Site icon Vistara News

India vs Pakistan Match Live Updates: ಭಾರತ-ಪಾಕ್​ ಪಂದ್ಯ ಮಳೆಯಿಂದ ರದ್ದು

Rohit Sharma And Babar Azam Ahead Of Asia Cup Match

India vs Pakistan Asia Cup Cricket Match Live Updates In Kannada

ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್‌ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್​ ಗೆದ್ದು ಭಾರತ ಮೊದಲ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Abhilash B C

ಇಶಾನ್​ ಕಿಶನ್​ ಮತ್ತು ಶುಭಮನ್​ ಗಿಲ್​ ಅವರಿಗೆ ಪಾಕಿಸ್ತಾನ ವಿರುದ್ಧ ಇದು ಚೊಚ್ಚಲ ಪಂದ್ಯವಾಗಿದೆ. ಉಭಯ ಆಟಗಾರರು ಇತರ ತಂಡದ ಪರ ಆಡಿದ್ದರೂ ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಕಣಕಿಳಿಯುತ್ತಿದ್ದಾರೆ.

Abhilash B C

ನಿರೀಕ್ಷೆಯಂತೆ ರಾಹುಲ್​ ಅನುಪಸ್ಥಿತಿಯಲ್ಲಿ ಇಶಾನ್​ ಕಿಶನ್​ ಅವರಿಗೆ ಕೀಪಿಂಗ್​ ಹೊಣೆ ನೀಡಲಾಗಿದೆ.

Abhilash B C

ಬೆನ್ನು ನೋವಿನ ಗಾಯದಿಂದಾಗಿ ಚೇತರಿಕೆ ಕಂಡ ಶ್ರೇಯಸ್​ ಅಯ್ಯರ್​ ಅವರು ಈ ಪಂದ್ಯದ ಮೂಲಕ ಟೀಮ್​ ಇಂಡಿಯಾಕ್ಕೆ ಕಮ್​ಬ್ಯಾಕ್​ ಮಾಡಿದರು.

Abhilash B C

ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಬದಲಾಗಿ ಶಾರ್ದೂಲ್​ ಠಾಕೂರ್​ ಆಡುವ ಅವಕಾಶ ಪಡೆದರು

Abhilash B C

ಪಾಕಿಸ್ತಾನ ಆಡುವ ಬಳಗ

ಪಾಕಿಸ್ತಾನ: ಫಖಾರ್​ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್​ ರೌಫ್.

Exit mobile version