Site icon Vistara News

IND vs NZ: ವಾಂಖೆಡೆಯಲ್ಲಿ ಭಾರತ ವಿರುದ್ಧ ನ್ಯೂಜಿಲ್ಯಾಂಡ್​ ತಂಡದ್ದೇ ಪಾರಮ್ಯ!

rohit sharma and kane williamson

ಮುಂಬಯಿ: ಲೀಗ್​ ಹಂತದಲ್ಲಿ ಭಾರತ ವಿರುದ್ಧ ಸೋಲು ಕಂಡರೂ ಅನುಮಾನ ಬೇಡ, ನ್ಯೂಜಿಲ್ಯಾಂಡ್‌(India vs New Zealand) ಅತ್ಯಂತ ಅಪಾಯಕಾರಿ ತಂಡ. ಇತ್ತಂಡಗಳು ಬುಧವಾರ ನಡೆಯುವ ಸೆಮಿಫೈನಲ್(1st Semi-Final) ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.​

ಭಾರತ ಇನ್ನೂ ಗೆಲುವು ಕಂಡಿಲ್ಲ

ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ಇದುವರೆಗೆ ಕೇವಲ ಒಂದು ಬಾರಿ ಮಾತ್ರ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. 2017ರಲ್ಲಿ ನಡೆದ ಏಕದಿನ ಸರಣಿಯ ಪಂದ್ಯ ಇದಾಗಿತ್ತು. ಈ ಪಂದ್ಯವನ್ನು ನ್ಯೂಜಿಲ್ಯಾಂಡ್​ 6 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡ ವಿರಾಟ್‌ ಕೊಹ್ಲಿ(121) ಅವರ ಅಮೋಘ ಶತಕದ ನೆರವಿನಿಂದ 8 ವಿಕೆಟಿಗೆ 280 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ಎಡಗೈ ಬ್ಯಾಟರ್​ ಟಾಮ್‌ ಲ್ಯಾಥಂ (ಅಜೇಯ 103) ಮತ್ತು ರಾಸ್‌ ಟೇಲರ್‌ (95) ಅವರ ಬ್ಯಾಟಿಂಗ್‌ ಪರಾಕ್ರಮದಿಂದ 49 ಓವರ್‌ಗಳಲ್ಲಿ 4 ವಿಕೆಟಿಗೆ 284 ರನ್‌ ಬಾರಿಸಿ ಗೆಲುವು ಸಾಧಿಸಿತು. ಕಿವೀಸ್​ ಪರ ಟ್ರೆಂಟ್‌ ಬೌಲ್ಟ್ 4, ಟಿಮ್‌ ಸೌಥಿ 3 ವಿಕೆಟ್‌ ಕಿತ್ತು ಮಿಂಚಿದ್ದರು. ಈ ಬಾರಿಯೂ ತಂಡದಲ್ಲಿ ಟ್ರೆಂಟ್‌ ಬೌಲ್ಟ್, ಸೌಥಿ ಮತ್ತು ಲ್ಯಾಥಂ ಕಾಣಿಸಿಕೊಂಡಿದ್ದಾರೆ. ಮತ್ತೆ ಇವರೆಲ್ಲ ಭಾರತಕ್ಕೆ ಸಂಕಷ್ಟ ತಂದರೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ ICC World Cup 2023: ಮರುಕಳಿಸದಿರಲಿ 2019ರ ಸೆಮಿಫೈನಲ್ ಸೋಲಿನ​ ನೋವು…

ವಿಶ್ವಕಪ್​ನಲ್ಲಿ 2 ಪಂದ್ಯ

ನ್ಯೂಜಿಲ್ಯಾಂಡ್​ ತಂಡ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದೆ. 2011ರ ವಿಶ್ವಕಪ್‌ ವೇಳೆ. ಒಂದನ್ನು ಗೆದ್ದಿರೆ, ಇನ್ನೊಂರದಲ್ಲಿ ಸೋಲು ಕಂಡಿದೆ. ಆದರೆ ಇದು ಭಾರತ ವಿರುದ್ಧವಲ್ಲ. ಲೀಗ್​ ಹಂತದ ಪಂದ್ಯದಲ್ಲಿ ಕೆನಡಾ ವಿರುದ್ಧ 97 ರನ್‌ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಬ್ರೆಂಡನ್‌ ಮೆಕಲಮ್‌ (101) ಅವರ ಶತಕ ಸಾಹಸದಿಂದ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 358 ರನ್‌ ಬಾರಿಸಿತು. ದಿಟ್ಟ ರೀತಿಯಲ್ಲಿ ಹೋರಾಟ ನಡೆಸಿದ ಕೆನಡಾ ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ ಕಳೆದುಕೊಂಡು 261 ರನ್‌ ಮಾಡಿ ಶರಣಾಯಿತು.

