ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್ ಗೆದ್ದು ಭಾರತ ಮೊದಲ ಇನಿಂಗ್ಸ್ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಭಾರತ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್(ವಿಕೆಟ್ ಕೀಪರ್).
ಪಾಕಿಸ್ತಾನ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ನೇಪಾಳ ವಿರುದ್ಧ ಆಡಿದ ತಂಡವನ್ನೇ ಕಣಕ್ಕಿಳಿಸಿದೆ.
ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರಿಂದ ಬ್ಯಾಟಿಂಗ್ ಆಯ್ಕೆ
ಈ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಅಫಘಾನಿಸ್ತಾನ ತಂಡದ ಇಬ್ರಾಹಿಂ ಜದ್ರಾನ್ ಹೆಸರಿನಲ್ಲಿದೆ. ಕಳೆದ ವರ್ಷ ಲಂಕಾ ವಿರುದ್ಧ ಅವರು 162 ರನ್ ಗಳಿಸಿದ್ದರು.
ಇಲ್ಲಿನ ಪಿಚ್ ಸಾಮಾನ್ಯವಾಗಿ ಇನಿಂಗ್ಸ್ ಆರಂಭದಲ್ಲಿ ತ್ವರಿತವಾಗಿ ಬೌಲರ್‌ಗಳಿಗೆ ಹೆಚ್ಚಿನ ಅನುಕೂಲ ನೀಡಿತ್ತದೆ. ಅದರಲ್ಲೂ ಸ್ಪಿನ್ ಬೌಲರ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಇದುವರೆಗೆ ನಡೆದ ಪಂದ್ಯಗಳಲ್ಲಿ ಇಲ್ಲಿ ಸ್ಪಿನ್ನರ್ಗಳೇ ಹೆಚ್ಚಿನ ವಿಕೆಟ್ ಪಡೆದಿದ್ದಾರೆ. ಹೀಗಾಗಿ ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಹೆಚ್ಚಿನ ಹಿಡಿತ ಸಾಧಿಸುವ ನಿರೀಕ್ಷೆಯಿದೆ.