ಕೋಲ್ಕೊತಾ: ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್ ಹಾಕಿತೇ ಎನ್ನುವುದು ಪಂದ್ಯದ ಕೌತುಕ.
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ 11 ರನ್ ಮಾಡಿದ ಔಟಾಗಿದ್ದಾರೆ. ಅವರು 19 ಎಸೆತಗಳನ್ನು ಎದುರಿಸಿದ್ದರು. ರವೀಂದ್ರ ಜಡೇಜಾ ಅವರ ಮಾರಕ ಸ್ಪಿನ್ಗೆ ಅವರು ಕ್ಲೀನ್ ಬೌಲ್ಡ್ ಆದರು. ದಕ್ಷಿಣ ಆಫ್ರಿಕಾ ತಂಡವೀಗ 8.8 ಓವರ್ಗಳಲ್ಲಿ 22 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ ತಮ್ಮ ಮೊದಲ ಸ್ಪೆಲ್ನಲ್ಲಿಯೇ ಜಾದೂ ಮಾಡಿದ್ದಾರೆ ಹಾಗೂ ನಾಯಕನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಬೃಹತ್ ಗುರಿಯನ್ನು ನೀಡಿದ್ದ ಭಾರತ ತಂಡಕ್ಕೆ ಮೊದಲ ಯಶಸ್ಸು. ತಮ್ಮ ಮೊದಲ ಓವರ್ನಲ್ಲಿಯೇ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್.
5 ರನ್ ಬಾರಿಸಿದ್ದ ಕ್ವಿಂಟನ್ ಡಿ ಕಾಕ್ ಮೊಹಮ್ಮದ್ ಸಿರಾಜ್ ಎಸೆತಕ್ಕೆ ಔಟಾಗಿದ್ದಾರೆ.
ಐತಿಹಾಸಿಕ ಕೋಲ್ಕೊತಾದ ಈಡನ್ ಗಾರ್ಡನ್ಸ್ನ ಸ್ಟೇಡಿಯಮ್ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್ ಕ್ರಿಕೆಟ್ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ವಿಶ್ವ ಕ್ರಿಕೆಟ್ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.