Site icon Vistara News

India vs Sri Lanka Final: ಫೈನಲ್​ ಪಂದ್ಯಕ್ಕೆ ಸಂಭಾವ್ಯ ತಂಡ; ಪಿಚ್​ ರಿಪೋರ್ಟ್​

India vs Sri Lanka, Final - Live

ಕೊಲಂಬೊ: ಮಳೆಯಿಂದಾಗಿ ಅಡಚಣೆಗೊಂಡ ಏಷ್ಯಾಕಪ್(Asia Cup 2023)​ ಟೂರ್ನಿ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯುವ ಫೈನಲ್(India vs Sri Lanka Final)​ ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್​ ಶ್ರೀಲಂಕಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಪಂದ್ಯದ ಪಿಚ್​ ರಿಪೋರ್ಟ್(pitch report)​ ಮತ್ತು ಸಂಭಾವ್ಯ ತಂಡದ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಆರ್. ಪ್ರೇಮದಾಸ ಕ್ರೀಡಾಂಗಣದ(R.Premadasa Stadium) ಪಿಚ್ ಸಂಪೂರ್ಣವಾಗಿ​ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಅಗತ್ಯವಿಲ್ಲ. ಇಲ್ಲಿ ಸ್ಪಿನ್ನರ್​ಗಳೇ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಲಂಕಾ ಸ್ಪಿನ್ನರ್​ಗಳು ಎಲ್ಲ ಹತ್ತು ವಿಕೆಟ್​ ಕಿತ್ತು ಪ್ರಾಬಲ್ಯ ಸಾಧಿಸಿದ್ದು, ಕುಲ್​ದೀಪ್​ ಯಾದವ್​ ಇಲ್ಲಿ ಆಡಿದ ಕಳೆದ 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್​ ಕೆಡವಿದ್ದು, ದುನಿತ್‌ ವೆಲ್ಲಲಗೆ ಭಾರತ ವಿರುದ್ಧ 40 ರನ್ನಿಗೆ 5 ವಿಕೆಟ್‌ ಉರುಳಿಸಿ ಮೆರೆದಾಡಿದ್ದು ಇದಕ್ಕೆಲ್ಲ ಉತ್ತಮ ನಿದರ್ಶನ. ಹೀಗಾಗಿ ಈ ಪಂದ್ಯದಲ್ಲಿಯೂ ಸ್ಪಿನ್ನರ್​ಗಳು ಹಿಡಿತ ಸಾಧಿಸಿದರೆ ಅಚ್ಚರಿಯಿಲ್ಲ. ಇಲ್ಲಿನ ಬೌಂಡರಿಗಳು ವಿಶೇಷವಾಗಿ ವಿಸ್ತಾರವಾಗಿಲ್ಲ, ಮತ್ತು ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದ್ದು ಬ್ಯಾಟಿಂಗ್ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಭಾರತ ತಂಡದಲ್ಲಿ ಮತ್ತೆ 5 ಬದಲಾವಣೆ!

ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯಕ್ಕೆ 5 ಬದಲಾವಣೆ ಮಾಡಿದ್ದ ಭಾರತ ತಂಡ ಈ ಪಂದ್ಯಕ್ಕೆ ಮತ್ತೆ ಬದಲಾವಣೆ ಮಾಡಲಿದೆ. ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ, ಉಪನಾಯಕ ಹಾರ್ದಿಕ್​ ಪಾಂಡ್ಯ, ವೇಗಿಗಳಾದ ಜಸ್​ಪ್ರೀತ್​ ಬುಮ್ರಾ, ಮೊಮ್ಮದ್​ ಸಿರಾಜ್​ ಮತ್ತು ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಆಡಿದ ಆಟಗಾರರು ಜಾಗ ಬಿಡಬೇಕಿದೆ.

ಶೇ.90 ರಷ್ಟು ಮಳೆ

ಕೊಲಂಬೊದಲ್ಲಿ ಫೈನಲ್​ ಪಂದ್ಯ ನಡೆಯುವ ಭಾನುವಾರ ಶೇ.90 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ. ಈಗಾಗಲೇ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಅದರಂತೆ ಸೋಮವಾರ ಪಂದ್ಯ ನಡೆಯಲಿದೆ.

ಇದನ್ನೂ ಓದಿ Asia Cup 2023 Final: ಲಂಕಾ-ಭಾರತ ಫೈನಲ್​ ಪಂದ್ಯಕ್ಕೆ ಮಳೆ ಭೀತಿ; ಮೀಸಲು ದಿನ ಇದೆಯೇ?

ಸಂಭಾವ್ಯ ತಂಡ

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ,,ಕೆ.ಎಲ್​ ರಾಹುಲ್​(ವಿಕೆಟ್​ ಕೀಪರ್​),ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಶಾರ್ದೂಲ್​ ಠಾಕೂರ್​, ಇಶಾನ್​ ಕಿಶನ್​.

ಶ್ರೀಲಂಕಾ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ಮಹೀಶ್ ತೀಕ್ಷಣ.

Exit mobile version