ಕೋಲ್ಕೊತಾ: ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್ ಹಾಕಿತೇ ಎನ್ನುವುದು ಪಂದ್ಯದ ಕೌತುಕ.
ಕೂದಲೆಳೆ ಅಂತರದಲ್ಲಿ ಕ್ಯಾಚ್ ಔಟ್ನಿಂದ ಪಾರಾದ ವಿರಾಟ್ ಕೊಹ್ಲಿ
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್
24 ಎಸೆತಕ್ಕೆ 23 ರನ್ ಗಳಿಸಿ ವಿಕೆಟ್ ಕೈಚೆಲ್ಲಿದ ಶುಭಮನ್ ಗಿಲ್
10ರ ಸರಾಸರಿಯಲ್ಲಿ ರನ್ ಗಳಿಸುತ್ತಿರುವ ಟೀಮ್ ಇಂಡಿಯಾ. 7 ಓವರ್ಗಳಲ್ಲಿ 72 ರನ್ ಗಳಿಸಿದೆ.
ವಿಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಗಳಿಸುತ್ತಿದ್ದ ರೋಹಿತ್ ಶರ್ಮ ಅವರು ರಬಾಡ ಓವರ್ನಲ್ಲಿ ವಿಕೆಟ್ ಕೈಚೆಲ್ಲಿದರು. ರೋಹಿತ್ 24 ಎಸೆತಗಳಿಂದ 40 ರನ್ ಗಳಿಸಿದರು.