Site icon Vistara News

Ind vs Aus : ಗೆಲುವಿನ ಮುನ್ನಡೆ ಪಡೆಯುವುದೇ ಸೂರ್ಯಕುಮಾರ್ ಬಳಗ

india vs australia

ತಿರುವನಂತಪುರ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ ಐದು ಪಂದ್ಯಗಳ ಟಿ 20 ಸರಣಿಯ ಎರಡನೇ ಪಂದ್ಯ ನವೆಂಬರ್ 26 ರಂದು ತಿರುವನಂತಪುರಂನಲ್ಲಿ ನಡೆಯಲಿದೆ. ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಟಿ 20 ಪಂದ್ಯವನ್ನು ಎರಡು ವಿಕೆಟ್ ಗಳಿಂದ ಗೆದ್ದ ನಂತರ ‘ಮೆನ್ ಇನ್ ಬ್ಲೂ’ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಲು ಎದುರು ನೋಡುತ್ತಿದೆ. ವಿಶ್ವಕಪ್ 2023 ರ ಚಾಂಪಿಯನ್ಸ್ ಆಡಮ್ ಜಂಪಾ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಟ್ರಾವಿಸ್ ಹೆಡ್ ಇಲ್ಲದೆ ಆಸ್ಟ್ರೇಲಿಯಾದ ಸ್ಟ್ಯಾಂಡ್-ಇನ್ ನಾಯಕ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸಿದ್ದರು.

ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಸ್ಟೀವ್ ಸ್ಮಿತ್ (41 ಎಸೆತಗಳಲ್ಲಿ 52 ರನ್) ಮತ್ತು ಜೋಶ್ ಇಂಗ್ಲಿಸ್ (50 ಎಸೆತಗಳಲ್ಲಿ 110 ರನ್) ಅವರ 130 ರನ್​ಗಳ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ಭಾರತಕ್ಕೆ 209 ರನ್​ಗಳ ಕಠಿಣ ಗುರಿ ನೀಡಿತು. ಅಂತಿಮವಾಗಿ ಭಾರತ 2.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 22 ರನ್ ಕಲೆಹಾಕಿತು. ಸೂರ್ಯಕುಮಾರ್ (42 ಎಸೆತಗಳಲ್ಲಿ 80 ರನ್) ಮತ್ತು ಇಶಾನ್ ಕಿಶನ್ (39 ಎಸೆತಗಳಲ್ಲಿ 58 ರನ್) 60 ಎಸೆತಗಳಲ್ಲಿ 112 ರನ್​ಗಳ ಜೊತೆಯಾಟವಾಡಿದರು. ಕೊನೆಯಲ್ಲಿ, ರಿಂಕು ಸಿಂಗ್ 14 ಎಸೆತಗಳಲ್ಲಿ 22 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ಆತಿಥೇಯರು ಒಂದು ಎಸೆತ ಬಾಕಿ ಇರುವಾಗ ಎರಡು ವಿಕೆಟ್ ಗಳಿಂದ ಗೆದ್ದರು.

ತಂಡದಲ್ಲಿ ಬದಲಾವಣೆಯಾಗಬಹುದೇ?

ಮೊದಲ ಪಂದ್ಯದಲ್ಲಿ ಭಾರತ ತನ್ನ ಮೂವರು ಆರಂಭಿಕರನ್ನು ಆಡಿಸಿತು. ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರೆ, ಇಶಾನ್ ಕಿಶನ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್ ಮತ್ತು ಜಿತೇಶ್ ಶರ್ಮಾ ಅವರನ್ನು ಕೈಬಿಡಲಾಗಿತ್ತು . ತವರು ತಂಡವು ಈ ಪಂದ್ಯದಲ್ಲೂ ಅದೇ ಪ್ಲೇಯಿಂಗ್ ಇಲೆವೆನ್ ಗೆ ಅಂಟಿಕೊಳ್ಳುವ ನಿರೀಕ್ಷೆಯಿದೆ.

ಮೊದಲ ಟಿ 20 ಪಂದ್ಯವನ್ನು ಸೋತ ನಂತರ, ಆಸ್ಟ್ರೇಲಿಯಾವು ಮ್ಯಾಕ್ಸ್ವೆಲ್, ಜಂಪಾ ಮತ್ತು ಹೆಡ್ ಮೂವರನ್ನು ಮರಳಿ ಕರೆತರುವ ಬಗ್ಗೆ ಯೋಚಿಸಬಹುದು. ಮ್ಯಾಥ್ಯೂ ಶಾರ್ಟ್, ಆರನ್ ಹಾರ್ಡಿ ಮತ್ತು ತನ್ವೀರ್ ಸಂಘಾ ಮೂವರು ಅನುಭವಿ ಆಟಗಾರರಿಗೆ ದಾರಿ ಮಾಡಿಕೊಡಬಹುದು.

ಇದನ್ನೂ ಓದಿ : Ind vs Aus : ತಿರುವನಂತಪುರ ತಲುಪಿದ ಸೂರ್ಯಕುಮಾರ್ ಬಳಗ

ಗ್ರೀನ್​ಫೀಲ್ಡ್​​ ಸ್ಟೇಡಿಯಂ ಪಿಚ್ ವರದಿ

ಗ್ರೀನ್​ಫೀಲ್ಡ್​ ಅಂತಾರಾಷ್ಟ್ರೀಯ ಕ್ರೀಡಾಂಗಣವು ಈವರೆಗೆ ಮೂರು ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಸ್ಥಳದಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್​ಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಹೀಗಾಗಿ ಬ್ಯಾಟರ್​ಗಳು ರನ್​ ಗಳಿಸಲು ಹೆಚ್ಚು ತಂತ್ರಗಳನ್ನು ಬಳಸಬೇಕಾಗುತ್ತದೆ. ಬೌಲರ್​ಗಳು ಇಲ್ಲಿ ಪಾರಮ್ಯ ಮೆರೆಯುವ ಅವಕಾಶವನ್ನು ಹೊಂದಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್/ ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆ್ಯರೋನ್ ಹಾರ್ಡಿ/ ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ಸಿ / ವಿಕೆ), ಸೀನ್ ಅಬಾಟ್, ತನ್ವೀರ್ ಸಂಘಾ / ಆಡಮ್ ಜಂಪಾ, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್.

ಭಾರತ-ಆಸ್ಟ್ರೇಲಿಯಾ ಟಿ20 ಮುಖಾಮುಖಿ ದಾಖಲೆ

ಭಾರತ ವಿರುದ್ಧ ಆಸ್ಟ್ರೇಲಿಯಾ ಪ್ರಸಾರ ವಿವರಗಳು

Exit mobile version