Site icon Vistara News

India vs Pakistan Match Live Updates: ಭಾರತ-ಪಾಕ್​ ಪಂದ್ಯ ಮಳೆಯಿಂದ ರದ್ದು

Rohit Sharma And Babar Azam Ahead Of Asia Cup Match

India vs Pakistan Asia Cup Cricket Match Live Updates In Kannada

ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್‌ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್​ ಗೆದ್ದು ಭಾರತ ಮೊದಲ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Abhilash B C

ಮೈದಾನದ ಕವರ್​ಗಳನ್ನು ತೆಗೆಯುತ್ತಿರುವ ಸಿಬ್ಬಂದಿ. ಪಂದ್ಯ ನಡೆಯುವ ಸಾಧ್ಯತೆ.

Abhilash B C

ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ, ಜಸ್​ಪ್ರೀತ್​ ಬುಮ್ರಾ ಮೈದಾನದಲ್ಲಿ ಅಭ್ಯಾಸ ಆರಂಭ

Abhilash B C

ಭಾರತ -ಪಾಕ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಯಂತೆ ಕಾದು ಕುಳಿತ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗುವ ಸಾಧ್ಯತೆ ಅಧಿಕವಾದಂತೆ ತೋರುತ್ತಿದೆ. ಭಾರಿ ಮಳೆಯ ಸೂಚನೆ ಲಭಿಸಿದ ಕಾರನ ಸಂಪೂರ್ಣ ಮೈದಾನಕ್ಕೆ ಟಾರ್ಪಲ್​ ಹಾಕಿ ಮುಚ್ಚಲಾಗಿದೆ.​

B Somashekhar

ಕ್ರೀಡಾಂಗಣದಲ್ಲಿ ಮೋಡ ಕವಿದ ವಾತಾವರಣ

ಮೋಡ ಕವಿದ ವಾತಾವರಣ ಇರುವ ಕಾರಣ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪೆಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್‌ಅನ್ನು ಕವರ್‌ ಮಾಡಲಾಗಿದೆ. ಹಾಗಾಗಿ, ನಿಗದಿತ ಸಮಯಕ್ಕೆ ಟಾಸ್‌ ಆಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

B Somashekhar

ಹವಾಮಾನ ವರದಿ ಹೇಳುವುದೇನು?

ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪೆಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಅಂದರೆ ಮಧ್ಯಾಹ್ನ 3.30ರ ಸುಮಾರಿಗೆ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ ಎಂದು ಹವಾಮಾನ ವರದಿ ತಿಳಿಸಿದೆ. ಹಾಗಾಗಿ, ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿ ಇದೆ ಎದುರಾಗಿದೆ.

Exit mobile version