ಈಪುಣೆ: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್ ಪಡೆಯ ಯೋಜನೆಯಾಗಿದೆ.
ಶ್ರೇಯಸ್ ಅಯ್ಯರ್ ಔಟ್ ಆಗಿದ್ದಾರೆ. 25 ಎಸೆತಗಳಲ್ಲಿ 2 ಫೋರ್ ಸಮೇತ 19 ರನ್ ಬಾರಿಸಿದ್ದ ಅಯ್ಯರ್ ವಿಕೆಟ್ ಒಪ್ಪಿಸಿದ್ದಾರೆ. ಮೆಹೆದಿ ಹಸನ್ ಸ್ಪಿನ್ ಬೌಲಿಂಗ್ಗೆ ಮಿಡ್ವಿಕೆಟ್ ಕಡೆಗೆ ಸಿಕ್ಸರ್ ಹೊಡೆಯಲು ಮುಂದಾದ ಅವರು ಮಹಮದುಲ್ಲಾ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧ ಶತಕ ಪೂರೈಸಿದ್ದಾರೆ. ಅವರು 48 ಎಸೆತಗಳಲ್ಲಿ 50 ರನ್ ಬಾರಿಸಿದರು. ಇದು ಅವರು 69ನೇ ಏಕ ದಿನ ಅರ್ಧ ಶತಕ. ಹಾಲಿ ವಿಶ್ವ ಕಪ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕವಾಗಿದೆ.
25ನೇ ಓವರ್ ಮುಕ್ತಾಯ. ಭಾರತ ತಂಡ 2 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿದೆ. ಶ್ರೇಯಸ್ ಅಯ್ಯರ್ 16 ಹಾಗೂ ವಿರಾಟ್ ಕೊಹ್ಲಿ 42 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.
ಬಾಂಗ್ಲಾದೇಶದ ಫೀಲ್ಡರ್ಗಳು ಎಸೆದ ಚೆಂಡು ಕಾಲಿಗೆ ಬಿದ್ದು ಗಾಯಗೊಂಡಿರುವ ಶ್ರೇಯಸ್ ಅಯ್ಯರ್..
ಭಾರತ ತಂಡ ಸುಸ್ಥಿತಿಯಲ್ಲಿದ್ದ 23ನೇ ಓವರ್ಗೆ 150 ರನ್ ಬಾರಿಸಿದೆ. ಕೊಹ್ಲಿ 38 ಹಾಗೂ ಶ್ರೇಯಸ್ ಅಯ್ಯರ್ 9 ರನ್ ಬಾರಿಸಿದ್ದಾರೆ.