Site icon Vistara News

Ind vs Pak | ಭಾರತ- ಪಾಕ್‌ ಹಣಾಹಣಿಯಲ್ಲಿ ಇತ್ತಂಡಗಳ ಆಟಗಾರರು ತಲುಪಲಿರುವ ಮೈಲುಗಲ್ಲುಗಳು

Ind vs Pak

ದುಬೈ : ಭಾರತ ಹಾಗೂ ಪಾಕಿಸ್ತಾನ (Ind vs Pak) ತಂಡಗಳ ನಡುವೆ ಆಗಸ್ಟ್‌ ೨೮ರಂದು ಏಷ್ಯಾ ಕಪ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಇತ್ತಂಡಗಳ ಆಟಗಾರರು ಕ್ರಿಕೆಟ್‌ ವೃತ್ತಿಯಲ್ಲಿ ಕೆಲವೊಂದು ಮೈಲುಗಲ್ಲುಗಳನ್ನು ಸ್ಥಾಪಿಸಲಿದ್ದಾರೆ. ಪಾಕಿಸ್ತಾನ ತಂಡ ಪ್ರಮುಖ ಬೌಲರ್‌ ಶಹೀನ್‌ ಅಫ್ರಿದಿಯ ಅಲಭ್ಯತೆಯಲ್ಲಿ ಭಾರತದ ವಿರುದ್ಧದ ಹಣಾಹಣಿಗೆ ಸಜ್ಜಾಗಿದ್ದರೆ, ಭಾರತ ತಂಡವೂ ಜಸ್‌ಪ್ರಿತ್‌ ಬುಮ್ರಾ ಹಾಗೂ ಹರ್ಷಲ್‌ ಪಟೇಲ್‌ ಅವರ ಸೇವೆ ಕಳೆದುಕೊಂಡಿದೆ. ಆದಾಗ್ಯೂ ಇತ್ತಂಡಗಳು ಸಮಬಲ ಹೊಂದಿದ್ದು, ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಏತನ್ಮಧ್ಯೆ, ಭಾನುವಾರದ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಕೆಲವೊಂದು ವಿಶೇಷ ಸಾಧನೆ ಮಾಡಲಿದ್ದಾರೆ. ಅವುಗಳ ಪಟ್ಟಿ ಇಂತಿದೆ.

೧೩ ರನ್‌– ರೋಹಿತ್‌ ಶರ್ಮ ಸದ್ಯ 3487 ಟಿ೨೦ ಅಂತಾರಾಷ್ಟ್ರೀಯ ರನ್‌ಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ ೧೩ ರನ್‌ ಬಾರಿಸಿದರೆ 3500 ರನ್‌ಗಳ ಸಾಧನೆಮಾಡಲಿದ್ದಾರೆ.

೧ ಪಂದ್ಯ– ವಿರಾಟ್‌ ಕೊಹ್ಲಿ ಇದುವರೆಗೆ ೯೯ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಪಾಕ್‌ ವಿರುದ್ಧದ ಪಂದ್ಯದಲ್ಲಿ ೧೦೦ರ ಸಾಧನೆ ಮಾಡಲಿದ್ದಾರೆ.

೨ ಫೋರ್‌– ಪಾಕಿಸ್ತಾನ ತಂಡದ ಫಖರ್‌ ಜಮಾನ್‌ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೪೪೮ ಫೋರ್‌ಗಳನ್ನು ಬಾರಿಸಿದ್ದು, ಎರಡು ಫೋರ್‌ ಬಾರಿಸಿದರೆ ೫೦೦ ಫೋರ್‌ಗಳ ಮೈಲುಗಲ್ಲು ದಾಟಲಿದ್ದಾರೆ.

