ಇಂದೋರ್: ಅಫಘಾನಿಸ್ತಾನ ವಿರುದ್ಧದ ತವರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ ಇಂದು ನಡೆಯುವ ದ್ವಿತೀಯ ಪಂದ್ಯದಲ್ಲಿ(India vs Afghanistan 2nd T20I) ಕಣಕ್ಕಿಳಿಯಲಿದೆ. ಇಂದೋರ್‌ನಲ್ಲಿ ಇತ್ತಂಡಗಳ ಈ ಕಾದಾಟ ನಡೆಯಲಿದೆ. ರೋಹಿತ್ ಪಡೆ ಗೆದ್ದರೆ ಸರಣಿ ಟೀಮ್ ಇಂಡಿಯಾ ವಶವಾಗಲಿದೆ. ಅಫಘಾನಿಸ್ತಾನ ಗೆದ್ದರೆ ಸರಣಿ ಸಮಬಲಗೊಳ್ಳಲಿದೆ.
ಮಳೆ ಭೀತಿ ಇಲ್ಲ
ಇಂದೋರ್‌ನಲ್ಲಿ ಇಂದು ನಡೆಯುವ ಪಂದ್ಯಕ್ಕೆ ಯಾವುದೇ ಮಳೆ ಸಾಧ್ಯತೆ ಇಲ್ಲ. ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಡ ಇದ್ದರೂ ಆಟಕ್ಕೆ ಯಾವುದೇ ಅಡ್ಡಿಯಾಗದು. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಅದರಲ್ಲೂ 14 ತಿಂಗಳ ಬಳಿಕ ಕೊಹ್ಲಿ ಕಮ್ಬ್ಯಾಕ್ ಮಾಡುತ್ತಿರುವ ಕಾರಣ ಅಭಿಮಾನಿಗಳಿಗೆ ಈ ಪಂದ್ಯದ ಮೇಲೆ ಬಾರಿ ಕುತೂಹಲವಿದೆ.
Preps ✅#TeamIndia READY for the 2⃣nd #INDvAFG T20I in Indore 👏 👏@IDFCFIRSTBank pic.twitter.com/CmZEs3d3io
— BCCI (@BCCI) January 13, 2024
ಉಭಯ ತಂಡಗಳು ಇದುವರೆಗೆ ಟಿ20 ಕ್ರಿಕೆಟ್ನಲ್ಲಿ ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಭಾರತ 5 ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ಇದರಲ್ಲಿ ಒಂದು ಗೆಲುವು ಈ ಸರಣಿಯಲ್ಲಿ ದಾಖಲಾದದ್ದು. ಒಂದು ಪಂದ್ಯ ರದ್ದುಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ Sachin Tendulkar : ಲೋಕಲ್ ಕ್ರಿಕೆಟ್ ಕ್ಷೇತ್ರಕ್ಕೂ ಕಾಲಿಟ್ಟ ಸಚಿನ್ ತೆಂಡೂಲ್ಕರ್
ಪಿಚ್ ರಿಪೋರ್ಟ್
ಹೋಳ್ಕರ್ ಸ್ಟೇಡಿಯಂನ(Holkar Stadium) ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು ಬ್ಯಾಟರ್ಗಳಿಗೆ ಇದು ಸ್ವರ್ಗವಾಗಿದೆ. ಹೀಗಾಗಿ ಬೃಹತ್ ಮೊತ್ತದ ಪಂದ್ಯ ಎಂದು ನಿರೀಕ್ಷೆ ಮಾಡಬಹುದು. ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದೆ. ಆದ್ದರಿಂದ ಬ್ಯಾಟರ್‌ಗಳು ತಮ್ಮ ಹೊಡೆತಗಳಿಗೆ ಸಂಪೂರ್ಣ ಪ್ರತಿಫಲವನ್ನು ಪಡೆಯಲಿದ್ದಾರೆ. ಗೆಲುವು ಸಾಧಿಸಬೇಕೆಂದರೆ 200 ರನ್ ಅತ್ಯಗತ್ಯ. ಈ ಮೈದಾನದಲ್ಲಿ ಸರಾಸರಿ ಮೊದಲ ಇನಿಂಗ್ಸ್ ಒಟ್ಟು 209 ಆಗಿದೆ.
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ 3 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 2 ಗೆಲುವು ಒಂದು ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದರೆ, ಚೇಸಿಂಗ್ ನಡೆಸಿದ ತಂಡ ಒಮ್ಮೆ ಮಾತ್ರ ಗೆದ್ದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹಚ್ಚು ಎನ್ನಲಡ್ಡಿಯಿಲ್ಲ.
— BCCI (@BCCI) January 13, 2024
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಅಫಘಾನಿಸ್ತಾನ: ಅಹ್ಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್.