Site icon Vistara News

IND vs ENG ODI : ಮೂರನೇ ಪಂದ್ಯಕ್ಕೆ ಬುಮ್ರಾಗೆ ಯಾಕೆ ರೋಹಿತ್‌ ಚಾನ್ಸ್‌ ಕೊಟ್ಟಿಲ್ಲ?

ind vs eng odi

ಮ್ಯಾಂಚೆಸ್ಟರ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿಯ (IND vs ENG ODI) ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕೆ (IND vs ENG ODI) ಜಸ್‌ಪ್ರಿತ್‌ ಬುಮ್ರಾ ಅಲಭ್ಯರಾಗಿದ್ದಾರೆ. ಅವರು ಯಾಕೆ ಅಲಭ್ಯರಾಗಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆ.

ಮೂರನೇ ಪಂದ್ಯದ ಟಾಸ್‌ ವೇಳೆ ರೋಹಿತ್‌ ಶರ್ಮ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆ ಇದೆ ಎಂದು ಹೇಳಿದ್ದರು. ಅವರೇ ಜಸ್‌ಪ್ರಿತ್‌ ಬುಮ್ರಾ ಎಂಬುದು ಗೊತ್ತಾದ ಬಳಿಕ ಕ್ರಿಕೆಟ್‌ ಅಭಿಮಾನಿಗಳಿಗೆ ಅಚ್ಚರಿ. ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ಬುಮ್ರಾ ಯಾಕೆ ಇಲ್ಲ ಎಂಬುದು ಅವರೆಲ್ಲರ ಪ್ರಶ್ನೆಯಾಗಿದೆ.

ಗಾಯದ ಸಮಸ್ಯೆ

ಜಸ್‌ಪ್ರಿತ್‌ ಬುಮ್ರಾ ಮೊದಲ ಪಂದ್ಯದಲ್ಲಿ ೧೯ ರನ್‌ಗಳಿಗೆ ೫ ವಿಕೆಟ್‌ ಕಬಳಿಸಿ ಗೆಲವಿನ ರೂವಾರಿ ಎನಿಸಿಕೊಂಡಿದ್ದರು. ಅಂತೆಯೇ ಅವರು ಎರಡನೇ ಪಂದ್ಯದಲ್ಲಿ ೨ ವಿಕೆಟ್‌ ಕಬಳಿಸಿದ್ದರು. ಅದಾಗ್ಯೂ ಅವರು ಯಾಕೆ ತಂಡದಲ್ಲಿ ಇಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆ.

ಜಸ್‌ಪ್ರಿತ್‌ ಬುಮ್ರಾ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್‌ ಮಾಡುವ ವೇಳೆ ಕಾಲು ಉಳುಕಿಸಿಕೊಂಡಿದ್ದರು. ಅದೇನೂ ಗಂಭೀರ ಗಾಯವಲ್ಲ. ಆದರೆ, ಅದೇ ನೋವಿನ ನಡುವೆ ಅವರನ್ನು ಆಡಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ತಂಡದ ಫಿಸಿಯೊಗಳು ಹೇಳಿದ್ದಾರೆ. ಹೀಗಾಗಿ ಬುಮ್ರಾಗೆ ರೆಸ್ಟ್‌ ಕೊಡಲಾಗಿದೆ.

ಇನ್ನೆರಡು ತಿಂಗಳ ಒಳಗೆ ಏಷ್ಯಾ ಕಪ್‌ ಟೂರ್ನಿ ಆರಂಭವಾಗಲಿದೆ. ಬಳಿಕ ಟಿ೨೦ ವಿಶ್ವ ಕಪ್‌ ನಡೆಯಲಿದೆ. ಹಿರಿಯ ಆಟಗಾರರು ಗಾಯಗೊಂಡರೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಬುಮ್ರಾಗೆ ರೆಸ್ಟ್‌ ನೀಡಲಾಗಿದೆ.

ಇದನ್ನೂ ಓದಿ | Windis Tour | ಕೆರಿಬಿಯನ್‌ ನಾಡಿಗೂ ಹೋಗಲ್ಲ ವಿರಾಟ್‌ ಕೊಹ್ಲಿ, ಬುಮ್ರಾಗೂ ರೆಸ್ಟ್

Exit mobile version