೧ ಫೋರ್‌– ಕೆ. ಎಲ್‌ ರಾಹುಲ್‌ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ೫೯೯ ಫೋರ್‌ ಬಾರಿಸಿದ್ದು, ಈ ಪಂದ್ಯದಲ್ಲಿ ಒಂದು ಫೋರ್‌ ಬಾರಿಸಿದರೆ ೬೦೦ ಫೋರ್‌ಗಳ ಸರದಾರ ಎನಿಸಿಕೊಳ್ಳಲಿದ್ದಾರೆ.

೪೧ ರನ್‌– ಪಾಕಿಸ್ತಾನ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ 3959 ಅಂತಾರಾಷ್ಟ್ರೀಯ ರನ್‌ಗಳನ್ನು ಬಾರಿಸಿದ್ದು, ೪೧ ರನ್‌ ಗಳಿಸಿದರೆ ೪೦೦೦ ರನ್‌ಗಳ ಮೈಲುಗಲ್ಲು ತಲುಪಲಿದ್ದಾರೆ.

1 ಪಂದ್ಯ- ಪಾಕಿಸ್ತಾನದ ಬೌಲರ್‌ ಹಸನ್‌ ಅಲಿ ಇದುವರೆಗೆ ೪೯ ಪಂದ್ಯಗಳಲ್ಲಿ ಆಡಿದ್ದು, ಭಾನುವಾರದ ಪಂದ್ಯದಲ್ಲಿ ಅವಕಾಶ ಪಡೆದರೆ ೫೦ ಅಂತಾರಾಷ್ಟ್ರೀಯ ಟಿ೨೦ ಪಂದ್ಯಗಳನ್ನು ಆಡಿದಂತಾಗುತ್ತದೆ.

೩ ವಿಕೆಟ್‌– ಯಜ್ವೇಂದ್ರ ಚಹಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೧೯೭ ವಿಕೆಟ್‌ ಕಬಳಿಸಿದ್ದು, ಭಾನುವಾರ ಮೂರು ವಿಕೆಟ್‌ ಪಡೆದರೆ ಅವರು ದ್ವಿಶತಕ ದಾಖಲಿಸಲಿದ್ದಾರೆ.

೨ ಸಿಕ್ಸರ್‌– ಪಾಕಿಸ್ತಾನ ತಂಡದ ಮೊಹಮ್ಮದ್‌ ರಿಜ್ವಾನ್‌ ೪೮ ಟಿ೨೦ ಅಂತಾರಾಷ್ಟ್ರೀಯ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನೆರಡು ಸಿಕ್ಸರ್‌ ಬಾರಿಸಿದರೆ ಅದರ ಸಂಖ್ಯೆ ೫೦ ತಲುಪಲಿದೆ.

೪ ಸಿಕ್ಸರ್‌– ಹಾರ್ದಿಕ್‌ ಪಾಂಡ್ಯ ಇದುವರೆಗೆ ೪೬ ಅಂತಾರಾಷ್ಟ್ರೀಯ ಟಿ೨೦ ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ ೪ ಸಿಕ್ಸರ್‌ ಬಾರಿಸಿದರೆ ೫೦ ಗಡಿ ದಾಟಲಿದ್ದಾರೆ.

೨೮ ರನ್‌– ಬಾಬರ್‌ ಅಜಮ್‌ ಸದ್ಯ 10472 ಅಂತಾರಾಷ್ಟ್ರೀಯ ರನ್‌ಗಳನ್ನ ಬಾರಿಸಿದ್ದು, ೨೮ ರನ್‌ ಗಳಿಸಿದರೆ ೧೫೦೦ರ ಮೈಲು ಗಲ್ಲು ಸ್ಥಾಪನೆಯಾಗಲಿದೆ.

ಇದನ್ನೂ ಓದಿ | IND vs PAK | ಅರಬರ ನಾಡಲ್ಲಿ ಬದ್ಧ ಪ್ರತಿಸ್ಪರ್ಧಿಗಳ ಕದನ, ಹಳೆ ಸೇಡಿಗೆ ಪ್ರತಿಕಾರ ತೀರಿಸುವುದೇ ಭಾರತ?

Exit mobile version