ಈಪುಣೆ: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್ ಪಡೆಯ ಯೋಜನೆಯಾಗಿದೆ.
22 ಓವರ್ಗಳಲ್ಲಿ 2 ವಿಕೆಟ್ಗೆ 146 ರನ್ ಬಾರಿಸಿದ ಭಾರತ
10ರಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟ ಮಾಡಿಕೊಂಡಿರುವ ಭಾರತ. ಆದರೆ 79 ರನ್ ಬಾರಿಸಿದೆ
20 ಓವರ್ಗಳ ಅಂತ್ಯಕ್ಕೆ ಭಾರತ 142 ರನ್ ಬಾರಿಸಿದ್ದು ಗೆಲುವಿನ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿದೆ.
ಗಿಲ್ ಔಟಾದ ಹೊರತಾಗಿಯೂ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ. 19.4 ಓವರ್ಗಳಲ್ಲಿ 137 ರನ್ ಬಾರಿಸಿದೆ.
ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಶುಭ್ಮನ್ ಗಿಲ್, 53 ರನ್ ಬಾರಿಸಿ ಔಟಾಗಿದ್ದಾರೆ. ಅವರು ಮೆಹೆದಿ ಹಸನ್ ಎಸೆತಕ್ಕೆ ಬೌಂಡರಿ ಲೈನ್ನಲ್ಲಿ ಮಹಮದುಲ್ಲಾ ಅವರಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಅದಕ್ಕಿಂತ ಮೊದಲು ಅವರು 55 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಮೇತ 53 ರನ್ ಬಾರಿಸಿದ್ದಾರೆ.