ಬೆಂಗಳೂರು: 2023ರ ಎಸಿಸಿ ಅಂಡರ್-19 ಏಷ್ಯಾಕಪ್ಗೆ (ACC Under-19 Asia Cup) ಭಾರತದ ಅಂಡರ್-19 ಕ್ರಿಕೆಟ್ ತಂಡವನ್ನು ಜೂನಿಯರ್ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಹಾಲಿ ಚಾಂಪಿಯನ್ ಮತ್ತು ದಾಖಲೆಯ 8 ಬಾರಿಯ ವಿಜೇತರು ತಮ್ಮ ತಂಡವನ್ನು ಕಣಕ್ಕಿಳಿಸಿದ್ದು. ಮತ್ತೊಮ್ಮೆ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಯುಎಇಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಪಂದ್ಯಗಳು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ.
🚨 NEWS 🚨
— BCCI (@BCCI) November 25, 2023
India U19 squad for ACC Men’s U19 Asia Cup announced
Details 🔽https://t.co/dZHCSv32a6
ಪಂದ್ಯಾವಳಿಗೆ ಒಟ್ಟು 22 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಕೋರ್ ತಂಡವು 15 ಆಟಗಾರರನ್ನು ಮತ್ತು ಇತರ 3 ಟ್ರಾವೆಲ್ ಆಟಗಾರರನ್ನು ಒಳಗೊಂಡಿದೆ. ಇದಲ್ಲದೆ, ಇತರ 4 ಆಟಗಾರರನ್ನು ಮೀಸಲು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಅವರು ತಂಡದೊಂದಿಗೆ ಪ್ರಯಾಣಿಸುವುದಿಲ್ಲ. ಯಂಗ್ ಇಂಡಿಯನ್ ಮೆನ್ ಇನ್ ಬ್ಲೂ ತಂಡವನ್ನು ಉದಯ್ ಸಹರಾನ್ ಮುನ್ನಡೆಸಲಿದ್ದು, ಉಪನಾಯಕ ಸೌಮಿ ಕುಮಾರ್ ಪಾಂಡೆ ಉಪನಾಯಕರಾಗಿದ್ದಾರೆ.
ಇದನ್ನೂ ಓದಿ : Ind vs Aus : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?
ಏಷ್ಯಾಕಪ್ಗೆ ಭಾರತ ಅಂಡರ್-19 ತಂಡ
ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರ್ವೆಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಟ್ರಾವೆಲಿಂಗ್ ಮೀಸಲು ಆಟಗಾರರು: ಪ್ರೇಮ್ ದಿಯೋಕರ್, ಅನ್ಶ್ ಗೋಸಾಯಿ, ಎಂಡಿ ಅಮನ್
ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ.ವಿಘ್ನೇಶ್, ಕಿರಣ್ ಚೋರ್ಮಾಲೆ
ಎಸಿಸಿ ಪುರುಷರ ಅಂಡರ್ 19 ಏಷ್ಯಾ ಕಪ್ 2023 ವೇಳಾಪಟ್ಟಿ
- 1 ಡಿಸೆಂಬರ್ 8 ಐಸಿಸಿ ಅಕಾಡೆಮಿ ಓವಲ್ – 1 ಭಾರತ vsಅಫ್ಘಾನಿಸ್ತಾನ
ಐಸಿಸಿ ಅಕಾಡೆಮಿ ಓವಲ್ – 2 ಪಾಕಿಸ್ತಾನvs ನೇಪಾಳ - 2 ಡಿಸೆಂಬರ್ 9 ಐಸಿಸಿ ಅಕಾಡೆಮಿ ಓವಲ್ – 1 ಬಾಂಗ್ಲಾದೇಶ vs ಯುಎಇ
ಐಸಿಸಿ ಅಕಾಡೆಮಿ ಓವಲ್ – 2 ಶ್ರೀಲಂಕಾ vs ಜಪಾನ್ - 3 ಡಿಸೆಂಬರ್ 10 ಐಸಿಸಿ ಅಕಾಡೆಮಿ ಓವಲ್ – 1 ಭಾರತ vs ಪಾಕಿಸ್ತಾನ
ಐಸಿಸಿ ಅಕಾಡೆಮಿ ಓವಲ್ – 2, ಅಫ್ಘಾನಿಸ್ತಾನ vs ನೇಪಾಳ - 4 ಡಿಸೆಂಬರ್ 11 ಐಸಿಸಿ ಅಕಾಡೆಮಿ ಓವಲ್ – 1 ಶ್ರೀಲಂಕಾ vs ಯುಎಇ
ಐಸಿಸಿ ಅಕಾಡೆಮಿ ಓವಲ್ – 2 ಬಾಂಗ್ಲಾದೇಶ vs ಜಪಾನ್ - 5 ಡಿಸೆಂಬರ್ 12 ಐಸಿಸಿ ಅಕಾಡೆಮಿ ಓವಲ್ – 1 ಪಾಕಿಸ್ತಾನ vs ಅಫ್ಘಾನಿಸ್ತಾನ
ಐಸಿಸಿ ಅಕಾಡೆಮಿ ಓವಲ್ – 2 ಭಾರತ vs ನೇಪಾಳ - 6 ಡಿಸೆಂಬರ್ 13, ಐಸಿಸಿ ಅಕಾಡೆಮಿ ಓವಲ್ – 1 ಬಾಂಗ್ಲಾದೇಶ vs ಶ್ರೀಲಂಕಾ
ಐಸಿಸಿ ಅಕಾಡೆಮಿ ಓವಲ್ – 2 ಯುಎಇ vs ಜಪಾನ್ - 7. ಡಿಸೆಂಬರ್ 15 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಸೆಮಿಫೈನಲ್
ಐಸಿಸಿ ಅಕಾಡೆಮಿ ಓವಲ್ 1 ಸೆಮಿಫೈನಲ್ - 8 ಡಿಸೆಂಬರ್ 17 ದುಬೈ ಇಂಟರ್ನ್ಯಾಷಲನ್ ಸ್ಟೇಡಿಯಂ ಫೈನಲ್