ಅಹಮದಾಬಾದ್: ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ಬಾಬರ್ ಪಡೆದ ಬ್ಯಾಟಿಂಗ್ ಆಹ್ವಾನ ಪಡೆದಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi Stadium) ನಡೆಯುತ್ತಿರುವ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಾರಿ ಸಂಖ್ಯೆಯಲ್ಲಿ ಸೇರಿದ್ದಾರೆ.
ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ 3 ಶತಕ ದಾಖಲಾಗಿದೆ. 2003ರಲ್ಲಿ ಸಯೀದ್ ಅನ್ವರ್ 101 ರನ್, 2015ರಲ್ಲಿ ಕೊಹ್ಲಿ 107 ರನ್, 2019 ರಲ್ಲಿ ರೋಹಿತ್ ಶರ್ಮ 140 ರನ್ ಬಾರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ ಮುನ್ನೂರು ಪ್ಲಸ್ ರನ್ ಪೇರಿಸಿದ ಏಕೈಕ ಆಟಗಾರ (313 ರನ್).
ಉಭಯ ತಂಡಗಳು ವಿಶ್ವಕಪ್ ಪಂದ್ಯಗಳಲ್ಲಿ ಭಾರತ 7ಕ್ಕೆ 300 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಇದು 2015 ವಿಶ್ವಕಪ್ ಕೂಟದಲ್ಲಿ ದಾಖಲಾಗಿತ್ತು.
ಭಾರತ ಮತ್ತು ಪಾಕ್ ಮೊದಲ ಬಾರಿಗೆ ವಿಶ್ವ ಕಪ್ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಖಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಈ ಬಾರಿಯೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಳ್ಳಲಿ ಎನ್ನುವುದು ಎಲ್ಲ ಭಾರತೀಯರ ಆಶಯವಾಗಿದೆ.
ರೋಹಿತ್ ಶರ್ಮ ಅವರು ಪಾಕಿಸ್ತಾನ ವಿರುದ್ಧದ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ರೋಹಿತ್ 2019ರಲ್ಲಿ ಮ್ಯಾಚೆಂಸ್ಟರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ 113 ಎಸೆತಗಳಲ್ಲಿ 140 ರನ್ ಬಾರಿಸಿದ್ದರು.