Site icon Vistara News

India vs Ireland: ಟಿಕೆಟ್​ ಸೋಲ್ಡ್​ ಔಟ್​ ಆದರೂ ಮೊದಲ ಟಿ20 ಪಂದ್ಯ ಅನುಮಾನ!

team india cricket players at ireland

ಡಬ್ಲಿನ್​: ಭಾರತ ಮತ್ತು ಐರ್ಲೆಂಡ್(India vs Ireland)​ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದೆ(Ireland vs India, 1st T20). 11 ತಿಂಗಳ ಬಳಿಕ ಕ್ರಿಕೆಟ್​ ಆಡುತ್ತಿರುವ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರಿಗೆ ಇದು ಮಹತ್ವದ ಪಂದ್ಯವಾಗಿದೆ. ಆದರೆ ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ಪಂದ್ಯಕ್ಕೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(weather forecast) ಎಚ್ಚರಿಕೆ ನೀಡಿದೆ.

ಯೆಲ್ಲೋ ಅಲರ್ಟ್‌

ಗುರುವಾರವಷ್ಟ್ರೇ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಎಂದು ಹೇಳಿದ್ದ ಹವಾಮಾನ ಇಲಾಖೆ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮಳೆಯ ಕಾಡ ಇದೆ ಎಂದು ತಿಳಿಸಿದೆ. ಶುಕ್ರವಾರ ಸ್ಥಳೀಯ ಕಾಲಮಾನ ಸಂಜೆ 4ರಿಂದ ಡಬ್ಲಿನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಪಂದ್ಯದ ಟಿಕೆಟ್​ ಈಗಾಗಲೇ ಸೋಲ್ಡ್​ ಔಟ್​ ಆಗಿದ್ದು ಒಂದೊಮ್ಮೆ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ಮಳೆ ಮುನ್ಸೂಚನೆ ಇರುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್​ ಮಾಡುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭದಲ್ಲಿ ಬಿರುಸಿನ ಬ್ಯಾಟ್​ ಬೀಸಿದರೆ ಬಳಿಕ ಮಳೆ ಬಂದರೂ ಡಕ್​ವರ್ತ್​ ಲೂಯಿಸ್​ ನಿಯದ ಲಾಭ ಪಡೆಯುವುದು ಪ್ರಮುಖ ಉದ್ದೇಶವಾಗಿದೆ.

ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೂ ಕಮ್​ಬ್ಯಾಕ್​ ಪಂದ್ಯ

ಜಸ್​ಪ್ರೀತ್​ ಬುಮ್ರಾ ಜತೆ ವೇಗಿ ಪ್ರಸಿದ್ಧ್‌ ಕೃಷ್ಣ ಅವರಿಗೂ ಇದು ಕಮ್​ಬ್ಯಾಕ್ ಪಂದ್ಯವಾಗಿದೆ. ಗಾಯದಿಂದಾಗಿ ಐಪಿಎಲ್​ ಸೇರಿ ಹಲವು ಸರಣಿಗಳಿಂದ ಹೊರಗುಳಿದಿದ್ದರು. ಏಷ್ಯಾ ಕಪ್​ಗೆ ಆಯ್ಕೆಯಾಗಬೇಕಿದ್ದರೆ ಉಭಯ ಆಟಗಾರರು ತಮ್ಮ ಸಾಮರ್ಥ್ಯವನ್ನು ಇಲ್ಲಿ ತೋರ್ಪಡಿಸಬೇಕಾದ ಅನಿವಾರ್ಯತೆ ಇದೆ. ಉಳಿದಂತೆ ಐಪಿಎಲ್‌ ತಾರೆಯರಾದ ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಋತುರಾಜ್‌ ಗಾಯಕ್ವಾಡ್‌ ಹಾಗೂ ವಿಂಡೀಸ್​ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್‌ ಮೇಲೂ ಈ ಸರಣಿಯಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಇದನ್ನೂ ಓದಿ India vs Ireland: ಭಾರತ-ಐರ್ಲೆಂಡ್‌ ಟಿ20 ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌

ಮುಖಾಮುಖಿ

ಭಾರತ ಮತ್ತು ಐರ್ಲೆಂಡ್‌ ಇದುವರೆಗೆ 5 ಟಿ20 ಪಂದ್ಯಗಳನ್ನು ಆಡಿದೆ. ಉಭಯ ತಂಡಗಳ ಮೊದಲ ಟಿ20 ಮುಖಾಮುಖಿ ನಡೆದದ್ದು 2018ರಲ್ಲಿ ಈ ವೇಳೆ 2 ಪಂದ್ಯಗಳ ಸರಣಿಯನ್ನು ಆಡಲಾಗಿತ್ತು. ಇದರಲ್ಲಿ ಭಾರತವೇ ಗೆದ್ದಿತ್ತು. ಇದಾದ ಬಳಿಕ ಕಳೆದ ವರ್ಷ ಮೂರು ಪಂದ್ಯಗಳ ಸರಣಿ ಆಡಲಾಗಿತ್ತು. ಇದು ಕೂಟ ಭಾರತವೇ ಮೇಲುಗೈ ಸಾಧಿಸಿತ್ತು. ಒಟ್ಟಾರೆ 5 ಪಂದ್ಯಗಳಲ್ಲಿಯೂ ಭಾರತ ತಂಡವೇ ಗೆದ್ದಿದೆ. ಇದುವೆಗೂ ಐರ್ಲೆಂಡ್‌ ತಂಡ ಟೀಮ್‌ ಇಂಡಿಯಾ ಎದುರು ಗೆಲುವಿನ ಖಾತೆ ತೆರೆದಿಲ್ಲ.

ಸಂಭಾವ್ಯ ತಂಡ

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್/ ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್/ ಕ್ರೇಗ್ ಯಂಗ್.

ಭಾರತ ತಂಡ: ಜಸ್‌ಪ್ರೀತ್‌ ಬುಮ್ರಾ (ನಾಯಕ), ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್‌ ಸಿಂಗ್‌/ ಮುಕೇಶ್‌ ಕುಮಾರ್‌.

Exit mobile version