಡಲಿದೆ” ಎಂದು ತಿಳಿಸಿದ್ದಾರೆ.

10 ತಾಣಗಳಲ್ಲಿ 10 ತಂಡಗಳ ಪೈಪೋಟಿ

ಅಕ್ಟೋಬರ್​ 5 ರಿಂದ ಆರಂಭಗೊಂಡು ನವೆಂಬರ್​ 19 ತನಕ ಈ ವಿಶ್ವ ಕಪ್​ ಟೂರ್ನಿ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ.

ಈಗಾಗಲೇ 8 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​, ಬಾಂಗ್ಲಾದೇಶ, ಇಂಗ್ಲೆಂಡ್​,ಅಫಘಾನಿಸ್ತಾನ ತಂಡಗಳು ನೇರವಾಗಿ ಅರ್ಹತೆ(world cup 2023 qualifiers) ಪಡೆದುಕೊಂಡಿದೆ. ಇನ್ನುಳಿದ 2 ಸ್ಥಾನಗಳಿಗೆ ಸದ್ಯ 10 ತಂಡಗಳು ಅರ್ಹತಾ ಪಂದ್ಯವನ್ನಾಡುತ್ತಿದೆ. ಇಲ್ಲಿ ಗೆದ್ದ ಎರಡು ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲಿದೆ. ಈ ಟೂರ್ನಿ ಪ್ರಸ್ತುತ ಜಿಂಬಾಬ್ವೆಯಲ್ಲಿ ಸಾಗುತ್ತಿದೆ.

Exit mobile version