Site icon Vistara News

IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

India vs South Africa, 37th Match

ಕೋಲ್ಕೊತಾ: ಈಗಾಗಲೇ ಸೆಮಿಫೈನಲ್​ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್​ ಹಾಕಿತೇ ಎನ್ನುವುದು ಪಂದ್ಯದ ಕೌತುಕ.

Sukhesha Padibagilu

ದಕ್ಷಿಣ ಆಫ್ರಿಕಾ ತಂಡ ಹೀನಾಯ ಬ್ಯಾಟಿಂಗ್ ಮುಂದುವರಿದಿದೆ. ಜಡೇಜಾ ಎಸೆತಕ್ಕೆ ಡೇವಿಡ್​ ಮಿಲ್ಲರ್​ ಕ್ಲೀನ್​ ಬೌಲ್ಡ್ ಆಗುವ ಮೂಲಕ 6ನೇ ವಿಕೆಟ್​ ಕಳೆದುಕೊಂಡಿದೆ. ರಿವರ್ಸ್ ಸ್ವೀಪ್ ಮಾಡಲು ಮುಂದಾದ ಮಿಲ್ಲರ್ ಔಟ್ ಆಗಿದ್ದಾರೆ. ದ. ಆಫ್ರಿಕಾ ತಂಡ 16.3 ಓವರ್​ಗಳಲ್ಲಿ 6 ವಿಕೆಟ್​ಗೆ 59 ರನ್​ ಬಾರಿಸಿದೆ.

Sukhesha Padibagilu

ಭಾರತ ತಂಡ ಬೆನ್ನು ಬೆನ್ನಿಗೆ ಎರಡು ವಿಕೆಟ್​ ಉರುಳಿಸಿದೆ. ಕ್ಲಾಸೆನ್ ಅವರನ್ನು ಔಟ್​ ಮಾಡಿದ ಬೆನ್ನಲ್ಲೇ 13 ರನ್ ಬಾರಿಸಿ ಕ್ರೀಸ್​ನಲ್ಲಿದ್ದ ವ್ಯಾನ್​ಡೆರ್​ ಡಸ್ಸೆನ್​ ಅವರನ್ನು ಔಟ್​ ಮಾಡಿದ್ದಾರೆ ಮೊಹಮ್ಮದ್ ಶಮಿ. ಶಮಿ ಎಸತಕ್ಕೆ ಅವರು ಎಲ್​ಬಿಡಬ್ಲ್ಯು ಆಗಿ ನಿರ್ಗಮಿಸಿದ್ದಾರೆ. ಅಂಪೈರ್ ಮೊದಲಿಗೆ ಔಟ್ ಕೊಟ್ಟಿರಲಿಲ್ಲ. ಡಿಆರ್​ಎಸ್​ನಲ್ಲಿ ಔಟ್ ಎಂಬುದು ಸಾಬೀತಾಯಿತು.

Sukhesha Padibagilu

ಸ್ಪಿನ್ನರ್ ರವೀಂದ್ರ ಜಡೇಜಾ ಅವರ ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್​ ಹೆನ್ರಿಚ್ ಕ್ಲಾಸೆನ್ ಔಟಾಗಿದ್ದಾರೆ. ಅವರು ಒಂದು ರನ್ ಬಾರಿಸಿ ಪೆವಿಲಿಯನ್​ಗೆ ಮರಳಿದ್ದಾರೆ. ಜಡೇಜಾ ಅವರ ಸ್ಪಿನ್​ ಬೌಲಿಂಗ್​ಗೆ ಸ್ವೀಪ್ ಮಾಡಲು ಹೋದ ಕ್ಲಾಸೆನ್​ ಎಲ್​ಬಿಡಬ್ಲ್ಯು ಔಟ್​ ಆದರು. ಫೀಲ್ಡ್​ ಅಂಪೈರ್​ ಮೊದಲಿಗೆ ಔಟ್​ ಕೊಟ್ಟಿರಲಿಲ್ಲ. ರೋಹಿತ್ ಶರ್ಮಾ ರಿವ್ಯೂ ಅವಕಾಶ ಪಡೆದು ಕ್ಲಾಸೆನ್ ಅವರನ್ನು ಹೊರದಬ್ಬಿದರು.

Sukhesha Padibagilu

1ರಿಂದ 10 ಓವರ್​​ಗಳ ಮೊದಲ ಪವರ್ ಪ್ಲೇನಲ್ಲಿ 35 ರನ್ ಬಾರಿಸಿದ ದಕ್ಷಿಣ ಆಫ್ರಿಕಾ. ಈ ವೇಳೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ.

Sukhesha Padibagilu

ವೇಗಿ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಅವರು ಅಪಾಯಕಾರಿ ಬ್ಯಾಟರ್​ ಏಡೆನ್ ಮಾರ್ಕ್ರಮ್ ಅವರನ್ನು ಔಟ್​ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟರ್​ 9 ರನ್ ಬಾರಿಸಿ ಪೆವಿಲಿಯನ್​ಗೆ ಮರಳಿದ್ದಾರೆ. 35 ರನ್​ಗೆ ಮೂರು ವಿಕೆಟ್ ನಷ್ಟ ಮಾಡಿಕೊಂಡ ದ. ಆಫ್ರಿಕಾ. ಗೆಲುವಿಗೆ ಇನ್ನೂ ಬೇಕು 292 ರನ್​.

Exit mobile version