Site icon Vistara News

ICC World Cup 2023 : ಡಚ್ಚರನ್ನು ಸೋಲಿಸಿ ಅಜೇಯ ಸಾಧನೆ ಮಾಡುವುದೇ ರೋಹಿತ್ ಪಡೆ?

Rahul Dravid

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023ರ 45ನೇ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದು ಪ್ರತಿಷ್ಠಿತ ಏಕ ದಿನ ವಿಶ್ವ ಕಪ್​ನ ಪಂದ್ಯಾವಳಿಯ ಗುಂಪು ಹಂತದ ಕೊನೆಯ ಮುಖಾಮುಖಿಯಾಗಿದ್ದು, ಭಾರತ ತಂಡವು ತಮ್ಮ ಗೆಲುವಿನ ಓಟವನ್ನು ಜೀವಂತವಾಗಿಡಲು ಯತ್ನಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್​ ಪಂದ್ಯವನ್ನು ಆಡಲಿದೆ.

ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಬಲ ಗೆಲುವಿನ ಹುಮ್ಮಸ್ಸಿನಲ್ಲಿ ಮೆನ್ ಇನ್ ಬ್ಲೂ ಕಣಕ್ಕೆ ಇಳಿಯಲಿದೆ. ಮೊದಲು ಬ್ಯಾಟ್ ಮಾಡಿ 326 ರನ್ ಗಳಿಸಿದ್ದ ಆತಿಥೇಯರು ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್ ಗಳಿಗೆ ಆಲೌಟ್ ಮಾಡಿ 243 ರನ್ ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದ್ದರು. ಇದೀಗ ಅದೇ ಆವೇಗದಲ್ಲಿ ದುರ್ಬಲ ಡಚ್ಚರ ಪಡೆಯನ್ನು ಎದುರಿಸಲಿದ್ದು ಮತ್ತೊಂದು ದೊಡ್ಡ ಅಂತರದ ವಿಜಯವನ್ನು ನಿರೀಕ್ಷಿಸಲಾಗಿದೆ.

ನೆದರ್ಲ್ಯಾಂಡ್ಸ್ ತನ್ನ ಹಿಂದಿನ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ ಬಲಿಷ್ಠ ತಂಡವನ್ನು ಎದುರಿಸಲಿದೆ. ಮೊದಲು ಬೌಲಿಂಗ್​ ಮಾಡಿದ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ತಂಡವು ಮೊದಲ ಇನ್ನಿಂಗ್ಸ್​​ನಲ್ಲಿ ಒಟ್ಟು 339 ರನ್​ಗಳನ್ನು ಬಿಟ್ಟುಕೊಟ್ಟಿತು ಮತ್ತು ಉತ್ತರವಾಗಿ 179 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಅಲ್ಲದೆ, 160 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಭಾರತ ತಂಡವನ್ನು ಎದುರಿಸಲಿರುವ ನೆದರ್ಲೆಂಡ್ಸ್ ತಂಡವು ನಿರಾಸೆಯಿಂದ ಹೊರಬರಲು ಉತ್ಸುಕವಾಗಿದೆ. ಆದಾಗ್ಯೂ, ಅಜೇಯ ಭಾರತೀಯ ತಂಡವನ್ನು ಎದುರಿಸುವುದು ಆ ತಂಡಕ್ಕೆ ಸಾಕಷ್ಟು ಸವಾಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ.

ಸಂಯೋಜನೆ ಹೇಗಿರಬಹುದು?

ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ, ಭಾರತ ತಂಡವು ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಕೆಲವೊಂದು ವರದಿಗಳು ಪ್ರಮುಖ ಆಟಗಾರರಿಗೆ ವಿಶ್ರಾಂತಿ ಎಂದು ಹೇಳುತ್ತಿದೆ. ಆದರೆ. ಆತ್ಮವಿಶ್ವಾಸದೊಂದಿಗೆ ತಂಡವು ಸೋಲದೆ ನಾಕೌಟ್ ಹಂತಕ್ಕೆ ಹೋಗಲು ಬದಲಾವಣೆ ಮಾಡುವ ಸಾಧ್ಯತೆಗಳು ಕನಿಷ್ಠ. ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಸೋಲಿನ ಹೊರತಾಗಿಯೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ತಂಡವು ಅದೇ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಮೇಲ್ಮೈ ಬ್ಯಾಟ್ಸ್ಮಮನ್​ಗಳಿಗೆ ಆದ್ಯತೆ ನೀಡುತ್ತದೆ. ದೊಡ್ಡ ಸ್ಕೋರ್​ಗಳ ಮುಖಾಮುಖಿಯು ಸಾಧ್ಯತೆಯೇ ಇಲ್ಲಿ ಹೆಚ್ಚಿದೆ. ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್​ಗಳು ತಮ್ಮ ಕೈಚಳಕವನ್ನು ಸಹ ತೋರಿಸಬಹುದು. ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವುದು ಮತ್ತು ಗುರಿಯನ್ನು ಬೆನ್ನಟ್ಟುವುದು ಬುದ್ಧಿವಂತ ನಿರ್ಧಾರವಾಗಲಿದೆ.

ಈ ಸುದ್ದಿಯನ್ನೂ ಓದಿ : ICC World Cup 2023 : ಪಾಕ್​ ಸೆಮೀಸ್​ಗೆ ಪ್ರವೇಶಿಸಲು 6.4 ಓವರ್​ಗಳಲ್ಲಿ 338 ರನ್​ ಬಾರಿಸಬೇಕು!

ತಂಡಗಳು

ಭಾರತ: ಶುಬ್ಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ಕೀಪರ್​ ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾ.

ನೆದರ್ಲ್ಯಾಂಡ್ಸ್​​: ವೆಸ್ಲಿ ಬಾರೆಸಿ, ಮ್ಯಾಕ್ಸ್ ಒ’ಡೌಡ್, ಕಾಲಿನ್ ಆಕರ್ಮ್ಯಾನ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ, ವಿಕೆಟ್ ಕೀಪರ್), ಬಾಸ್ ಡಿ ಲೀಡ್, ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ ಮತ್ತು ಪಾಲ್ ವ್ಯಾನ್ ಮೀಕೆರೆನ್.

ಭಾರತ- ನೆದರ್ಲ್ಯಾಂಡ್ಸ್​ ಮುಖಾಮುಖಿ ದಾಖಲೆಗಳು

ನೇರ ಪ್ರಸಾರ ವಿವರಗಳು

Exit mobile version