ಕೋಲ್ಕೊತಾ: ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್ ಹಾಕಿತೇ ಎನ್ನುವುದು ಪಂದ್ಯದ ಕೌತುಕ.
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್‌ನ(Eden Gardens) ಪಿಚ್ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬಿನಿ ಸಮಸ್ಯೆ ಕಾಡಲಿದೆ. ಇದು ಬೌಲರ್ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
India Vs South Africa ICC Men's World Cup Match Who Will Win This Match Tonight 🤩🤩😍😍… pic.twitter.com/roq8c7RHWk
— Anuj Sharma (@anuj34752) November 5, 2023
ಹೀಗೊಂದು ಕಾಕತಾಳಿಯ ಲೆಕ್ಕಾಚಾರ
ಭಾರತ ತಂಡ 2011ರ ವಿಶ್ವಕಪ್ ಟೂರ್ನಿಯಲ್ಲಿಯೂ ಲೀಗ್ನಲ್ಲಿ ಅಜೇಯ ದಾಖಲೆ ಮುಂದುವರಿಸಿ ಒಂದು ಸೋಲು ಮಾತ್ರ ಕಂಡಿತ್ತು. ಇದು ದಕ್ಷಿಣ ಆಫ್ರಿಕಾ ವಿರುದ್ಧ. ಇದೀಗ ಈ ಆವೃತ್ತಿಯ ವಿಶ್ವಕಪ್ಕಪ್ ಟೂರ್ನಿಯಲ್ಲೂ ಭಾರತ ಇದುವರೆಗೆ ಆಡಿದ ಎಲ್ಲ 7 ಪಂದ್ಯಗಳನ್ನು ಗೆದ್ದಿದೆ. 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರಾಗಿದೆ. 2011ರಂತೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತೇ ಅಥವಾ ಆ ಸೋಲಿಗೆ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಸೋಲು ಕಂಡರೆ ಈ ಕಾಕತಾಳಿಯ ಲೆಕ್ಕಾಚಾರ ಮರುಕಳಿಸಿದಂತಾಗುತ್ತದೆ.
ವಿಶ್ವಕಪ್ ಮುಖಾಮುಖಿ
ಉಭಯ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಬಲಾಬಲದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. 5 ಬಾರಿ ಮುಖಾಮುಖಿಯಾಗಿ ಮೂರಲ್ಲಿ ಗೆಲುವು ಸಾಧಿಸಿದೆ. ಭಾರತ ಗೆದ್ದಿದ್ದು 2 ಪಂದ್ಯ ಮಾತ್ರ ಅದು ಕೂಡ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ. 2015 ಮತ್ತು ಕಳೆದ 2019ರ ವಿಶ್ವಕಪ್ನಲ್ಲಿ. ಇದಕ್ಕೂ ಮುನ್ನ ಆಡಿದ ಮೂರೂ ಪಂದ್ಯಗಳಲ್ಲಿಯೂ ಭಾರತ ಹೀನಾಯ ಸೋಲು ಕಂಡಿತ್ತು. ಇತ್ತಂಡಗಳು ಮೊದಲ ವಿಶ್ವಕಪ್ ಪಂದ್ಯ ಆಡಿದ್ದು 1992ರಲ್ಲಿ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 6 ವಿಕೆಟ್ಗಳಿಂದ ಗೆದ್ದಿತ್ತು
ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೂ ಉಭಯ ತಂಡಗಳಿಗೆ ಯಾವುದೇ ನಷ್ಟ ಸಂಭವಿಸದು. ಕಾರಣ ಈಗಾಗಲೇ ಇತ್ತಂಡಗಳು ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಶನಿವಾರ ಪಾಕಿಸ್ತಾನ ವಿರುದ್ಧ ಕಿವೀಸ್ ಸೋಲು ಕಂಡ ಕಾರಣದಿಂದ ಸೆಮಿ ಟಿಕೆಟ್ ಪಡೆಯಿತು.
ಮೋಡ ಕವಿದ ವಾತಾವರಣ
ಕೋಲ್ಕೋತಾದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು ರಾತ್ರಿಯ ವೇಳೆ ಶೇ 31ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಒಂದು ಇನಿಂಗ್ಸ್ ನಡೆದರೂ ಇನ್ನೊಂದು ಇನಿಂಗ್ಸ್ ನಡೆಯುವುದು ಅನುಮಾನ ಎನ್ನಲಾಗಿದೆ. ಅಲ್ಲದೆ ಇಲ್ಲಿ ಮಳೆ ಬಂದರೆ ಆ ಬಳಿಕ ಮಂಜಿನ ಕಾಟ ತಪ್ಪಿದ್ದಲ್ಲ. ಹೀಗಾಗಿ ಮಳೆ ಬಂದರೆ ಪಂದ್ಯ ರದ್ದಾಗುವುದು ಖಚಿತ.