ಲಂಕಾ ವಿರುದ್ಧ ಸೋಲು

ಇದೇ ಮೈದಾನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​​ ತಂಡ ಶ್ರೀಲಂಕಾವನ್ನು ಎದುರಿಸಿತು. ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 9ಕ್ಕೆ 265 ರನ್‌ ಮಾಡಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ಮುರಳೀಧರನ್‌ ದಾಳಿಗೆ (25ಕ್ಕೆ 4) ತತ್ತರಿಸಿದ 153ಕ್ಕೆ ಆಲೌಟ್‌ ಆಗಿತ್ತು. ಲಂಕಾ 112 ರನ್ನುಗಳ ಗೆಲುವು ಕಂಡಿತ್ತು. ಇದೇ ಆವೃತ್ತಿಯ ಸೆಮಿಫೈನಲ್​ನಲ್ಲಿಯೂ ಲಂಕಾ ವಿರುದ್ಧವೇ ಕಿವೀಸ್​ ಸೋಲು ಕಂಡಿತ್ತು. ಆದರೆ ಈ ಪಂದ್ಯ ಕೊಲಂಬೊದಲ್ಲಿ ನಡೆದಿತ್ತು.

ಇದನ್ನೂ ಓದಿ IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

ಅಪಾಯಕಾರಿ ಕಿವೀಸ್​

ನ್ಯೂಜಿಲ್ಯಾಂಡ್ ತಂಡ ಪ್ರತಿ ಐಸಿಸಿ ಟೂರ್ನಿಗಳಲ್ಲಿಯೂ ಭಾರತಕ್ಕೆ ಕಾಡುತ್ತಲೇ ಬಂದಿದೆ. ಅದರಲ್ಲೂ ಮಹತ್ವದ ಪಂದ್ಯದಲ್ಲಿ. ಹೌದು ಮೂರೂ ಐಸಿಸಿ ನಾಕೌಟ್‌ ಪಂದ್ಯಗಳಲ್ಲಿ ಭಾರತಕ್ಕೆ ಕಿವೀಸ್​ ಆಘಾತವಿಕ್ಕಿದೆ. 2000ದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌, 2019ರ ವಿಶ್ವಕಪ್‌ ಸೆಮಿಫೈನಲ್‌ ಹಾಗೂ 2021ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತವನ್ನು ಪರಾಭವಗೊಳಿಸಿದೆ. ಈ ಬಾರಿ ಇದು ಸಂಭವಿಸದಿರಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ.

ಇದನ್ನೂ ಓದಿ ವಿಶ್ವಕಪ್​ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್​ ತಂಡದ ಸೆಮಿಫೈನಲ್​ ಸಾಧನೆ ಹೇಗಿದೆ?

ವಿಶ್ವಕಪ್‌ ಮುಖಾಮುಖಿ

ಭಾರತ ಮತ್ತು ನ್ಯೂಜಿಲ್ಯಾಂಡ್​ ಈವರೆಗೆ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 10 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 04 ಪಂದ್ಯಗಳನ್ನು ಗೆದ್ದರೆ, ನ್ಯೂಜಿಲ್ಯಾಂಡ್‌ 05 ಪಂದ್ಯಗಳನ್ನು ಗೆದ್ದಿದ. 01 ಪಂದ್ಯ ರದ್ದುಗೊಂಡಿದೆ. ಭಾರತದ ಒಂದು ಗೆಲುವು ಈ ಬಾರಿಯ ಲೀಗ್​ ಪಂದ್ಯದಲ್ಲಿ ಒಲಿದಿತ್ತು. ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 4 ವಿಕೆಟ್‌ ಜಯ ಸಾಧಿಸಿತ್ತು.

Exit mobile version